ಯಡಿಯೂರಪ್ಪ ಪರ ಕುಟುಂಬ ಪ್ರಚಾರ
ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ ಏ.22
ರಾಜ್ಯ ಪ್ರವಾಸ ಮಾಡುತ್ತಿರುವ ಕೆಜೆಪಿ ಅಧ್ಯಕ್ಷ ಹಾಗೂ ಮಾಜಿ ಮುಖ್ಯ ಮಂತ್ರಿ ಬಿ.ಎಸ್. ಯಡಿಯೂರಪ್ಪರನ್ನು ತವರು ಕ್ಷೇತ್ರದಲ್ಲಿ ಗೆಲ್ಲಿಸಬೇಕೆಂಬ ಸಂಕಲ್ಪ ತೊಟ್ಟು ಅವರ ಕುಟುಂಬ ವರ್ಗ ತಾಲೂಕಿನಲ್ಲಿ ರುಸಿನ ಪ್ರಚಾರ ಕೈಗೊಂಡಿದೆ.
ತಾಲೂಕಿನಲ್ಲಿ ಅವರನ್ನು ಹೇಗಾದರೂ ಸೋಲಿಸಬೇಕೆಂಬ ಪಣತೊಟ್ಟು, ಅವರ ವಿರೋಧಿಗಳು ತೀವ್ರ ಪ್ರಚಾರ ಕೈಗೊಂಡಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪ ನವರ ಮಗ, ಸಂಸದ ರಾಘವೇಂದ್ರ ಒಂದು ಭಾಗದಲ್ಲಿ ಪ್ರಚಾರ ಕೈಗೊಂಡರೆ, ಅವರ ಪುತ್ರಿ ಪದ್ಮ ಹಾಗೂ ಅವರ ಸೊಸೆ ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ ಶಿರಾಳಕೊಪ್ಪ ಹತ್ತಿರದ ಹಲವಾರು ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದಾರೆ.
ಶಿರಾಳಕೊಪ್ಪ ಭಾಗದಲ್ಲಿ ಪ್ರಚಾರ ಕೈಗೊಂಡ ಅವರು ಗ್ರಾಮಗಳಲ್ಲಿ ಗ್ರಾಮಸ್ಥರಿಗೆ ಯಡಿಯೂರಪ್ಪನವರು ಕೈಗೊಂಡ ಕೆಲಸಗಳನ್ನು ಮನವರಿಕೆ ಮಾಡಿಕೊಟ್ಟು, ಈ ಬಾರಿ ಯಡಿಯೂರಪ್ಪನವರಿಗೆ ಮತಕೊಡುವಂತೆ ವಿನಂತಿಸುತ್ತಿದ್ದರು. ಹಾಗೆಯೇ ಬೆಜೆಪಿ ಅವರಿಗೆ ಮಾಡಿದ ದ್ರೋಹದ ಬಗ್ಗೆ ಮತದಾರರಿಗೆ ಮನವರಿಕೆ ಮಾಡಿಕೊಟ್ಟರು. ಪತ್ರಿಕೆಯೊಂದಿಗೆ ಮಾತನಾಡಿದ ಯಡಿಯೂರಪ್ಪನವರ ಪುತ್ರಿ ಪದ್ಮ ಅವರು, ಕ್ಷೇತ್ರದಲ್ಲಿ ಯಡಿಯೂರಪ್ಪನವರಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಮತದಾರರು ಮತಹಾಕುವದರಲ್ಲಿ ಯಾವದೇ ಅನುಮಾನವಿಲ್ಲ. ಹೆಚ್ಚಿನ ಮತಪಡೆದು ಚುನಾತರಾಗುತ್ತಾರೆ ಎಂದರು.
ಉರಿ ಬಿಸಿಲಿನಲ್ಲಿ ಮತಯಾಚಿಸಿದ ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ, ಮತದಾರರು ಕೇಳಿದ ಪ್ರಶ್ನೆಗೆ ಉತ್ತರಿಸುತ್ತಾ ಈ ಬಾರಿ ಯಡಿಯೂರಪ್ಪನವರನ್ನು ಕಳೆದ ಬಾರಿಗಿಂತ ಹೆಚ್ಚಿನ ಮತಗಳ ಅಂತರದಿಂದ ಗೆದಿಸಬೇಕು ಎಂದು ಮನವಿ ಮಾಡಿದರು.
ಇವರೊಂದಿಗೆ ಮಹಿಳಾ ಮೋರ್ಚಾದ ಶುಭಾ, ವಸಂತಮ್ಮ ಜೋಗಬಂಡಾರಿ ರಾಜೇಶ್ವರಿ ಭಾರತಿ ಹಾಗೂ ತಡಗಣಿ ಗ್ರಾಪಂ ಸದಸ್ಯ ಸತೀಶ್ ಗೌಡ, ರವಿಶಾನಭೋಗ ಹಾಜರಿದ್ದು, ಅವರಿಗೆ ಸಹಕಾರಕೊಟ್ಟರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

