ಶಿವಮೊಗ್ಗ

ಬಿರುಸಾಯ್ತು ಚುನಾವಣಾ ಪ್ರಚಾರ

Published On :

ಕ.ಪ್ರ ವಾರ್ತೆ, ಶಿವಮೊಗ್ಗ, ಏ.19
ಶಿವಮೊಗ್ಗ ವಿಧಾನಸಭಾ ಕ್ಷೇತ್ರದ ಕಣ ಬಿರುಸಾಗಿದೆ. ಅಭ್ಯರ್ಥಿಗಳು ಎಗ್ಗಿಲ್ಲದೆ ಪ್ರಚಾರ ನಡೆಸಲಾರಂಭಿಸಿದ್ದಾರೆ. ಗಲ್ಲಿ, ಮೊಹಲ್ಲಾಗಳನ್ನೂ ಬಿಡದೇ ಸುತ್ತಾಟ ಆರಂಭಿಸಿದ್ದಾರೆ.
ನಗರದ ವಿವಿಧೆಡೆ ಬಿಜೆಪಿ ಅಭ್ಯರ್ಥಿ ಈಶ್ವರಪ್ಪನವರು ಪ್ರಚಾರ ನಡೆಸಿದರು. ವಿವಿಧ ಬಡಾವಣೆಗಳಿಗೆ ಭೇಟಿ ಕೊಟ್ಟು ಮತಯಾಚನೆ ಮಾಡಿದರು. ಈ ಸಂದರ್ಭದಲ್ಲಿ ನಗರದ ಸೀಗೆಹಟ್ಟಿಯಲ್ಲಿ ಅನಾರೋಗ್ಯಕ್ಕೊಳಗಾಗಿರುವ ಸಹಕಾರಿ ಧುರೀಣ ಕೃಷ್ಣಸಿಂಗ್ ಅವರನ್ನು ಭೇಟಿ ಮಾಡಿ ಯೋಗಕ್ಷೇವು ವಿಚಾರಿಸಿದರು. ಅವರೊಂದಿಗೆ ಪಕ್ಷದ ಮುಖಂಡರುಗಳು ಉಪಸ್ಥಿತರಿದ್ದರು ಎಂದು ಬಿಜೆಪಿ ಜಿಲ್ಲಾ ಮಾಧ್ಯಮ ಪ್ರಮುಖ್ ಬಿ.ಆರ್. ಮಧುಸೂಧನ ತಿಳಿಸಿದ್ದಾರೆ.
ಕೆಜೆಪಿ: ಶಿವಮೊಗ್ಗ ಕೆಜೆಪಿ ಅಭ್ಯರ್ಥಿ ರುದ್ರೇಗೌಡ ನಗರದ ವಿವಿಧ ಬಡಾವಣೆಗಳಲ್ಲಿ ಪ್ರಚಾರ ಕೈಗೊಂಡಿದ್ದರು.
ಏಪ್ರಿಲ್ 18 ಮತ್ತು 19ರಂದು ನಗರದ 2 , 17 ಮತ್ತು 7ನೇ ವಾರ್ಡ್‌ನ ಶಾಂತಿ ನಗರ, ಸೇವಾಲಾಲ್ ನಗರ, ತ್ರಿಮೂರ್ತಿನಗರ, ವಿನೋಬನಗರ ದಕ್ಷಿಣ ಮತ್ತು ಸ್ಲಣಗಳಿಗೆ ನೂರಾರು ಕಾರ್ಯಕರ್ತರೊಡನೆ ಬಿರುಸಿನ ಪಾದಯಾತ್ರೆಯ ಮೂಲಕ ಮತ ಯಾಚಿಸಿದರು. ಬಿ.ಎಸ್. ಯಡಿಯೂರಪ್ಪನವರು ಮುಖ್ಯಮಂತ್ರಿಯಾಗಿದ್ದಾಗ ಮಾಡಿದ ಅಭಿವೃದ್ಧಿ ಕಾರ್ಯಗಳ ಮತ್ತು ಮುಂದೆ ಮಾಡಬೇಕಾದ ಅಭಿವೃದ್ಧಿ ಯೋಜನೆಗಳ ಬಗ್ಗೆ ಮತ ಯಾಚನೆ ಸಂದರ್ಭದಲ್ಲಿ ತಿಳಿಸಲಾಯಿತು ಎಂದು ಪಕ್ಷ ತಿಳಿಸಿದೆ.
ಬಿ.ಎಸ್. ಯಡಿಯೂರಪ್ಪನವರಿಗೆ ಈ ರಾಜ್ಯದ ಬಗ್ಗೆ ಇರುವ ಕಾಳಜಿ, ನಮ್ಮ ರಾಜ್ಯವನ್ನು ಕಲ್ಯಾಣ ಕರ್ನಾಟಕವನ್ನಾಗಿಸಲು ಅವರು ಹೊತ್ತಿರುವ ಯೋಜನೆಗಳ ಕನಸನ್ನು ಸಾಕಾರಗೊಳಿಸಲು ಕೇವಲ ಮತದಾರರಿಂದ ಮಾತ್ರ ಸಾಧ್ಯ. ಈ ನಿಟ್ಟಿನಲ್ಲಿ ಮಹಿಳೆಯರು ಮತ್ತು ಯುವಕರು ಸ್ವಯಣಪ್ರೇರಿತರಾಗಿ ಬಹಳ ದೊಡ್ಡಮಟ್ಟದಲ್ಲಿ ಪಕ್ಷವನ್ನು ಸೇರುತ್ತಿದ್ದಾರೆ. ಇದು ನಮ್ಮ ಪಕ್ಷದ ಗೆಲುವಿನ ಸಂಕೇತವಾಗಿದೆ ಎಂದು ರುದ್ರೇಗೌಡರು ಪ್ರಚಾರ ಸಭೆಯಲ್ಲಿ ತಿಳಿಸಿದರು.
