ಶಿವಮೊಗ್ಗ

ಪೊಲೀಸ್ ಪೇದೆ ನೇಣಿಗೆ ಶರಣು

Published On :

ಕ.ಪ್ರ.ವಾರ್ತೆ, ಸೊರಬ, ಮಾ.8
ಪೊಲೀಸ್ ಪೇದೆಯೊಬ್ಬ ನೇಣಿಗೆ ಶರಣಾದ ಘಟನೆ ಆನವಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಚಿಕ್ಕ ಇಡಗೋಡು ಗ್ರಾಮದ ಸಮೀಪ ಸೋಮವಾರ ನಡೆದಿದೆ.
ಹಿರೇಕೆರೂರು ತಾಲೂಕಿನ ಹಂಸಬಾವಿ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಗಣೇಶ್ ಆರ್. ಮಡ್ಲೂರ್ (32) ಮೃತಪಟ್ಟವರು.
ಮೂಲತಃ ಹಾನಗಲ್ ತಾಲೂಕಿನ ಬ್ಯಾತನಾಳ್ ಗ್ರಾಮದವರಾಗಿದ್ದ ಅವರು 2003ರಲ್ಲಿ ಸೇವೆಗೆ ಸೇರಿದ್ದರು. ಪತ್ನಿ ಹಾಗೂ ಅವಳಿ ಮಕ್ಕಳಿರುವ ಅವರು ಅನಾರೋಗ್ಯ ನಿಮಿತ್ತ ಒಂದು ತಿಂಗಳ ರಜೆಯಲ್ಲಿದ್ದರು. ಭಾನುವಾರ ಸಂಜೆ ಚಿಕ್ಕ ಇಡಗೋಡು ಗ್ರಾಮದ ಸಮೀಪ ಕಂಡಿದ್ದ ಇವರು ಸೋಮವಾರ ಬೆಳಗ್ಗೆ ಮರವೊಂದಕ್ಕೆ ನೇಣು ಬಿಗಿದುಕೊಂಡು ಸಾವನ್ನಪ್ಪಿರುವುದು ಕಂಡುಬಂದಿದೆ. ರಾತ್ರಿ ಘಟನೆ ಸಂಭವಿಸಿರಬಹುದು ಎನ್ನಲಾಗಿದ್ದು, ಸಾವಿನ ಕಾರಣ ತಿಳಿದು ಬಂದಿಲ್ಲ. ಆನವಟ್ಟಿ ಠಾಣಾಧಿಕಾರಿ ಅಂಬಾರಾಯ್, ಸಿಬ್ಬಂದಿ ಸ್ಥಳಕ್ಕೆ ತೆರಳಿ ತನಿಖೆ ಕೈಗೊಂಡಿದ್ದಾರೆ.
ಅಪಘಾತ: ಸಾವು
ಸೊರಬ: ಪಟ್ಟಣದ ಸಮೀಪವಿರುವ ಗುಂಡಶೆಟ್ಟಿಕೊಪ್ಪ ಗ್ರಾಮದ ಹುಲ್ಲಕುಮ್ರಿ ಬಳಿ ನಡೆದ ರಸ್ತೆ ಅಪಘಾತದಲ್ಲಿ ವ್ಯಕ್ತಿಯೊಬ್ಬ ಮೃತಪಟ್ಟಿದ್ದು, ಇಬ್ಬರಿಗೆ ತೀವ್ರ ಗಾಯಗಳಾಗಿವೆ.
ಹೆಚ್ಚೆ ಹೊಸಕೊಪ್ಪ ಗ್ರಾಮದ ಅಣ್ಣಪ್ಪ (30) ಮೃತ ವ್ಯಕ್ತಿ. ಗಾಯಗೊಂಡವರನ್ನು ಅದೇ ಗ್ರಾಮದ ಲೋಕೇಶ್ ಮತ್ತು ಪ್ರಹ್ಲಾದ ಎಂದು ತಿಳಿದು ಬಂದಿದೆ.  
ಭಾನುವಾರ ಸಂಜೆ ಸೊರಬದಿಂದ ತಮ್ಮ ಗ್ರಾಮಕ್ಕೆ ತೆರಳುವಾಗ ಬೈಕ್‌ನಲ್ಲಿ ಬರುತ್ತಿದ್ದ ಮೂವರಲ್ಲಿ ಒಬ್ಬರ ಕೈ ಎದುರಿನಿಂದ ಬಂದ ಬಸ್‌ಗೆ ತಾಕಿದ ಪರಿಣಾಮ ಘಟನೆ ಸಂಭವಿಸಿದೆ. ಬೈಕ್ ರಸ್ತೆ ಬದಿಯ ಮರಕ್ಕೆ ಅಪ್ಪಳಿಸಿದ್ದು, ತಲೆಗೆ ತೀವ್ರ ಪೆಟ್ಟುಬಿದ್ದಿದ್ದ ಅಣ್ಣಪ್ಪ ಆಸ್ಪತ್ರೆಗೆ ಸಾಗಿಸುವಾಗ ಮೃತಪಟ್ಟಿದ್ದಾರೆ. ಬೈಕ್‌ನ ಅತಿಯಾದ ವೇಗವೇ ಘಟನೆಗೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಸೊರಬ ಠಾಣೆಯಲ್ಲಿ ದೂರು ದಾಖಲಾಗಿದೆ.
ಅಕ್ರಮ ಮದ್ಯ ವಶ
ಸೊರಬ: ತಾಲೂಕಿನ ಕುಪ್ಪಗಡ್ಡೆ ಗ್ರಾಮದಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ ಸುಮಾರು ರು.  8,500 ಮೌಲ್ಯದ ಮದ್ಯವನ್ನು ಆನವಟ್ಟಿ ಪೊಲೀಸರು ವಶಪಡಿಸಿಕೊಂಡಿದ್ದು, ಮೃತ್ಯುಂಜಯ ಎಂಬುವನನ್ನು ಬಂಧಿಸಿದ್ದಾರೆ.
 ಖಚಿತ ಮಾಹಿತಿ ಮೇರೆಗೆ ಪಿಎಸ್‌ಐ ಅಂಬಾರಾಯ್ ನೇತೃತ್ವದಲ್ಲಿ ಸಿಬ್ಬಂದಿ ದಾಳಿ ನಡೆಸಿದ್ದು, ವಾಹನದಲ್ಲಿ ಮೂರು ಕೇಸ್ ಕ್ಯಾಪ್ಟನ್ ಮಾರ್ಕಿನ ವಿಸ್ಕಿ ಹಾಗೂ ಎರಡು ಕೇಸ್ ನಾಕೌಟ್ ಬಿಯರ್ ಬಾಟಲಿಗಳನ್ನು  ವಶಕ್ಕೆ ತೆಗೆದುಕೊಂಡು ದೂರು ದಾಖಲಿಸಲಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.