ರಾಜ್ ಜಯಂತ್ಯುತ್ಸವ
ಶಿವಮೊಗ್ಗ: ಜಯಕರ್ನಾಟಕ ಜಿಲ್ಲಾ ಸಮಿತಿ ಏ.24ರಂದು ಸಂಜೆ 7 ಗಂಟೆಗೆ ನಗರದ ಜ್ಯೂವೆಲ್ ರಾಕ್ ಸಭಾಂಗಣದಲ್ಲಿ ಡಾ. ರಾಜಕುಮಾರ್ ಹುಟ್ಟುಹಬ್ಬದ ಪ್ರಯುಕ್ತ ರಾಜ್ ಜಯಂತ್ಯುತ್ಸವ ಕಾರ್ಯಕ್ರಮ ಹಮ್ಮಿಕೊಂಡಿದೆ. ಕಾರ್ಯಕ್ರಮಕ್ಕೆ ಲೇಖಕ ಸಂಗನಾಳ ಮಠ, ಹೆಚ್ಚುವರಿ ರಕ್ಷಣಾಧಿಕಾರಿ ಬಸವರಾಜ್, ಮೋಹನ್ ಚಂದ್ರಗುತ್ತಿ ಪಾಲ್ಗೊಳ್ಳಲಿದ್ದಾರೆ.
ಮಹಾ ರಥೋತ್ಸವ
ಶಿವಮೊಗ್ಗ: ನೆಹರು ರಸ್ತೆಯ ಬಸವೇಶ್ವರ ವೀರಶೈವ ಸಮಾಜ ಸೇವಾ ಸಂಘ 23ರಿಂದ 25ರವರೆಗೆ ಶ್ರೀ ಬಸವೇಶ್ವರ ಸ್ವಾಮಿ ಮತ್ತು ಶ್ರೀ ವೀರಭದ್ರೇಶ್ವರ ಸ್ವಾಮಿಯ ಮಹಾರಥೋತ್ಸವ ಏರ್ಪಡಿಸಿದೆ. 23ರಂದು ಬೆಳಿಗ್ಗೆ 5.30ಕ್ಕೆ ರುದ್ರಾಭಿಷೇಕ, ಶ್ರೀ ಗಣಪತಿ ಪೂಜಾ ಮತ್ತು ನಾಂದಿ ಪೂಜಾ, ಬೆಳಿಗ್ಗೆ 10.50ಕ್ಕೆ ರಥೋತ್ಸವ ಕಳಾಸರೋಹಣ, ಸಂಜೆ ಮಹಾ ಮಂಗಳಾರತಿ ಮತ್ತು ದೇವಸ್ಥಾನದಿಂದ ಗಾಂಧಿಬಜಾರ್, ಶ್ಯಾಮ್ಪ್ರಸಾದ್ ಮುಖರ್ಜಿ ರಸ್ತೆ, ದೊಡ್ಡ ಬ್ರಾಹ್ಮಣರ ಬೀದಿ, ಕುಂಬಾರಕೇರಿ, ಕೆ.ಆರ್. ಪುರಂ, ರವಿವರ್ಮ ರಸ್ತೆ, ಎಚ್. ಸಿದ್ದಯ್ಯ ರಸ್ತೆ ಮೂಲಕ ರಾಜಬೀದಿ ಉತ್ಸವ ನಡೆಯಲಿದೆ. 24 ರಂದು ಬೆಳಿಗ್ಗೆ 5.30ಕ್ಕೆ ರುದ್ರಾಭಿಷೇಕ, ರಾಜಬೀದಿ ಉತ್ಸವ, 25ರಂದು ಕೋಣಂದೂರಿನ ಶ್ರೀ ಶೈಲ ಶಿವಲಿಂಗೇಶ್ವರ ಸಂಸ್ಥಾನ ಬೃಹನ್ಮಠದ ಪಂಡಿತಾರಾಧ್ಯ ಶಿವಚಾರ್ಯ ಸ್ವಾಮೀಜಿಯವರ ಸಾನ್ನಿಧ್ಯದಲ್ಲಿ ಬೆಳಿಗ್ಗೆ 5ಗಂಟೆಗೆ ದೇವರ ರುದ್ರಭಿಷೇಕ ಮತ್ತು ಮಹಾಪೂಜೆ, ಬೆಳಿಗ್ಗೆ 9.10ರಿಂದ ಮಹಾರಥೋತ್ಸವ, ಮಧ್ಯಾಹ್ನ 12.30ಕ್ಕೆ ಗುಗ್ಗಳ ಮತ್ತು ಕೆಂಡಾರ್ಚನೆ ನಡೆಯಲಿದೆ ಎಂದು ಸಂಘ ತಿಳಿಸಿದೆ.
