ಶಿವಮೊಗ್ಗದಲ್ಲೇ ಮತ ಏಣಿಕೆ
ಕ.ಪ್ರ.ವಾರ್ತ್ಣೆ ಶಿವಮೊಗ್ಗ ಏ.25
ಕಳೆದ ವಿಧಾನಸಭೆ ಚುನಾವಣೆಯಂತೆ ಈ ಬಾರಿಯೂ ಸಹ ಜಿಲ್ಲೆಯ ಎಲ್ಲಾ ವಿಧಾನಸಭಾ ಕ್ಷೇತ್ರಗಳ ಮೇ 8ರಂದು ಮತ ಏಣಿಕೆಯು ನಗರದ ರಾಷ್ಟ್ರೀಯ ಶಿಕ್ಷಣ ಸಂಸ್ಥೆಯ ಎಸ್.ಆರ್. ನಾಗಪ್ಪ ಶೆಟ್ಟಿ ಸ್ಮಾರಕ ಕಾಲೇಜು ಹಾಗೂ ರಾಷ್ಟ್ರೀಯ ಪದವಿಪೂರ್ವ ಕಾಲೇಜಿನಲ್ಲಿ ನಡೆಯಲಿದೆ.
ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ ಕೇಂದ್ರಗಳು ಆಯಾ ಕ್ಷೇತ್ರದ ವ್ಯಾಪ್ತಿಯಲ್ಲಿಯೇ ನಡೆಯಲಿವೆ. ನಗರದಲ್ಲಿ ಗುರುವಾರ ಜಿಲ್ಲಾಧಿಕಾರಿ ವಿಪುಲ್ ಬನ್ಸಾಲ್ ಅವರು ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ಮಸ್ಟರಿಂಗ್ ಹಾಗೂ ಡಿಮಸ್ಟರಿಂಗ್ಸ್ಥಳದ ವಿವರಗಳು ಇಂತಿವೆ.
ಶಿವಮೊಗ್ಗ ಗ್ರಾ.- ಶಿವಮೊಗ್ಗದ ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜು
ಭದ್ರಾವತಿ- ಭದ್ರಾವತಿಯ ನ್ಯೂಟೌನ್ನ ಸರ್ ಎಂ. ವಿಶ್ವೇಶ್ವರಯ್ಯ ಕಲಾ ಮತ್ತು ವಾಣಿಜ್ಯ ಕಾಲೇಜು, ಶಿವಮೊಗ್ಗ- ಶಿವಮೊಗ್ಗದ ಎಸ್.ಆರ್. ನಾಗಪ್ಪ ಶೆಟ್ಟಿ ಕಾಲೇಜು, ತೀರ್ಥಹಳ್ಳಿ- ತೀರ್ಥಹಳ್ಳಿಯ ಸರ್ಕಾರಿ ಪ.ಪೂ. ಕಾಲೇಜು
ಶಿಕಾರಿಪುರ- ಶಿಕಾರಿಪುರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸೊರಬ- ಸೊರಬದ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಸಾಗರ- ಸಾಗರದ ಸರ್ಕಾರಿ ಪಪೂ ಕಾಲೇಜು
ಮತದಾನ ಕೇಂದ್ರಗಳು: ವಿಧಾನಸಭೆ ಚುನಾವಣೆಗಾಗಿ ಜಿಲ್ಲೆಯಾದ್ಯಂತ 26 ಹೆಚ್ಚುವರಿ ಮತಗಟ್ಟೆಗಳೂ ಸೇರಿ 1,605 ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಇವುಗಳಲ್ಲಿ ಅತಿ ಹೆಚ್ಚು ಮತಗಟ್ಟೆಗಳನ್ನು ಹೊಂದಿರುವುದು ತೀರ್ಥಹಳ್ಳಿ. ಈ ಕ್ಷೇತ್ರದಲ್ಲಿ 246 ಮತಗಟ್ಟೆಗಳಿವೆ. ಉಳಿದಂತೆ ಶಿವಮೊಗ್ಗ ಗ್ರಾ.- 228, ಭದ್ರಾವತಿ- 239, ಶಿವಮೊಗ್ಗ- 230, ಶಿಕಾರಿಪುರ- 211, ಸೊರಬ- 215, ಸಾಗರ- 236 ಮತಗಟ್ಟೆಗಳಿವೆ.
ಅಂಚೆ ಮತಪತ್ರ: ಜಿಲ್ಲೆಯಲ್ಲಿ ಚುನಾವಣಾ ಕರ್ತವ್ಯದ ಮೇಲೆ ಹಾಜರಾಗುವ ಸಿಬ್ಬಂದಿಗೆ ಅಂಚೆ ಮತಪತ್ರ ವ್ಯವಸ್ಥೆ ಮಾಡಲಾಗಿದೆ. ಈವರೆಗೆ 8,365 ನಮೂನೆ 12 ಅರ್ಜಿಗಳನ್ನು ನೀಡಲಾಗಿದೆ. ಇವುಗಳನ್ನು ಭರ್ತಿ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿ 5,831 ಅರ್ಜಿ ವಾಪಸು ನೀಡಿದ್ದಾರೆ. ಒಟ್ಟು 1,192 ಅಂಚೆ ಮತಪತ್ರಗಳನ್ನು ನೀಡಿದ್ದು, ಇದರಲ್ಲಿ 802 ಮತಪತ್ರಗಳು ಚಲಾವಣೆ ಆಗಿವೆ.
ಸಿಬ್ಬಂದಿಗೆ ಎರಡನೇ ಹಂತದ ತರಬೇತಿಯು ಏ.29 ಹಾಗೂ 30ರಂದು ನಡೆಯಲಿದ್ದು, ಅಂದು ಸೌಲಭ್ಯ ಕೇಂದ್ರದಲ್ಲಿ ಮತದಾನ ಮಾಡುವ ನಿರೀಕ್ಷೆ ಇದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

