ಚಿಹ್ನೆ ನೀಡುವಲ್ಲಿ ತಾರತಮ್ಯ
ಕ.ಪ್ರ.ವಾರ್ತೆ, ಭದ್ರಾವತಿ, ಏ.27
ಭದ್ರಾವತಿ ವಿಧಾನಸಭಾ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಿಗೆ ಚಿನ್ಹೆ ನೀಡುವಲ್ಲಿ ಚುನಾವಣಾಧಿಕಾರಿಗಳು ತಾರತಮ್ಯ ನೀತಿಯನ್ನು ಅನುಸರಿಸಿದ್ದಾರೆ ಎಂದು ಪಕ್ಷೇತರ ಅಭ್ಯರ್ಥಿ ಓಂ ವಿಜಯ ವಂಶಿ ದೂರಿದ್ದಾರೆ.
ಶನಿವಾರ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು ಏ.20ರಂದು ನೀಡಿದ ಉಮೇದುವಾರರ ಪಟ್ಟಿಯಲ್ಲಿ ತಮಗೆ ಏಣಿ ಚಿನ್ಹೆ ನೀಡಿದ್ದು, ನಂತರ ಏ.21ರ ಭಾನುವಾರ ದೀಢೀರನೆ ಅಭ್ಯರ್ಥಿಗಳ ಸಭೆ ಕರೆದು ತಮಗೆ ಕ್ರಿಕೆಟ್ ಬ್ಯಾಟ್ ಚಿನ್ಹೆ ನೀಡಿದ್ದಾರೆ ಎಂದು ಆರೋಪಿಸಿದರು.
ನ್ಯಾಯಾಲಯಕ್ಕೆ ಮನವಿ: ಈ ಸಂಬಂಧ ತಾವು ನ್ಯಾಯಾಲಯಕ್ಕೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದು ಅದಕ್ಕೆ ಸಂಬಂಧಿಸಿದ ಕೆಲವು ದಾಖಲೆಗಳಿಗಾಗಿ ಅರ್ಜಿ ಸಲ್ಲಿಸಿದ್ದು, ಅವು ದೊರಕಿದ ತಕ್ಷಣ ಕಾನೂನು ರೀತ್ಯಾ ಭದ್ರಾವತಿ ವಿಧಾನಸಭಾ ಚುನಾವಣಾ ಪ್ರಕ್ರಿಯೆ ರದ್ದುಗೊಳಿಸಲು ಕ್ರಮ ಜರುಗಿಸುವುದಾಗಿ ತಿಳಿಸಿದರು. ಈ ಬಗ್ಗೆ ತಾವು ಚುನಾವಣಾಧಿಕಾರಿಗಳಿಗೂ ಹೇಳಿರುವುದಾಗಿ ತಿಳಿಸಿದರು.
ಪಕ್ಷೇತರ ಅಭ್ಯರ್ಥಿ ಬಿ.ಕೆ. ಸಂಗಮೇಶ್ವರ ಅವರಿಗೆ ಟೆಲಿವಿಶನ್ ಚಿಹ್ನೆ ನೀಡಿರುವ ಬಗ್ಗೆಯೂ ಓಂ ವಿಜಯ ವಂಶಿ ಆಕ್ಷೇಪಣೆ ವ್ಯಕ್ತಪಡಿಸಿ ಚುನಾವಣಾಧಿಕಾರಿಗಳಿಗೆ ಪತ್ರ ನೀಡಿದ್ದಾರೆ. ತಾವು ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಮೊದಲು ನಾಮಪತ್ರ ಸಲ್ಲಿಸಿ ಟೆಲಿವಿಶನ್ ಅಥವಾ ಏಣಿ ಚಿನ್ಹೆಯನ್ನು ಕೇಳಿದ್ದು, ಆದರೆ ಏಣಿ ನೀಡಿರುವುದಾಗಿ ತಿಳಿಸಿ ಅಧಿಕೃತ ಉಮೇದುವಾರರ ಪಟ್ಟಿಯನ್ನೂ ನೀಡಿದ್ದರು.
ಪ್ರಚಾರವೂ ಆರಂಭ: ಅದರಂತೆ ತಾವು ಏಣಿ ಚಿನ್ಹೆಯನ್ನು ತಮ್ಮದೆಂದು ಹೇಳಿ ಚುನಾವಣಾ ಪ್ರಚಾರ ಸಹ ಪ್ರಾರಂಭಿಸಿಯಾಗಿತ್ತು. ಆದರೆ ನಂತರ ಏಕಾಏಕಿ ಭಾನುವಾರ (ಏ.21) 12 ಗಂಟೆಗೆ ಚುನಾವಣಾಧಿಕಾರಿಗಳು ದೂರವಾಣಿ ಮುಖಾಂತರ ಅಭ್ಯರ್ಥಿಗಳ ಸಭೆಯನ್ನು ನಡೆಸಲಿರುವುದಾಗಿ ತಿಳಿಸಿ ತಾವು ಅಲ್ಲಿಗೆ ಹೋದಾಗ ಚಿನ್ಹೆಗಳು ಬದಲಾವಣೆಯಾಗಿರುವುದಾಗಿ ತಿಳಿಸಿ ತಮ್ಮ ಚಿನ್ಹೆ ಏಣಿಯಲ್ಲ ಕ್ರಿಕೆಟ್ ಬ್ಯಾಟ್ ಎಂದು ತಿಳಿಸಿದರು. ಈ ವಿಷಯ ಕುರಿತು ತಾವು ಶಿವಮೊಗ್ಗ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಿರುವುದಾಗಿ ಅವರು ಸುದ್ದಿಗಾರರಿಗೆ ತಿಳಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

