ಶಿವಮೊಗ್ಗ

ಮಹಲಿಂಗಪ್ಪ- ಬಿಎಸ್‌ವೈ ಭಾಯಿ ಭಾಯಿ

Published On :

1999ರಲ್ಲಿ ಮಹಲಿಂಗಪ್ಪ ಎದುರು ಯಡಿಯೂರಪ್ಪ ಸೋತಿದ್ದರು


ಕ.ಪ್ರ.ವಾರ್ತೆ ಟಿ ಶಿರಾಳಕೊಪ್ಪ ಟಿ  ಏ.26
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪನವರನ್ನು ಮಣಿಸಿ ರಾಜ್ಯಾದ್ಯಂತ ಹೆಸರು ಮಾಡಿದ್ದ ಮಾಜಿ ಶಾಸಕ ಮಹಲಿಂಗಪ್ಪ ಕಾಂಗ್ರೆಸ್ ತೊರೆದು ಯಡಿಯೂರಪ್ಪ ನೇತ್ರತ್ವದ ಕೆಜೆಪಿ ಸೇರಿದ್ದಾರೆ.
ಶಿರಾಳಕೊಪ್ಪದ ಮಹಲಿಂಗಪ್ಪನವರ ಮನೆಗೆ ತೆರಳಿದ ಯಡಿಯೂರಪ್ಪ ಕೆಜೆಪಿ ಸೇರಿದ ಅವರನ್ನು ಹಾರಹಾಕಿ ಬರಮಾಡಿಕೊಂಡರು.
ಬಿಎಸ್‌ವೈ ಸೋತಿದ್ದರು: 1999ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಂಗಾರಪ್ಪನವರ ಸಹಕಾರದಿಂದ ಯಡಿಯೂರಪ್ಪನವರನ್ನು ಮಣಿಸಿದ್ದ ಮಹಾಲಿಂಗಪ್ಪ ಮೊದಲು ಯಡಿಯೂರಪ್ಪನವರ ಗರಡಿಯಲ್ಲಿ ಬೆಳೆದು ತಾಪಂ ಅಧ್ಯಕ್ಷ ರಾಗಿ ಜಿಪಂ ಸದಸ್ಯರಾಗಿ ಕಾರ್ಯನಿರ್ವಹಿಸಿದ್ದರು.
ಪತ್ರಿಕೆಯೊಂದಿಗೆ ಮಾತನಾಡಿದ ಅವರು ಆಗ ಪಕ್ಷಬಿಡಲು ಪದ್ಮನಾಭ ಭಟ್ಟ ಕಾರಣ, ಈಗ ಪಕ್ಷ ಬಿಡಲು ಕಾಂಗ್ರೆಸ್‌ನಲ್ಲಿ ಇರುವಂತಹ ಕೆಲವೇ ಜನರ ವರ್ತನೆಗೆ ಬೇಸತ್ತು ಪಕ್ಷಬಿಟ್ಟಿದ್ದೇನೆ. ಈಗ ಇರುವಂತಹ ಹುರಿಯಾಳುಗಳಲ್ಲಿ ಯಡಿಯೂರಪ್ಪನವರು ಸೂಕ್ತ ಅಭ್ಯರ್ಥಿ ಎಂದು ಗುರುತಿಸಿ ಕೆಜೆಪಿ ಸೇರಿದ್ದೇನೆ ಎಂದರು.
ತೊಗರ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮತನಾಡಿದ ಮಹಲಿಂಗಪ್ಪ ಶಿಕಾರಿಪುರ ತಾಲ್ಲೂಕ ಹಾಗು ಬಡವರು ಮತ್ತು ಹಿಂದುಳಿದವರ ಅಭಿವೃದ್ಧಿ ಯಾಗಬೇಕು ಎಂದರು.
ಮೆರವಣಿಗೆ: ಸಾಧು ಲಿಂಗಾಯತರಾದ ಮಹಲಿಂಗಪ್ಪನವರು ತಾಲ್ಲೂಕಿನಾಧ್ಯಂತ ಉತ್ತಮ ಹೆಸರನ್ನು ಹೊಂದಿದ್ದು, ಎಲ್ಲ ಜನಾಂಗವರೊಂದಿಗೆ ಉತ್ತಮ ಭಾಂಧವ್ಯ ಹೊಂದಿದ್ದಾರೆ.
ಇವರ ಸೇರ್ಪಡೆಯಿಂದ ಇಂದು ತೊಗರ್ಸಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವರನ್ನು ಕರ್ನಾಟಕ ಜನತಾ ಪಕ್ಷದ ಕಾರ್ಯಕರ್ತರು ಮೆರವಣಿಗೆ ಮಾಡಿ ವೇದಿಕೆಗೆ ಬರಮಾಡಿಕೊಂಡರು.
ನಂತರ ತಮ್ಮಪಕ್ಷದ ಕಾರ್ಯಕರ್ತರೊಂದಿಗೆ ಮಾತನಾಡಿದ ಯಡಿಯೂರಪ್ಪ ಪಕ್ಷಕ್ಕೆ ಆಗಮಿಸಿರುವ ಮಹಲಿಂಗಪ್ಪನವರನ್ನು ಸರಿಯಾಗಿ ಉಪಯೋಗ ಪಡಿಸಿಕೊಳ್ಳುವಂತೆ ತಿಳಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.