ಕಾಂಗ್ರೆಸ್ 80 ಸ್ಥಾನಕ್ಕಿಂತ ಹೆಚ್ಚು ಗೆಲ್ಲಲ್ಲ
ಭದ್ರಾವತಿ: ಈ ಬಾರಿ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ 80 ಸ್ಥಾನಗಳಿಗಿಂತ ಹೆಚ್ಚು ಗೆಲ್ಲುವುದಿಲ್ಲ ಹಾಗೂ ಪಕ್ಷೇತರರು ಹೆಚ್ಚಿನ ಪ್ರಾಶಸ್ತ್ಯ ಪಡೆಯುವವರು ಎಂದು ಭದ್ರಾವತಿ ವಿಧಾನಸಭಾ ಚುನಾವಣೆಯ ಕಾಂಗ್ರೆಸ್ ಟಿಕೆಟ್ ವಂಚಿತ ಪಕ್ಷೇತರ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಭವಿಷ್ಯ ನುಡಿದರು.
ಶನಿವಾರ ಪಟ್ಟಣದ ಶ್ರೀ ಮಂಜುನಾಥಸ್ವಾಮಿ ಕಲ್ಯಾಣ ಮಂಟಪದಲ್ಲಿ ನಡೆದ ತಮ್ಮ ಅಭಿಮಾನಿಗಳ ಹಾಗೂ ಕಾರ್ಯಕರ್ತರ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
ತಂತ್ರ ಫಲಿಸದು: ಭದ್ರಾವತಿಯಲ್ಲಿ ಚುನಾವಣೆ ನಡೆಯುವುದು ಸಂಗಮೇಶ್ವರ್ ಮತ್ತು ಅಪ್ಪಾಜಿ ಪಕ್ಷಗಳ ನಡುವೆ ಮಾತ್ರ, ಮಿಕ್ಕೆಲ್ಲಾ ರಾಜಕೀಯ ಪಕ್ಷಗಳೂ ಗೌಣ. ತಮಗೆ ಭದ್ರಾವತಿಯನ್ನು ಗುತ್ತಿಗೆಗೆ ನೀಡಿದ್ದನೆಂದು ಹೇಳಿದ ಕಾಂಗ್ರೆಸ್ ಅಭ್ಯರ್ಥಿ ಸಿ.ಎಂ. ಇಬ್ರಾಹಿಂ ಅವರನ್ನು ಭದ್ರಾವತಿ ಜನತೆ ಈ ಬಾರಿಯ ಚುನಾವಣೆಯಲ್ಲಿ ಕೂಲಿ ಕೆಲಸ ಮಾಡಲು ಕಳುಹಿಸುವರು. ಹಣದ ಆಮಿಷ ತೋರಿಸಿ ಭದ್ರಾವತಿ ಜನತೆಯ ಮತ ಗಳಿಸುವ ಇಬ್ರಾಹಿಂ ಅಥವಾ ಅಪ್ಪಾಜಿಯವರ ತಂತ್ರ ಈ ಬಾರಿ ಫಲಿಸದು ಎಂದು ನುಡಿದರು.
ಕುರುಬ ಜನಾಂಗದ ಸಂಪೂರ್ಣ ಬೆಂಬಲ ಸಂಗಮೇಶ್ವರ್ ಅವರಿಗಿದೆ ಎಂದು ಕಾಂಗ್ರೆಸ್ ನಗರ ಬ್ಲಾಕ್ ಸಮಿತಿ ಮಾಜಿ ಅಧ್ಯಕ್ಷೆ ವೈ. ರೇಣುಕಮ್ಮ ಎಂದರು.
ಪಕ್ಷೇತರ ಅಭ್ಯರ್ಥಿ ಬಿ.ಕೆ. ಮೋಹನ್, ಮೋಹನ್ ನಾಯ್ಡು, ದೇವರಾಜ್, ಎಚ್. ನರಸಿಂಹಯ್ಯ, ಬಾಲಕೃಷ್ಣ, ಮಧು, ಮಹೇಶ್, ಶ್ರೀನಿವಾಸ್, ರಾಮಚಂದ್ರರಾವ್, ಬಿ.ಟಿ. ನಾಗರಾಜ್, ಜೋಗಯ್ಯ, ನಿಜಾಮುದ್ದಿನ್, ಕಣ್ಣಪ್ಪ, ಹಾಲಪ್ಪ, ಚನ್ನಪ್ಪ, ಈರಣ್ಣ, ಮರಿಯಪ್ಪ, ಮಂಜುನಾಥ್, ಯಲ್ಲಪ್ಪ, ಬಿ. ಗಂಗಾಧರ, ಕೆ.ಬಿ. ಗಂಗಾಧರ, ವೀರಭದ್ರೇಗೌಡ, ಅತ್ತಿಗುಂದ ರಾಮಣ್ಣ, ಭಾಗ್ಯಮ್ಮ, ವೆಂಕಟಯ್ಯ, ವೀರಭದ್ರಪ್ಪ, ಬಿ.ಎಸ್. ರುದ್ರಣ್ಣ, ಲತೀಫ್, ಮಣಿಶೇಖರ್, ರಾಮಮೂರ್ತಿ, ದಶರಥಗಿರಿ, ಬಿ.ಆರ್. ನಾಗರಾಜ್, ಎಂ.ಐ. ಬಾಬು ಮೊದಲಾದವರು ವೇದಿಕೆಯಲ್ಲಿದ್ದರು.
ಎಚ್.ಎನ್. ಮಹಾರುದ್ರ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಸುರೇಶಯ್ಯ ಸ್ವಾಗತಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

