ಶಿವಮೊಗ್ಗ

'ಪ್ರಾಮಾಣಿಕರೆಂದು ಪ್ರಮಾಣ ಮಾಡಿ'

Published On :

ಕ.ಪ್ರ ವಾರ್ತೆ, ಶಿರಾಳಕೊಪ್ಪ, ಏ.18
ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಭ್ರಷ್ಟಾಚಾರ ಮಾಡಿದ್ದಾರೆ ಎಂದು ಪದೇಪದೇ ಹೇಳುತ್ತಿರುವ ಪದ್ಮನಾಭಭಟ್ಟ ತಾವು ಪ್ರಾಮಾಣಿಕರು ಎಂದು ಹುಚ್ಚರಾಯಸ್ವಾಮಿ ಎದುರು ಪ್ರಮಾಣ ಮಾಡಲಿ ಎಂದು ಎಪಿಎಂಸಿ ಅಧ್ಯಕ್ಷ ಹಾಗೂ ತಾ. ಕೆಜೆಪಿ ಎಸ್ಸಿ ಮೋರ್ಚಾ ಅಧ್ಯಕ್ಷ ಸಣ್ಣ ಹನುಮಂತಪ್ಪ ಸವಾಲು ಹಾಕಿದ್ದಾರೆ.
 ಶಿರಾಳಕೊಪ್ಪ ಪಟ್ಟಣದಲ್ಲಿ ಸುದ್ದಿಗೋಷ್ಟಿ ನಡೆಸಿ, ಮೊದಲಿನಿಂದ ಶಿರಾಳಕೊಪ್ಪ ಪಟ್ಟಣಕ್ಕೆ ಸೀಮಿತರಾಗಿರುವ  ಅವರು ಪಟ್ಟಣದಲ್ಲಿ ಯಾವುದೇ ಚುನಾವಣೆಯಲ್ಲಿ ಗೆದ್ದಿಲ್ಲ. ಹಾಗೆಯೇ ಗೆಲ್ಲುವ ತಾಕತ್ತು ಇಲ್ಲ. ಇಂತಹ ವ್ಯಕ್ತಿ ತಮ್ಮ ಜೊತೆಗೆ ಇದ್ದರು ಎಂಬ ಒಂದೇ ಕಾರಣಕ್ಕೆ ಅವರನ್ನು ಎರಡು ಅವಧಿ ನಾಲ್ಕೂವರೇ ವರ್ಷ ಎಂಎಡಿಬಿ ಅಧ್ಯಕ್ಷರನ್ನಾಗಿ ಮಾಡಿದರು.
ಎಂಎಡಿಬಿ ಅಧ್ಯಕ್ಷರಾಗಿದ್ದ ಅವರು ಬಿಲ್ ಪಾಸ್ ಮಾಡುವಾಗ ವ್ಯಾಪಕವಾಗಿ ಮಾಮೂಲಿ ಪಡೆದಿದ್ದರು. ಇಂತಹ ವ್ಯಕ್ತಿ ಭ್ರಷ್ಟಾಚಾರದ ಬಗ್ಗೆ ಮಾತನಾಡುವುದು ಹಾಸ್ಯಾಸ್ಪದ. ಅವರು ಲಂಚ ಪಡೆದಿಲ್ಲವೆಂದು ದೇವರ ಎದುರು ಪ್ರಮಾಣ ಮಾಡಲಿ ಎಂದು ಸವಾಲು ಹಾಕಿದರು.
ನೈತಿಕತೆ ಇಲ್ಲ: ಶಾಲೆ ಹೆಸರಲ್ಲಿ ಇದ್ದ ಲಕ್ಷಾಂತರ ರುಪಾಯಿ ಮೌಲ್ಯದ ನಾಟಾವನ್ನು ತಮ್ಮ ಮನೆಗೆ ಬಳಿಸಿಕೊಂಡಿರುವ ಪದ್ಮನಾಭಭಟ್ಟ ಸೊರಬ ತಾಲೂಕಿನಲ್ಲಿರುವ ಅವರ ತಮ್ಮನ ಒಂದೇ ಒಂದು ಮನೆಗೆ ಹೋಗಲು ಎಂಎಡಿಬಿಯಿಂದ ಐದು ಲಕ್ಷ ರುಪಾಯಿ ವೆಚ್ಚದಲ್ಲಿ ರಸ್ತೆ ನಿರ್ಮಿಸಿದ್ದಾರೆ. ಇತರ ಎಲ್ಲರಿಗಿಂತ ಭ್ರಷ್ಟರಾಗಿದ್ದು, ಭ್ರಷ್ಟಾಚಾರದ ಬಗ್ಗೆ ಮಾತನಾಡುವ ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿದರು.   
ಇಂದು ಗ್ರಾಮಗಳಲ್ಲಿ ಭ್ರಷ್ಟಾಚಾರದ ಬಗ್ಗೆ ಮಾತನಾಡುತ್ತಿದ್ದಾರೆ. ಜಿಪಂ ಅನುದಾನದಲ್ಲಿ ಕುಡಿಯುವ ನೀರಿಗೆ ಪೈಪಲೈನ್ ಅಳವಡಿಕೆ ಸೇರಿದಂತೆ ವ್ಯಾಪಕ ಭ್ರಷ್ಟಾಚಾರ ಮಾಡುತ್ತಿರುವ ಅವರ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.