ಶಿವಮೊಗ್ಗ

ಕಾನೂನು ಬದ್ಧ ಸಂಭ್ರಮದ ಆಚರಣೆ ಅಗತ್ಯ: ಲಿಂಗದಾಳ್

Published On :

ಸೊರಬ: ವಿಶೇಷ ಸಂಭ್ರಮಾಚರಣೆ ವೇಳೆ ಎಲ್ಲ ಸಮುದಾಯದವರೂ ಕಾನೂನು ಬದ್ಧ ಆಚರಣೆ ನಡೆಸಬೇಕು ಎಂದು ವೃತ್ತ ನಿರೀಕ್ಷಕ ಎಫ್.ಎನ್. ಲಿಂಗದಾಳ್ ತಿಳಿಸಿದರು.
ಪಟ್ಟಣದ ಪೊಲೀಸ್  ಠಾಣೆಯಲ್ಲಿ ರಂಜಾನ್ ಪ್ರಯುಕ್ತ ವಿವಿಧ ಸಮುದಾಯದ ಮುಖಂಡ, ಸಾರ್ವಜನಿಕರು, ಜನಪ್ರತಿನಿಧಿಗಳಿಗೆ ಕರೆದಿದ್ದ ಶಾಂತಿ ಸಭೆ ಉದ್ದೇಶಿಸಿ ಅವರು ಮಾತನಾಡಿದರು.
ಅಹಿತಕರ ಘಟನೆ ನಡೆದಿಲ್ಲ: ಇಲ್ಲಿಯವರೆಗೆ ತಾಲೂಕಿನಲ್ಲಿ ಸಮುದಾಯ, ಧರ್ಮ, ಆಚರಣೆ ಕುರಿತಂತೆ ಯಾವುದೇ ರೀತಿಯ ಅಹಿತಕರ ಘಟನೆ ನಡೆದಿಲ್ಲ. ಮುಂದೆಯೂ ಅದೇ ರೀತಿ ಶಾಂತಿ ಸೌಹಾರ್ದತೆ ಕಾಯುಕೊಂಡು  ಹೋಗುವುದು ನಮ್ಮಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ರಂಜಾನ್ ಮೆರವಣಿಗೆ, ಧ್ವನಿವರ್ಧಕದ ಬಳಕೆಯಿಂದ ಇನ್ನೊಬ್ಬರಿಗೆ ತೊಂದರೆಯಾಗದಂತೆ ಎಚ್ಚರ ವಹಿಸಬೇಕು ಎಂದು ಸೂಚಿಸಿದರು.
ಕಳವು ಬಗ್ಗೆ ಚರ್ಚೆ: ಪಪಂ ಸದಸ್ಯ ಮಹೇಶ್ ಗೌಳಿ, ಕಳ್ಳತನದ ಪ್ರಕರಣಗಳ ಕುರಿತಂತೆ ಚರ್ಚಿಸಿದರು. ಪಟ್ಟಣದ ಕೆಲವೆಡೆ ರೋಡ್ ಹಂಪ್ ನಿರ್ಮಿಸಬೇಕು. ವಿದ್ಯಾರ್ಥಿಗಳಿಗೆ ಕಿರುಕುಳ ನೀಡುತ್ತಿರುವವರ ಸಂಖ್ಯೆ ಅಧಿಕವಾಗಿದೆ, ಅಂತವರ ವಿರುದ್ಧ ಹಾಗೂ  ಪರವಾನಿಗೆ ಇಲ್ಲದೆ ದ್ವಿಚಕ್ರ ಓಡಿಸುವವರ ಬಗ್ಗೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದರು.
ಪಿಎಸ್‌ಐ ಮಹಬಲೇಶ್ವರ ನಾಯ್ಕ್, ಕ್ರೈಂ ಬ್ರಾಂಚ್‌ನ ರಾಜು, ಪಪಂ ಸದಸ್ಯ ಸುಜಾಯತ್ ಉಲ್ಲಾ, ಅಂಜುಮಾನ್ ಕಮಿಟಿ ಅಧ್ಯಕ್ಷ ಎನ್.ನೂರ್ ಅಹ್ಮದ್, ಗ್ರಾಪಂ ಸದಸ್ಯ ಎಸ್.ಆರ್. ಕುಮಾರಸ್ವಾಮಿ, ಬಂದಗಿ ಬಸವರಾಜ ಶೇಠ್, ತಾಲೂಕು ಕಸಾಪ ಅಧ್ಯಕ್ಷ ಮಧುರಾಯಶೇಠ್, ಟಿ.ಆರ್. ಸುರೇಶ್, ಮುಕ್ತಿಯಾರ್ ಅಹ್ಮದ್, ಮಹಬೂಬ್ ಮೊದಲಾದವರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.