ಶಿವಮೊಗ್ಗ

ಕಾಂಗ್ರೆಸ್‌ಗೆ 130ಕ್ಕೂ ಹೆಚ್ಚಿನ ಸ್ಥಾನ: ಇಬ್ರಾಹಿಂ ವಿಶ್ವಾಸ

Published On :

ಕ.ಪ್ರ.ವಾರ್ತೆ,  ಭದ್ರಾವತಿ,   ಏ.21
ಕಾಂಗ್ರೆಸ್ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ 130ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆದು ನಿಚ್ಚಳ ಬಹುಮತ ಸಾಧಿಸಲಿದೆ ಎಂದು ಕಾಂಗ್ರೆಸ್ ಉಮೇದುವಾರ ಸಿ.ಎಂ. ಇಬ್ರಾಹಿಂ ವಿಶ್ವಾಸ ವ್ಯಕ್ತಪಡಿಸಿದರು.
ಶನಿವಾರ ಸಂಜೆ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪನವರೇ ಈ ಬಾರಿ ಜನ ಸಮ್ಮಿಶ್ರ ಸರ್ಕಾರ ತರುವುದಿಲ್ಲವೆಂದು ಹೇಳಿದ್ದಾರೆಂದು ಲೇವಡಿ ಮಾಡಿದರು.
ಬದಲಾವಣೆ ಗಾಳಿ: ಭದ್ರಾವತಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿರುವ ತಮಗೆ ಕ್ಷೇತ್ರದ ಜನತೆಯ ಮೂರು ತಲೆಮಾರುಗಳ ಪರಿಚಯವಿದೆ ಎಂದು ತಿಳಿಸಿದ ಇಬ್ರಾಹಿಂ, ಕ್ಷೇತ್ರದಲ್ಲಿ ಬದಲಾವಣೆಯನ್ನು ಜನರೇ ಬಯಸಿ ಸಂಘಟಿತರಾಗಿಬಿಟ್ಟಿದ್ದಾರೆಂದು ಅಭಿಪ್ರಾಯಪಟ್ಟರು.
ತಾವು ಆಯ್ಕೆಯಾಗಿ ಬಂದರೆ ಆದ್ಯತೆ ಮೇಲೆ ಎಂಜಿನಿಯರಿಂಗ್ ಕಾಲೇಜು ಮತ್ತು 600 ಹಾಸಿಗೆಗಳ ಸುಸಜ್ಜಿತ ಆಸ್ಪತ್ರೆ ಸ್ಥಾಪಿಸುವುದು ಖಚಿತವೆಂದು ತಿಳಿಸಿದರು.
ಟೀಕೆ: ಈ ಬಾರಿಯ ಚುನಾವಣೆ ಅಪ್ಪಾಜಿ ಹಾಗೂ ಸಂಗಮೇಶ್ವರ ಬಣದ ನಡುವೆ ಎಂದು ಸಂಗಮೇಶ್ವರ ಹೇಳಿದ ಮಾತಿಗೆ ಪ್ರತಿಕ್ರಿಯಿಸಿದ ಇಬ್ರಾಹಿಂ, ಸಂಗಮೇಶ್ವರ ಹೇಳಿರುವುದು ಬಹುಶಃ ಎರಡನೇ ಸ್ಥಾನಕ್ಕೆ ನಡೆಯುವ ಸ್ಪರ್ಧೆಗಿರಬಹುದು. ಮೊದಲ ಸ್ಥಾನ ತಮಗೆ ಶತಸಿದ್ಧ ಎಂದು ಹಾಸ್ಯಭರಿತ ದಾಟಿಯಲ್ಲಿ ಟೀಕಿಸಿದರು.  ಸಂಗಮೇಶ್ವರ್ ಅವರ ಆತ್ಮ ಕೆಜೆಪಿಯದ್ದು ದೇಹ ಮಾತ್ರ ಕಾಂಗ್ರೆಸ್‌ನದ್ದು. ಅದು ಈಗ ಬೆಳಕಿಗೆ ಬಂದಿದೆ. ಹಾಗಾಗಿ ಆಡಳಿತಾರೂಢ 71 ಶಾಸಕರ ಪೈಕಿ 70 ಶಾಸಕರಿಗೆ ಕಾಂಗ್ರೆಸ್ ಟಿಕೆಟ್ ದೊರತಿದ್ದು, ಇವರಿಗೆ ಮಾತ್ರ ದೊರಕಿಲ್ಲವೆಂದು ಅವರು ಸ್ಪಷ್ಟೀಕರಿಸಿದರು.
ಏ.24ರಂದು ಸಂಜೆ 7.30ಕ್ಕೆ ಕನಕ ಮಂಟಪ ಮೈದಾನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯನವರು ಬಹಿರಂಗ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದಾರೆ. ಅಂದು ನೂತನವಾಗಿ ಸೇರ್ಪಡೆಯಾಗಲಿರುವವರ ಹೆಸರುಗಳನ್ನು ಘೋಷಿಸಲಾಗುವುದು ಎಂದು ಇಬ್ರಾಹಿಂ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.