ಕಾರು ಡಿಕ್ಕಿ: ಮಹಿಳೆ ಸಾವು
ಕ.ಪ್ರ.ವಾರ್ತೆ, ಶಿವಮೊಗ್ಗ, ಏ.18
ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮೋರಿಗೆ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ತಾಲೂಕಿನ ಸನ್ನಿವಾಸ ಗ್ರಾಮದ (ಎನ್ಎಚ್ 206) ಬಳಿ ನಡೆದಿದೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ನಿವಾಸಿ ಸುಜಾತ ಮೃತಪಟ್ಟವರು. ಇವರು ತಮ್ಮ ಪತಿ ಮಂಜುನಾಥರೊಂದಿಗೆ ಜಿಲ್ಲೆಯಲ್ಲಿನ ಪ್ರವಾಸಿ ತಾಣಗಳಿಗೆ ಭೇಟಿ ನೀಡಿ ನಂತರ ಅರಸೀಕೆರೆಗೆ ತೆರಳುವಾಗ ಘಟನೆ ನಡೆದಿದೆ. ವೇಗವಾಗಿ ಬಂದ ಮಂಜುನಾಥ ನಿಯಂತ್ರಣ ತಪ್ಪಿ ಮೋರಿಗೆ ಡಿಕ್ಕಿ ಹೊಡೆದಿದ್ದು, ಸುಜಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಪ್ರಕರಣ ಕುಂಸಿ ಠಾಣೆಯಲ್ಲಿ ದಾಖಲಾಗಿದೆ.
ಚಿನ್ನಾಭರಣ ಕಳವು
ಶಿವಮೊಗ್ಗ: ದೇವಾಲಯದ ಬೀಗ ಮುರಿದು ಸಾವಿರಾರು ರುಪಾಯಿ ಮೌಲ್ಯದ ಚಿನ್ನಾಭರಣಗಳನ್ನು ಕಳವು ಮಾಡಿರುವ ಘಟನೆ ಸೋಗನೆಯ ದುರ್ಗಾಂಬ ದೇವಾಲಯದಲ್ಲಿ ನಡೆದಿದೆ. ಗರ್ಭಗುಡಿಯಲ್ಲಿದ್ದ ಅರ್ಧ ಕೆ.ಜಿ ತೂಕದ ಬೆಳ್ಳಿಯ ಕತ್ತಿ, 200 ಗ್ರಾಂ ತೂಕದ ಬೆಳ್ಳಿಯ ಮುಖವಾಡ, 1 ಗ್ರಾಂ ತೂಕದ 4 ಬಂಗಾರದ ತಾಳಿ, 1 ಡಿವಿಡಿ ಪ್ಲೇಯರ್, 150 ಗ್ರಾಂ ತೂಕದ ಬೆಳ್ಳಿಯ ಮಾಲೆ ಹಾಗೂ ಕಾಣಿಕೆ ಹುಂಡಿಯಲ್ಲಿದ್ದ ಹಣ ಅಪಹರಿಸಲಾಗಿದೆ. ಪ್ರಕರಣ ತುಂಗಾ ನಗರ ಠಾಣೆಯಲ್ಲಿ ದಾಖಲಾಗಿದೆ.
ಭಿಕ್ಷುಕ ಸಾವು
ಶಿವಮೊಗ್ಗ: ಆತ ಅನಾರೋಗ್ಯದಿಂದ ನರಳುತ್ತಿದ್ದ ವೃದ್ಧ, ಜೊತೆಗೆ ಅವರಿರವರು ಕೊಟ್ಟ ತಿಂಡಿಗಳನ್ನು ತಿಂದು ಬದುಕುತ್ತಿದ್ದ ಅಲೆಮಾರಿ ಭಿಕ್ಷುಕ. ಆದರೆ, ಗುರುವಾರ ಅನಾಮಧೇಯವಾಗಿ ಮೃತಪಟ್ಟಿದ್ದಾನೆ. ಆತನ ಅಂತಿಮ ಸಂಸ್ಕಾರ ಮಾಡಲು ವಾರಸುದಾರರು ಇಲ್ಲದೇ ಶವವನ್ನು ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ.
ಮಂಜುನಾಥ (80) ಮೃತಪಟ್ಟ ವೃದ್ಧ. ಇವರು ನಗರದ ಗಾಂಧಿ ಬಜಾರ್ನ ತುಳಜಾ ಭವಾನಿ ರಸ್ತೆಯಲ್ಲಿ ಕುಳಿತು ದಾರಿಯಲ್ಲಿ ಕೊಟ್ಟ ತಿಂಡಿಗಳನ್ನು ತಿಂದು ಬದುಕುತ್ತಿದ್ದರು. ಕಳೆದ ಎರಡು ದಿನಗಳ ಹಿಂದೆ ಅನಾರೋಗ್ಯದಿಂದ ನರಳುತ್ತಿದ್ದರನ್ನು ಸ್ಥಳೀಯರು ಮೆಗ್ಗಾನ್ ಅಸ್ಪತ್ರೆಗೆ ದಾಖಲು ಮಾಡಿದ್ದರು. ಆದರೆ, ಚಿಕಿತ್ಸೆ ಪಲಕಾರಿಯಾಗದೆ ಗುರುವಾರ ಮೃತಪಟ್ಟಿದ್ದು, ಸುಕ್ಕುಗಟ್ಟಿದ ಮುಖ, ಎಣ್ಣೆಗಂಪು ಬಣ್ಣ, ತೆಳ್ಳನೆ ಕ್ಷೀಣಿಸಿದ ಮೈಕಟ್ಟು, 5.6 ಅಡಿ ಎತ್ತರ, ಗಡ್ಡ, ಮೀಸೆ ನೆರೆತಿರುತ್ತದೆ. ಬಾದಾಮಿ ಕಲರ್ ಶರ್ಟ್, ಹಸಿರು ನಿಲುವಂಗಿ, ಬಳಿ ಪಂಚೆ ಧರಿಸಿದ್ದು, ಹೊಸನಗರ ತಾಲೂಕಿನ ಭಾಷೆ ಮಾತನಾಡುತ್ತಿದ್ದರು ಎಂದು ತಿಳಿದು ಬಂದಿದೆ. ಈ ಚಹರೆಯ ಮೃತ ವ್ಯಕ್ತಿ ವಿಳಾಸ ಅಥವಾ ವಾರಸುದಾರರ ಮಾಹಿತಿ ದೊರೆತಲ್ಲಿ ಪಿಎಸ್ಐ ಕೋಟೆ ಠಾಣೆ ಹಾಗೂ ಕೋಟೆ ಸರ್ಕಲ್, ಎಸ್ಪಿ ಕಚೇರಿಗೆ (08182-261408) ತಿಳಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

