ಟಿಕೆಟ್ ಸಿಗದಂತೆ ವಕಾಲತ್ತು ವಹಿಸಿದ್ದ ಕಾಗೋಡು: ಬೇಳೂರು
ಕ.ಪ್ರ.ವಾರ್ತೆ, ಹೊಸನಗರ, ಏ.17 ನಾನು ಜೆಡಿಎಸ್ ಸೇರುವ ಸುಳಿವು ದೊರೆತ ಮಾಜಿ ಸಚಿವ ಕಾಗೋಡು ಆತಂಕಗೊಂಡು ಜೆಡಿಎಸ್ ಟಿಕೆಟ್ ನೀಡದಂತೆ ವಕಾಲತ್ತು ನಡೆಸಿ ವಿಫಲರಾದರು ಎಂದು ಬೇಳೂರು ಗೋಪಾಲಕೃಷ್ಣ ಆರೋಪಿಸಿದರು.
ಜೆಡಿಎಸ್ ಸೇರಿದ ಮೇಲೆ ತಾಲೂಕಿನ ಜಯನಗರದಲ್ಲಿ ನಡೆದ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿ, ತಾವು ಬಿಜೆಪಿಯಿಂದ ಸ್ಪರ್ಧಿಸಿದ್ದರೆ ಕೆಜೆಪಿ -ಬಿಜೆಪಿ ಮತ ವಿಭಜನೆಯಾಗಿ ತಮ್ಮ ಗೆಲವು ನಿಶ್ಚಿತ ಎಂದು ಭಾವಿಸಿದ್ದರು. ಜೆಡಿಎಸ್ ವರಿಷ್ಠ ದೇವೆಗೌಡ ಮತ್ತು ಪಿಜಿಆರ್ ಸಿಂಧ್ಯಾ ಅವರನ್ನು ಸಂಪರ್ಕಿಸಿ ತಮಗೆ ಜೆಡಿಎಸ್ ಆಶೀರ್ವಾದ ಮಾಡದಂತೆ ವಕಾಲತ್ತು ವಹಿಸಿದ್ದ ಕಾಗೋಡು ತಿಮ್ಮಪ್ಪಗೆ ಈಗ ನಿರಾಸೆಯಾಗಿದೆ ಎಂದು ಟೀಕಿಸಿದರು.
ಸಂಪರ್ಕವಿಲ್ಲ: ಕಾಗೋಡು ಎಂದು ಜನಸಾಮಾನ್ಯರೊಂದಿಗೆ ಸಂಪರ್ಕ ಸಾಧಿಸಲಿಲ್ಲ. ಯುವಕರನ್ನು ಕೂಡಾ ಬೆಳಸದೆ ತಾವೆ ಸರ್ವಾಧಿಕಾರಿಯಂತೆ ವರ್ತಿಸಿದರು. ಹೀಗಾಗಿಯೇ 2 ಬಾರಿ ಸೋತಿದ್ದು, ತಮ್ಮ ನಡವಳಿಕೆ ಬದಲಿಸಿಕೊಂಡಿಲ್ಲ. ಹೀಗಾಗಿ ಮತ್ತೊಮ್ಮೆ ಸೋಲು ಅವರಿಗೆ ಕಟ್ಟಿಟ್ಟ ಬುತ್ತಿ ಎಂದು ವಾಗ್ದಾಳಿ ನಡೆಸಿದರು.
2 ಬಾರಿ ಶಾಸಕನಾಗಿ ಕ್ಷೇತ್ರದಲ್ಲಿ ಮಾಡಿದ ಅಭಿವೃದ್ಧಿ, ಶ್ರೀಸಾಮಾನ್ಯನೊಂದಿಗೆ ಹೊಂದಿದ್ದ ನಿರಂತರ ಸಂಪರ್ಕ ನನಗೆ ಸಹಕಾರಿಯಾಗಲಿದ್ದು, ಮತ್ತೊಮ್ಮೆ ವಿಧಾನಸಭೆ ಪ್ರವೇಶಿಸುವುದರಲ್ಲಿ ಯಾವುದೇ ಅನುಮಾನ ಬೇಡ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ಜೆಡಿಎಸ್ ಪ್ರಮುಖ ಕೆ.ಎಂ. ಕೃಷ್ಣಮೂರ್ತಿ ಮಾತನಾಡಿದರು. ಜೆಡಿಎಸ್ ತಾಲೂಕು ಅಧ್ಯಕ್ಷ ಬಿ.ಜಿ. ನಾಗರಾಜ್, ಪ್ರಮುಖರಾದ ಎಂ.ವಿ. ಜಯರಾಂ, ಸುಮತಿ ಪೂಜಾರ್, ಎಚ್.ಎನ್. ಶ್ರೀಪತಿರಾವ್, ಚರಿತ ಗಣೇಶ್, ಶ್ರೀಧರ ಉಡುಪ, ವರ್ತೇಶ್, ಸಣ್ಣಕ್ಕಿ ಮಂಜು, ಕಾರ್ಯಕರ್ತರು ಪಾಲ್ಗೊಂಡಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

