ಶಿವಮೊಗ್ಗ

ಭೀಮರಾಯಪ್ಪ ಅಧ್ಯಕ್ಷರಾಗಿ ಆಯ್ಕೆ

Published On :

ಸೊರಬ: ತಾಲೂಕು ಉದ್ರಿ ಗ್ರಾಪಂ ಅಧ್ಯಕ್ಷರಾಗಿ ಹೆಚ್. ಭೀಮರಾಯಪ್ಪ ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಈ ಹಿಂದೆ ಉದ್ರಿ ಗ್ರಾಪಂ ಅಧ್ಯಕ್ಷರ ಆಯ್ಕೆ ವೇಳೆ ಬಂದ ಮತಗಳ ಕುರಿತು ಗೊಂದಲ ಏರ್ಪಟ್ಟು, ಮರು ಎಣಿಕೆಗಾಗಿ ರಿಟ್ ಅರ್ಜಿ ಸಲ್ಲಿಸಿ ನ್ಯಾಯಾಲಯದ ಮೊರೆ ಹೋಗಲಾಗಿತ್ತು.ಕೋರ್ಟ್ ಆದೇಶದಂತೆ ಈಚೆಗೆ ಮರು ಎಣಿಕೆ ನಡೆಯಿತು. ಈ ಹಿಂದೆ ನಡೆದ ಚುನಾವಣೆ ವೇಳೆ ಒಟ್ಟು 16 ಸದಸ್ಯರುಗಳು ಮತ ಚಲಾಯಿಸಿದ್ದು, ಮರು ಎಣಿಕೆ ಬಳಿಕ ಭೀಮರಾಯಪ್ಪ ಇವರಿಗೆ 07 ಅವರ ಎದುರಾಳಿ ಹನುಮಂತಪ್ಪ ಅವರಿಗೆ 06 ಮತಗಳು ಬಂದದ್ದು,  ನಿಖರಗೊಂಡ ಬಳಿಕ ಹೆಚ್. ಭೀಮರಾಯಪ್ಪ  ಅಧ್ಯಕ್ಷರಾಗಿ ಆಯ್ಕೆಯಾದರು. ಈ ಮೊದಲು ಹನುಮಂತಪ್ಪ ಅವರು ವಿಜಯಿ ಎಂದು ಘೋಷಿಸಿದ್ದು, ಇಲ್ಲಿಯವರೆಗೂ ಅವರೇ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಮರು ಎಣಿಕೆ ವೇಳೆ ಗ್ರಾಪಂ ಮಾಜಿ ಅಧ್ಯಕ್ಷ ಎಲಿಗಾರ್ ಹನುಮಂತಪ್ಪ, ಮಾಜಿ ಉಪಾಧ್ಯಕ್ಷ ಪರಮೇಶ್ವರಪ್ಪ, ಸದಸ್ಯರಾದ ವಾಸಪ್ಪ, ನಾಗೇಂದ್ರಪ್ಪ, ಕೆ.ಹೆಚ್. ಸುರೇಶ್, ಡಿ. ಹನುಮಂತಮ್ಮ, ಕೆ.ಎಂ. ಲೀಲಾವತಿ ಮೊದಲಾದವರು ಇದ್ದರು.
ಪಡಿತರ ಬಿಡುಗಡೆ
ಚಿಕ್ಕಮಗಳೂರು: ಆಗಸ್ಟ್ ಮಾಹೆಗೆ ಜಿಲ್ಲೆಯ ಗ್ರಾಮಾಂತರ ಹಾಗೂ ಪಟ್ಟಣ ಪ್ರದೇಶದ ಎಎವೈ ಹಾಗೂ ಬಿಪಿಎಲ್ ಪಡಿತರ ಚೀಟಿದಾರರಿಗೆ ಒಂದು ಕೆ.ಜಿ. ಸಕ್ಕರೆ ಬಿಡುಗಡೆ ಮಾಡಲಾಗಿದೆ. ಸಂಬಂಧಪಟ್ಟ ನ್ಯಾಯಬೆಲೆ ಅಂಗಡಿಯಿಂದ ತಿಂಗಳ ಒಳಗೆ ಪಡೆಯಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಅರ್ಜಿ ಆಹ್ವಾನ
ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷೆ ಮಂಡಳಿ ವತಿಯಿಂದ ಮೇ 2013ರಲ್ಲಿ ನಡೆಯಬೇಕಿದ್ದ ಹಿಂದಿ ಶಿಕ್ಷಕ್ ಕೋರ್ಸ್ ಪರೀಕ್ಷೆ ಆಗಸ್ಟ್ 26 ರಿಂದ ಪ್ರಾರಂಭವಾಗಲಿದೆ. 2013-14ನೇ ಸಾಲಿಗೆ ವಿದ್ಯಾರ್ಥಿಗಳು ಪ್ರವೇಶ ಪಡೆಯಬಹುದಾಗಿದ್ದು. ಮಾಹಿತಿಗಾಗಿ ಹಿಂದೀ ಶಿಕ್ಷಕ್ ಟ್ರೈನಿಂಗ್ ಕಾಲೇಜ್, ಕರ್ನಾಟಕ ಹಿಂದೀ ಸಭಾ, ಹಿಂದೀ ಭವನ, ಜಿಪಂ ಕಚೇರಿ ಎದುರು, ಮಂಡ್ಯ ಇವರನ್ನು ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.