ಸರ್ಕಾರಿ ಗೌರವದೊಂದಿಗೆ ಕಮಾಂಡೋ ಸತೀಶ್ ಅಂತ್ಯಕ್ರಿಯೆ
ಕ.ಪ್ರ. ವಾರ್ತೆ, ಸೊರಬ, ಏ.1
ಇತ್ತೀಚೆಗೆ ಪಿಸ್ತೂಲಿನಿಂದ ಗುಂಡು ತಗುಲಿ ಮೃತರಾದ ಬೆಂಗಳೂರು ಗರುಡಾ ಪಡೆಯ ಕಮಾಂಡೋ ಕೆ.ಎಸ್. ಸತೀಶ್ (28) ಅವರ ಅಂತ್ಯಕ್ರಿಯೆ ತಾಲೂಕಿನ ಹುಟ್ಟೂರು ಮುಟಗುಪ್ಪೆಯಲ್ಲಿ ಭಾನುವಾರ ಸಂಜೆ ಸಕಲ ಸರ್ಕಾರಿ ಗೌರವದೊಂದಿಗೆ ನಡೆಯಿತು.
ಮುಟುಗುಪ್ಪೆ ಗ್ರಾಮದ ಸುಶೀಲಮ್ಮ, ದಿ. ಕರ್ಕಿ ಸಿದ್ಧಪ್ಪ ದಂಪತಿಗಳ 3ನೇ ಮಗನಾದ ಅವರು ಬಡತನದಿಂದಲೇ ಬೆಳೆದು 2008ರ ವೇಳೆ ಒಬ್ಬ ಸಾಮಾನ್ಯ ಪೊಲೀಸ್ ಪೇದೆಯಾಗಿ ಕೆಲಸಕ್ಕೆ ಸೇರಿದ್ದರು. ನಂತರ 2010ರಲ್ಲಿ ಗರುಡ ಫೋರ್ಸ್‌ಲ್ಲಿ ಆಂತರಿಕ ಭದ್ರತಾ ವಿಭಾಗದ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದರು.
ಸಾರ್ವಜನಿಕ ದರ್ಶನಕ್ಕೆ ಇವರ ಪಾರ್ಥಿವ ಶರೀರವನ್ನು ಗ್ರಾಮದಲ್ಲಿ ಇಡಲಾಗಿದ್ದು, ಇವರ ಇಳಿ ವಯಸ್ಸಿನ ಸಾವು ಕಂಡ ವೃದ್ಧ ತಾಯಿಯ ರೋಧನ ಮುಗಿಲು ಮುಟ್ಟಿದ್ದು, ಕುಟುಂಬ ಹಾಗೂ ಅವರ ಆಪ್ತೇಷ್ಟರು ಆಗಮಿಸಿ, ಅಪಾರ ಕಂಬನಿ ಮಿಡಿದರು.
ಕಮಾಂಡೋ ಮೇಜರ್ ಜನರಲ್ ಅರ್ಜುನ್ ಕೆ. ಮುತ್ತಪ್ಪ ಹಾಗೂ ಸ್ಥಳೀಯ ಪೊಲೀಸರ ನೇತೃತ್ವದಲ್ಲಿ ಇಲ್ಲಿನ ಶಾಂತಿಧಾಮದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಶಿಕಾರಿಪುರ ಡಿವೈಎಸ್ಪಿ ಮಂಜುನಾಥ್, ಸೊರಬ ಸಿಪಿಐ ಎನ್.ಎಫ್. ಲಿಂಗದಾಳ್, ಅಪರಾಧ ವಿಭಾಗದ ಪಿಎಸ್‌ಐ ರಾಜು, ಮುಟುಗುಪ್ಪೆ ಹಾಗೂ ಸುತ್ತಮುತ್ತಲ ಗ್ರಾಮಸ್ಥರನೇಕರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

