ಶಿವಮೊಗ್ಗ

28ರಿಂದ ನಾಟಕ ಪ್ರದರ್ಶನ

Published On :

ಕ.ಪ್ರ.ವಾರ್ತೆ, ಶಿವಮೊಗ್ಗ, ಏ.24
ಶಿವಮೊಗ್ಗ ರಂಗಾಯಣವು ಹಮ್ಮಿಕೊಂಡ ರಾಜ್ಯಮಟ್ಟದ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪವು ಏಪ್ರಿಲ್ 28ರಂದು ಸಂಜೆ 6.30ಕ್ಕೆ ಕುವೆಂಪು ರಂಗಮಂದಿರದಲ್ಲಿ ನಡೆಯಲಿದೆ. ಜೊತೆಗೆ ಮೂರು ದಿನಗಳ ಕಾಲ ನಾಟಕ ಪ್ರದರ್ಶನ ನಡೆಯುವುದು.
28ರಂದು ಕಲಾವಿದ ಬಿ. ಸುರೇಶ್ ಮುಖ್ಯ ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಭದ್ರಪ್ಪ ಶಿ. ಹೆನ್ಲಿರವರ ರಚನೆ, ಸಂತೋಷ್ ಗಡ್ಡಿಯಂಗಡಿಯವರ ನಿರ್ದೇಶನದಲ್ಲಿ ನಮ್ಮ ಧರಣಿ ಎಂಬ ನಾಟಕ ಪ್ರಸ್ತುತಗೊಳಿಸಲಾಗುತ್ತಿದೆ. ಏಪ್ರಿಲ್ 29ರಂದು ಹಾಸ್ಯ ಸಾಹಿತಿ, ನಾಟಕಕಾರ ದುಂಡಿರಾಜ್ ಅರು ಮುಖ್ಯ ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಎಸ್. ಮಾಲತಿಯವರ ರಚನೆ, ಪ್ರವೀಣ್ ಎಸ್. ಹಾಲ್ಮತ್ತೂರು ನಿರ್ದೇಶನದ ಮಾಯಾಬಜಾರ್ ನಾಟಕವನ್ನು ಮಕ್ಕಳು ಪ್ರಸ್ತುತಪಡಿಸುವರು.
ಏಪ್ರಿಲ್ 30ರಂದು ಬೆಂಗಳೂರಿನ ರಾಷ್ಟ್ರೀಯ ನಾಟಕ ಶಾಲೆಯ ನಿರ್ದೇಶಕ ಸುರೇಶ್ ಆನಗಳ್ಳಿಯವರು ಮುಖ್ಯ ಅತಿಥಿಯಾಗಿ ಭಾಗವಹಿಸುವ ಕಾರ್ಯಕ್ರಮದಲ್ಲಿ ಹೊ.ನ. ಸತ್ಯರವರ ರಚನೆ ಮತ್ತು ಸಂಗೀತ, ಅಜಯ್‌ಗೌಡ ನೀನಾಸಂರ ನಿರ್ದೇಶನದ ಬೆನವಾ ಎಲ್ಲಿರುವೆ ಎಂಬ ನಾಟಕವನ್ನು ಕುವೆಂಪು ರಂಗಮಂದಿರದಲ್ಲಿ ಪ್ರತಿದಿನ 6.30ಕ್ಕೆ ನಡೆಯಲಿದೆ ಎಂದು ರಂಗಾಯಣದ ಆಡಳಿತಾಧಿಕಾರಿಗಳಾದ ಎನ್. ಹರಿಕುಮಾರ್‌ರವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.