ಬಿ. ಚಂದ್ರೇಗೌಡರ ನಾಟಕೋತ್ಸವ
ಕ.ಪ್ರ ವಾರ್ತೆ, ಶಿವಮೊಗ್ಗ, ಏ.5
ಮಹಿಳೆಯರನ್ನು ರಂಗಭೂಮಿಯಲ್ಲಿ ಪರಿಚಯಿಸುವುದರಿಂದ ಕಿರುತೆರೆ ಧಾರವಾಹಿಗಳಿಂದ ದೂರವಿಡಬಹುದು ಎಂದು ಚಲನಚಿತ್ರ ನಿರ್ದೇಶಕ ನಾಗತೀಹಳ್ಳಿ ಚಂದ್ರಶೇಖರ್ ಅಭಿಪ್ರಾಯಪಟ್ಟರು.
ಹೊಂಗಿರಣ ಸಂಸ್ಥೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶನಾಲಯ ಆಶ್ರಯದಲ್ಲಿ ಶುಕ್ರವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ಬಿ. ಚಂದ್ರೇಗೌಡರ ನಾಟಕೋತ್ಸವದಲ್ಲಿ ಮಾತನಾಡಿದ ಅವರು, ಪ್ರಸ್ತುತ ಕಿರುತೆರೆಯ ಧಾರವಾಹಿಗಳು ಮಹಿಳೆಯರನ್ನು ದಿಕ್ಕು ತಪ್ಪಿಸುವ ಕೆಲಸ ಮಾಡುತ್ತಿವೆ ಎಂದೆನಿಸುತ್ತಿದೆ. ಆದ್ದರಿಂದ ಮಹಿಳೆಯರು ರಂಗಭೂಮಿಯಲ್ಲಿ ಹೆಚ್ಚಾಗಿ ತೊಡಗಿಸಿಕೊಳ್ಳುವುದು ಸೂಕ್ತ ಎಂದರು.
ರಂಗಭೂಮಿ ಹಳ್ಳಿಗಾಡಿನ ಆಸ್ತಿ. ಕಿರುತೆರೆ ಮತ್ತು ಸಿನಿಮಾಗಳ ನಡುವೆ ವ್ಯವಹಾರಿಕ ಸಂಬಂಧ ಇದೆ. ಆದರೆ, ರಂಗಭೂಮಿಯಲ್ಲಿ ಯಾವುದೇ ವ್ಯವಹಾರಿಕ ಸಂಬಂಧವಿರುವುದಿಲ್ಲ. ಇಲ್ಲಿ 4 ನಾಲ್ಕು ಕಲಾವಿದರಿದ್ದರೆ ಸಾಕು ಉತ್ತಮ ನಾಟಕ ಪ್ರದರ್ಶನ ನೀಡಬಹುದು. ಸಿನಿಮಾದಲ್ಲಿ ಈ ರೀತಿ ನಡೆಯುವುದಿಲ್ಲ ಎಂದರು. ಪ್ರಜಾಪ್ರಭುತ್ವದ ಬಗ್ಗೆ ನನಗೆ ಅಪಾರ ಗೌರವವಿದೆ. ಆದರೆ, ಪ್ರಸ್ತುತ ರಾಜಕೀಯವೇ ಒಂದು ನಾಟಕ ರಂಗ. ಅಲ್ಲದೇ
ರಂಗಾಯಣ ಸೇರಿದಂತೆ ಮತ್ತಿತರ ರಂಗಭೂಮಿ ಸಂಸ್ಥೆಗಳು ಗ್ರಾಮೀಣ ಪ್ರದೇಶಗಳಲ್ಲಿ ವಿಸ್ತರಿಸುತ್ತಿರುವುದು ಆರೋಗ್ಯಕರ ಬೆಳೆವಣಿಗೆಯಾಗಿದೆ. ಇದ್ದರಿಂದ ನಾಟಕರಂಗದ ವ್ಯಾಪ್ತಿ ಹೆಚ್ಚಾಗುತ್ತದೆ ಎಂದರು. ರಂಗ ಪ್ರಯೋಗ ಶಾಲೆಯ ಪ್ರಾಂಶುಪಾಲ ನಟರಾಜ್ ಹೊನ್ನವಳ್ಳಿ ಮಾತನಾಡಿ, ಸಿನಿಮಾ, ರಂಗಭೂಮಿಯ ಮುಖ್ಯ ನಿರ್ದೇಶಕರು ಅಧಿಕಾರದಿಂದಾಚೆಗೆ ನೋಡುವುದನ್ನು ಕಲಿತುಕೊಂಡರೆ ಹೊಸ ನಾಟಕ, ಕಥೆಗಳನ್ನು ಸೃಷ್ಟಿಸಬಹುದು ಎಂದರು. ಕಾರ್ಯಕ್ರಮದಲ್ಲಿ ರಂಗ ನಿರ್ದೇಶಕ ಡಾ. ಸಾಸ್ವೆಹಳ್ಳಿ ಸತೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ಹರಿಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

