ಶಿವಮೊಗ್ಗ

ತುಂಗೆ- ಭದ್ರೆಯಲ್ಲಿ ಭಾರಿ ಪ್ರವಾಹ

Published On :

ಶಿವಮೊಗ್ಗ: ಪುಷ್ಯ ಮಳೆ ಮಲೆನಾಡಿನಾದ್ಯಂತ ಅಬ್ಬರಿಸಿದ್ದು, ನದಿಗಳಲ್ಲಿ ಪ್ರವಾಹ ಹೆಚ್ಚಾಗುತ್ತಿದೆ. ಭದ್ರಾ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದುದ್ದಕ್ಕೂ ಹಲವು ಕಡೆ ಅಕ್ಕಪಕ್ಕದ ಗ್ರಾಮಗಳಿಗೆ ನೀರು ನುಗ್ಗಿದೆ.
ತುಂಗಾ ಜಲಾಶಯದಿಂದ 63 ಸಾವಿರ ಕ್ಯುಸೆಕ್ ನೀರು ಹರಿದುಬರುತ್ತಿದ್ದು, ಭದ್ರಾ ನದಿಯೊಂದಿಗೆ ಸೇರಿ ಕೂಡಲಿ ನಂತರ ತುಂಗಭದ್ರಾ ನದಿಯಲ್ಲಿ ಸರಿಸುಮಾರು ಒಂದೂಕಾಲು ಲಕ್ಷ ಕ್ಯುಸೆಕ್ ನೀರು ಹರಿಯುತ್ತಿದೆ.
ಲಿಂಗನಮಕ್ಕಿ ಜಲಾಶಯಕ್ಕೂ ಸಹ ಒಳಹರಿವಿನ ಪ್ರಮಾಣದಲ್ಲಿ ಭಾರಿ ಏರಿಕೆಯಾಗಿದ್ದು, 88 ಸಾವಿರ ಕ್ಯುಸೆಕ್ ನೀರು ಹರಿದು ಬರುತ್ತಿದೆ. ಈ ಸಂದರ್ಭದಲ್ಲಿ 37 ಸಾವಿರ ಕ್ಯುಸೆಕ್ ನೀರನ್ನು ಹೊರಬಿಡುತ್ತಿದ್ದು, ಜೋಗ ಜಲಪಾತ ಅಬ್ಬರಿಸಿ ಧುಮುಕುತ್ತಿದೆ.
ಶಿವಮೊಗ್ಗದ ಗೋಪಾಳ ಬಡಾವಣೆ ಸಮೀಪದ ಜಯನಗರ ಹಾಗೂ ಆಯನೂರಿನಲ್ಲಿ ಮನೆಯೊಂದು ಕುಸಿದಿದೆ. ಹುಂಚದಕಟ್ಟೆಯಲ್ಲಿ 19 ಸೆ.ಮೀ., ಹೊಸನಗರ 15, ಲಿಂಗನಮಕ್ಕಿ 14, ತಾಳಗುಪ್ಪ 12, ಸಾಗರ 8, ತ್ಯಾಗರ್ತಿ 7, ಭದ್ರಾವತಿ 6, ತೀರ್ಥಹಳ್ಳಿ 5, ಶಿಕಾರಿಪುರ ಹಾಗೂ ಶಿರಾಳಕೊಪ್ಪ 4, ಆನವಟ್ಟಿ ಹಾಗೂ ಸೊರಬ 3, ಅರಸಾಳು ಹಾಗೂ ಹೊಳಲೂರು 2, ಭದ್ರಾವತಿ 6, ತೀರ್ಥಹಳ್ಳಿ 5, ಸಾಗರ 8, ಶಿವಮೊಗ್ಗದಲ್ಲಿ 2 ಸೆ.ಮೀ. ಮಳೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.