ಸಾರ್ವಜನಿಕರಿಗೆ ಮತದಾನದ ಬಗ್ಗೆ ಜಾಗೃತಿ ಅಗತ್ಯ: ಜಿ.ಸಿ.ರಾಜು
ಕ.ಪ್ರ ವಾರ್ತೆ, ಜೋಗ್ಫಾಲ್ಸ್, ಏ.19
ರಾಜ್ಯದಲ್ಲಿ ನಡೆಯಲಿರುವ ವಿಧಾನಸಭೆ ಚುನಾವಣೆ ಶಾಂತಿ ಸುವ್ಯವಸ್ಥೆ ಕಾಪಾಡಲು ಅರೆ ಸೇನಾ ಪಡೆಗಳೊಂದಿಗೆ ಪಥ ಸಂಚಲನ ನಡೆಸಲಾಗುತ್ತಿದೆ ಎಂದು ಸಾಗರ ಗ್ರಾಮಾಂತರ ವೃತ್ತದ ಸರ್ಕಲ್ ಇನ್ಸ್ಪೆಕ್ಟರ್ ಜಿ.ಸಿ. ರಾಜು ತಿಳಿಸಿದರು.
ಅವರು ಜನರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಜೋಗದ ಪ್ರಮುಖ ರಸ್ತೆಗಳಲ್ಲಿ ನಡೆದ ಕೇಂದ್ರದ ಅರೆ ಸೇನಾ ಪಡೆ ಪಥ ಸಂಚಲನದಲ್ಲಿ ಭಾಗವಹಿಸಿ ಮಾತನಾಡಿದರು.
ಸಾಗರ ತಾಲೂಕಿನಲ್ಲಿ 14 ಸ್ಥಳಗಳನ್ನು ಸೂಕ್ಷ್ಮ ಪ್ರದೇಶಗಳೆಂದು ಗುರುತಿಸಲಾಗಿದೆ. ಮತದಾನ ಮುಗಿಯುವವರೆಗೆ ಕೇಂದ್ರದ ಅರೆಸೇನಾ ತುಕಡಿಗಳನ್ನು ಇಂತಹ ಸ್ಥಳಗಳಿಗೆ ನಿಯೋಜಿಸಲಾಗಿದೆ. ಜೋಗ, ಕಾರ್ಗಲ್, ರಿಪ್ಪನ್ಪೇಟೆ, ಆವಿನಹಳ್ಳಿ, ನಾಗುವಳ್ಳಿ, ಹೊಸನಗರ, ಬ್ಯಾಕೋಡು, ತುಮರಿ ಭಾಗಗಳಲ್ಲಿ ಮುಂದಿನ ದಿನಗಳಲ್ಲಿ ಪಥಸಂಚಲನ ನಡೆಸಲಾಗುವುದು. ಯಾವುದೇ ಅಹಿತಕರ ಘಟನೆಗಳು ಸಂಭವಿಸದಂತೆ ಎಚ್ಚರ ವಹಿಸಲಾಗುವುದು ಎಂದರು.
ಪಥ ಸಂಚಲನದಲ್ಲಿ ಇಬ್ಬರು ಸರ್ಕಲ್ ಇನ್ಸ್ಪೆಕ್ಟರ್, ಐವರು ಸಬ್ಇನ್ಸ್ಪೆಕ್ಟರ್, ನಾಲ್ವರು ಎಎಸ್ಸೈ, 7 ಹೆಡ್ಕಾನ್ಸ್ಟೇಬಲ್ಸ್, 80 ಪೊಲೀಸ್ ಸಿಬ್ಬಂದಿ ಸೇರಿದಂತೆ ಸುಮಾರು 90ಕ್ಕೂ ಅಧಿಕ ಮಂದಿ ಪಥ ಸಂಚಲನದಲ್ಲಿ ಭಾಗವಹಿಸಿದ್ದರು.
ಸಾಗರ ಗ್ರಾಮಾಂತರ ವೃತ್ತದ ಕ್ರೈಂ ವಿಭಾಗದ ಎಸ್ಸೈ ವಿ. ಚಿನ್ನಪ್ಪ, ಜೋಗ್ ಠಾಣೆ ಎಸ್ಸೈ ಮೊಹಮದ್ ರಫಿ ಉಪಸ್ಥಿತರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

