ಶಿವಮೊಗ್ಗ

ಸಿ.ಟಿ ರವಿ ಎದುರಿಸುವ ಶಕ್ತಿ ನನ್ನಿಂದ ಮಾತ್ರ ಸಾಧ್ಯ: ಧರ್ಮೇಗೌಡ

Published On :

ಸಖರಾಯಪಟ್ಟಣ: ಬಿಜೆಪಿ ಅಭ್ಯರ್ಥಿಯನ್ನು ಚುನಾವಣೆಯಲ್ಲಿ ಸಮರ್ಥವಾಗಿ ಎದುರಿಸುವ ಶಕ್ತಿ ನನ್ನಿಂದ ಮಾತ್ರ ಸಾಧ್ಯ. ಕಾಂಗ್ರೆಸ್ ಅಭ್ಯರ್ಥಿ 3ನೇ ಸ್ಥಾನಕ್ಕೆ ತೃಪ್ತಿ ಪಡಬೇಕಿದೆ ಎಂದು ಮಾಜಿ ಶಾಸಕ ಎಸ್.ಎಲ್. ಧರ್ಮೇಗೌಡ ಭವಿಷ್ಯ ನುಡಿದಿದ್ದಾರೆ.  
ಶನಿವಾರ ಜೆಡಿಎಸ್ ಚುನಾವಣಾ ಪ್ರಚಾರಕ್ಕೆ ಚಾಲನೆ ನೀಡಿ ಮಾತನಾಡಿ, ರವಿಯವರು ಶಾಸಕರಾಗಿದ್ದಾಗಿನಿಂದಲೂ ಮಾಡಿರುವ ಭ್ರಷ್ಟಾಚಾರವನ್ನು ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದು ಜೆಡಿಎಸ್ ಮಾತ್ರ. ಕಾಂಗ್ರೆಸ್ ಅಭ್ಯರ್ಥಿಯ ಮನೆಯಲ್ಲಿ ಈಗಾಗಲೆ ವಿಧಾನಪರಿಷತ್ ಸದಸ್ಯರಿದ್ದಾರೆ. ಅವರ ಅಧಿಕಾರವಧಿಯಲ್ಲಿ ಮಾಡಿದ ಸಾಧನೆಯಾದರು ಏನು ಎಂದು ಜನರಿಗೆ ಹೇಳಬೇಕು. ಬಡಾಯಿ ಕೊಚ್ಚಿಕೊಳ್ಳುತ್ತಾ ತಲೆ ಕೆಳಗೆ ಮಾಡಿ ಲಾಗ ಹಾಕಿದರೂ ಕಾಂಗ್ರೆಸ್‌ಗೆ ಇಲ್ಲಿ ಮೂರನೇ ಸ್ಥಾನ ಬರುವುದು ನಿಶ್ಚಿತ ಎಂದರು.
5 ಪ್ರಕರಣ ದಾಖಲು: ರವಿ ತಾವೇ ಬುದ್ದಿವಂತ ಎಂದು ತಿಳಿದುಕೊಂಡು ಸಾಮರಸ್ಯ ಕಾಪಾಡುವುದಾಗಿ ಹೇಳಿದ್ದಾರೆ. ರಾಜ್ಯದಲ್ಲಿ ಅತ್ಯಂತ ಪವಿತ್ರ ಸ್ಥಾನದಲ್ಲೊಂದು ಸಿರಿಗೆರೆ ಸ್ವಾಮಿಗಳ ಬಳಿ ಕಾಲಿಗೆ ಬಿದ್ದು ಚುನಾವಣೆಯಲ್ಲಿ ಅಕ್ರಮವೆಸಗುವುದಿಲ್ಲ ಎಂದು ಶಪಥ ಮಾಡಿ ನಿತ್ಯ ನೀತಿ ಸಂಹಿತೆ ಉಲಂಘಿಸುತ್ತಾ ಇಲ್ಲಿವರೆಗೆ 5 ಪ್ರಕರಣ ದಾಖಲಿಸಿಕೊಂಡಿದ್ದಾರೆ. ಗಾಜಿನ ಮನೆಯಲ್ಲಿ ಕುಳಿತು ಎದುರು ಮನೆಗೆ ಕಲ್ಲು ಬೀಸುತ್ತಿದ್ದಾರೆ. ಜನರನ್ನು ಹಣ, ಹೆಂಡದ ಆಸೆಗಳ  ಮೂಲಕ ದಿಕ್ಕು ತಪ್ಪಿಸಬಹುದೆಂಬ ಭ್ರಮೆಯಲ್ಲಿದ್ದಾರೆ ಎಂದು ಹೇಳಿದರು. ಭಗವಂತ ಕೃಪೆ ತೋರಿದರೆ ಈ ಭಾಗದ ಜನರ ಮುಖ್ಯ ಸಮಸ್ಯೆಯಾದ ಕುಡಿವ ನೀರಿನ ಬವಣೆ ನೀಗಿಸಲು  ಐಯ್ಯನಕೆರೆ, ಮದಗದಕೆರೆಗೆ ಹೆಬ್ಬೆ ಜಲಪಾತದಿಂದ ನೀರು ಹರಿಸುವ ಗುರಿ ಹೊಂದಲಾಗಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.