ಬ್ಲಾಕ್ ಕಾಂಗ್ರೆಸ್ ಸಮಿತಿಗೆ ಆಯ್ಕೆ
ಶಿವಮೊಗ್ಗ: ನಗರ ಉತ್ತರ ಬ್ಸಾಕ್ ಕಾಂಗ್ರೆಸ್ ಸಮಿತಿಗೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಉಪಾಧ್ಯಕ್ಷರಾಗಿ ಬಿ. ರಘು, ಎನ್.ಮೂರ್ತಿ, ರಾಧಾ ರವಿಕುಮಾರ್ ಆಯ್ಕೆಯಾಗಿದ್ದು, ಕಾರ್ಯದರ್ಶಿಯಾಗಿ ವೆಂಕಟೇಶ, ಎಸ್.ಪಿ. ಸುಧಾಕರ, ಪ್ರವೀಣ್, ಆರ್. ತೀರ್ಥನಂದ ಹಾಗೂ ಸಂಘಟನಾ ಕಾರ್ಯದರ್ಶಿ ಎನ್. ಗಂಗಾಧರ್ ಅವರನ್ನು ಆಯ್ಕೆ ಮಾಡಲಾಗಿದೆ ಎಂದು ಸಮಿತಿ ಅಧ್ಯಕ್ಷ ಪಿ. ರುದ್ರೇಶಶ್ತಿಳಿಸಿದ್ದಾರೆ.
ಉಚಿತ ಸೇವೆ
ಶಿವಮೊಗ್ಗ: ಶರಣ್ಯ, ಡಿಎಸ್ಎಲ್ ಟ್ರಸ್ಟ್ ಸೇವಾ ಯೋಜನೆ ಕ್ಯಾನ್ಸ್ರ್ ರೋಗಿಗಳಿಗೆ ಅವರ ಮನೆಯಲ್ಲಿಯೇ ಉಚಿತ ಸೇವಾ ಕಾರ್ಯ ನೀಡಲಿದೆ. ಆಸಕ್ತ ರೋಗಿಗಳು ಆರೈಕೆ, ಔಷಧೋಪಚಾರದ ಮಾರ್ಗದರ್ಶನ ಮತ್ತು ಆಪ್ತ ಸಲಹೆಗಾಗಿ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಟ್ರಸ್ಟ್ ಕಾರ್ಯದರ್ಶಿ ತಿಳಿಸಿದ್ದಾರೆ.
26ರಂದು ಅಭಿಷೇಕ
ಶಿವಮೊಗ್ಗ: ಕೋಟೆ ರಸ್ತೆಯ ಶ್ರೀ ಶನೈಶ್ಚರ ಸೇವಾ ಸಮಿತಿ ಟ್ರಸ್ಟ್ 25 ಮತ್ತು 26ರಂದು ಬೆಳಿಗ್ಗೆ 6.30 ರಿಂದ 7.30ರವರೆಗೆ ಹುಣ್ಣಿಮೆ ಪ್ರಯುಕ್ತ ಶ್ರೀ ಸನ್ನಿಧಿಯಲ್ಲಿ ಶ್ರೀ ಸತ್ಯನಾರಾಯಣ ಸ್ವಾಮಿಯ ಮೂಲಬಿಂಬಕ್ಕೆ ಪಂಚಾಮೃತ ಅಭಿಷೇಕ ಏರ್ಪಡಿಸಿದೆ. 25ರಂದು ಬೆಳಿಗ್ಗೆ 9.30 ರಿಂದ 11.30ರವರಗೆ ಶ್ರೀ ಲಕ್ಷ್ಮೀನಾರಾಯಣ ಹೃಯದಹೋಮ, ರಾತ್ರಿ ನವಗ್ರಹ ಪೂರ್ವಕ ಗ್ರಹಣ ಶಾಂತಿ ಹೋಮ ಹಾಗೂ 26ರಂದು ಬೆಳಿಗ್ಗೆ 6.30 ರಿಂದ 7.30ರವರೆಗೆ ಪಂಚಾಮೃತ ಅಭಿಷೇಕ, ಸಂಜೆ ಸತ್ಯನಾರಾಯಣಪೂಜೆ ಏರ್ಪಡಿಸಲಾಗಿದೆ ಎಂದು ಟ್ರಸ್ಟ್ ತಿಳಿಸಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

