25ಕ್ಕೆ ಸಾಹಿತ್ಯ ಹುಣ್ಣಿಮೆ ಹಾಸ್ಯದ ರಸಸಂಜೆ (ಸುದ್ದಿ ಸಂಕ್ಷೇಪ)
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಶ್ರೀ ಆದಿಚುಂಚನಗಿರಿ ಶಾಖಾ ಮಠದ ಸಂಯುಕ್ತ ಆಶ್ರಯದಲ್ಲಿ ಏಪ್ರಿಲ್ 25ರಂದು ಅಂಜೆ 6.30ಕ್ಕೆ ನಗರದ ಶರಾವತಿ ನಗರ ಬಡಾವಣೆಯಲ್ಲಿರುವ ಶ್ರೀ ಆದಿಚುಂಚನಗಿರಿ ಸಮುದಾಯ ಭವನದಲ್ಲಿ 92ನೇ ಸಾಹಿತ್ಯ ಹುಣ್ಣಿಮೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಕಾರ್ಯದರ್ಶಿಗಳಾಗಿರುವ ಶ್ರೀ ಪ್ರಸನ್ನನಾಥ ಸ್ವಾಮೀಜಿ ಉದ್ಘಾಟಿಸಲಿದ್ದಾರೆ. ಕನ್ನಡದ ಪೂಜಾರಿ ಎಂದು ಖ್ಯಾತರಾದ ಹಿರೇಮಗಳೂರು ಕಣ್ಣನ್ ಅವರು ಭಾಗವಹಿಸಲಿದ್ದಾರೆ. ಸಾಗರದಲ್ಲಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಶಿಕ್ಷಣ ಸಂಯೋಜಕ ಶಂಕರಶಾಸ್ತ್ರಿ ಅವರು ದ.ರಾ. ಬೇಂದ್ರೆ ಸಾಹಿತ್ಯದಲ್ಲಿನ ರಸಸ್ವಾದ ಕುರಿತು ಮಾತನಾಡಲಿದ್ದಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಿಂದ ಹಾಸ್ಯ ಮತ್ತು ಮಿಮಿಕ್ರಿ ಕಲಾವಿದರಾದ ಪಟ್ಟಾಭಿರಾಮ ಸುಳ್ಯ ಅವರು ಆಗಮಿಸಲಿದ್ದಾರೆ. ಜನಪದ ಗಾಯಕ ಕೆ. ಯುವರಾಜ್, ಗಾಯಕಿಯರಾದ ಸುರೇಖ ಹೆಗಡೆ, ನಾಗಮಣಿ ಆನಂತರಾಮ್, ದಾಕ್ಷಾಯಿಣಿ ಮತ್ತು ಕೆ. ರಾಜ್ಕುಮಾರ್ ಹಾಗೂ ತಂಡದವರಿಂದ ವಿಶೇಷ ಕಾರ್ಯಕ್ರಮ ಏರ್ಪಡಿಸಲಾಗಿದೆ. ಕವಿಗಳಾದ ನಾಗಲಕ್ಷ್ಮೀ ತೀ.ನಂ. ಶಂಕರನಾರಾಯಣ, ಕೆ. ಓಂಕಾರಪ್ಪ, ಡಿ. ಗಣೇಶ್ ಮತ್ತು ಚುಟುಕು ವಾಚನದಲ್ಲಿ ಡಾ. ಶರಶ್ಚಂದ್ರರಾನಡೆ, ಲತಾ ನಾಗರಾಜ್ ಅವರು ಭಾಗವಹಿಸಲಿದ್ದಾರೆ. ಕನ್ನಡ ಸಾಹಿತ್ಯ ಪರಿಷತ್ತು ಸದಸ್ಯರು, ಸಾಹಿತ್ಯ, ಸಾಂಸ್ಕೃತಿಕ ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಡಿ. ಮಂಜುನಾಥ್ ಕೋರಿದ್ದಾರೆ.
28ರಿಂದ ದತ್ತಿ ಉಪನ್ಯಾಸ
ಶಿವಮೊಗ್ಗ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ನೇತೃತ್ವದಲ್ಲಿ ಏಪ್ರಿಲ್ 28ರಂದು ಭಾನುವಾರ ಸಂಜೆ 6.30ಕ್ಕೆ 100 ಅಡಿ ರಸ್ತೆಗೆ ಹೊಂದಿಕೊಂಡಿರುವ ರಾಜೇಂದ್ರನಗರ ಬಡಾವಣೆಗೆ ಸೇರಿದ ಸಹ್ಯಾದ್ರಿ ಪ್ರೌಢಶಾಲೆಯ ಆವರಣದಲ್ಲಿರುವ ಶ್ರೀ ಕಡಿದಾಳು ರಾಮಪ್ಪಗೌಡ ಸಭಾಂಗಣದಲ್ಲಿ ನವೋದಯ ಸಾಹಿತ್ಯ ಚಿಂತನೆ ಮತ್ತು ಸುಗಮ ಸಂಗೀತ ಕಾರ್ಯಕ್ರಮ ಏರ್ಪಡಿಸಲಾಗಿದೆ. ಲಿಂ. ಶ್ರೀಮತಿ ಕಮಲ ಜಿ.ಬಿ. ರುದ್ರಪ್ಪ ದತ್ತಿ ಮತ್ತು ಲಿಂ. ಜಿ.ಆರ್. ಪ್ರವೀಣ್ ಶ್ರೀಜಿ.ಬಿ. ರುದ್ರಪ್ಪ ದತ್ತಿ ಅಂಗವಾಗಿ ಉಪನ್ಯಾಸಕ ಡಾ. ಬಿದರಗೋಡು ನಾಗೇಶ್ ಅವರು ಸುಗಮ ಸಂಗೀತಕ್ಕೆ ನವೋದಯ ಸಾಹಿತ್ಯ ಕೊಡುಗೆ ಮತ್ತು ಅಶೋಕ ಅವರು ಕವಿಗಳಾದ ಜಿಎಸ್ಎಸ್, ಚನ್ನವೀರ ಕಣವಿ ಅವರ ಸಾಹಿತ್ಯ ಚಿಂತನೆ ಮಾಡುವರು. ಕಡಿದಾಳು ಗೋಪಾಲ, ಡಾ. ರಿಯಾಜ್ ಪಾಷಾ, ರತ್ನಯ್ಯ ಅತಿಥಿಗಳಾಗಿ ಪಾಲ್ಗೊಳ್ಳುವರು. ಗಾಯಕಿಯರಾದ ಶಾಂತಾ ಆನಂದ, ಲಕ್ಷ್ಮೀ ಮಹೇಶ್, ಶೀಲಾ ಭಾಗವಹಿಸುವರು
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