ಜೆಡಿಎಸ್: ಶುಕ್ರವಾರ ಬೆಳಿಗ್ಗೆ ಜೆಡಿಎಸ್ ಅಭ್ಯರ್ಥಿ ಶ್ರೀಕಾಂತ್ ತಮ್ಮ ಬೆಂಬಲಿಗರೊಂದಿಗೆ ನಗರದ 28ನೇ ವಾರ್ಡ್ ವ್ಯಾಪ್ತಿಗೆ ಸೇರಿದ ಆರ್.ಎಂ.ಎಲ್ ನಗರದಲ್ಲಿ ಮತಯಾಚಿಸಿದರು. ಈ ಸಂದರ್ಭದಲ್ಲಿ ನಗರಸಭಾ ಸದಸ್ಯ ಕೇಬಲ್ ಬಾಬು (ಏಳುಮಲೈ), ಎಚ್. ಪಾಲಾಕ್ಷಿ, ಪಕ್ಷದ ಪ್ರಮುಖ ಎಚ್.ಆರ್. ತ್ಯಾಗರಾಜ್, ಸುನೀಲ್, ಜಿ.ಡಿ. ಮಂಜುನಾಥ್ ಇತರರು ಹಾಜರಿದ್ದರು.
ಕಾಂಗ್ರೆಸ್: ವಿವಿಧ ಪಕ್ಷಗಳ ಮುಖಂಡರು ಹಾಗೂ ಕಾರ್ಯಕರ್ತರು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.
ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಆರ್. ಪ್ರಸನ್ನಕುಮಾರ್ ಸಮ್ಮುಖದಲ್ಲಿ ಗಾಡಿಕೊಪ್ಪ 5 ವಾರ್ಡಿನ ಬಿಜೆಪಿ ಮುಖಂಡ ಎನ್. ಮೂರ್ತಿ, ಕೆಜೆಪಿ ಮುಖಂಡ ಶಂಕರ, ಗಜೇಂದ್ರ ಹಾಗೂ ಗಂಗಾನಾಯ್ಕ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸಿನ ವಕ್ತಾರ ಎಸ್.ಪಿ. ದಿನೇಶ್, ಸೂಡಾ ಮಾಜಿ ಅಧ್ಯಕ್ಷ ಎನ್. ರಮೇಶ್, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಎಸ್.ಟಿ. ಹಾಲಪ್ಪ, ಯು. ಶಿವಾನಂದ, ವಕೀಲ ಮೂರ್ತಿಯವರು ಉಪಸ್ಥಿತರಿದ್ದರು.
ಶುಕ್ರವಾರ ಬೆಳಿಗ್ಗೆ ಶರಾವತಿನಗರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕೆ.ಬಿ. ಪ್ರಸನ್ನಕುಮಾರ್ ಅವರು ಮನೆಮನೆಗೆ ತೆರಳಿ ಮತಯಾಚಿಸಿದರು. ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರು ಜೊತೆಗಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.