ಸಮಯಪ್ರಜ್ಞೆಯಿಂದ ಯಶಸ್ಸು ಸಾಧ್ಯ
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.7
ವಿದ್ಯಾರ್ಥಿಗಳಿಗೆ ಸಮಯ ಪ್ರಜ್ಞೆ ಎಂಬುದು ಬಹಳ ಮುಖ್ಯ. ಸಮಯದೊಂದಿಗೆ ನಡೆದರೆ ಭವಿಷ್ಯದಲ್ಲಿ ಯಶಸ್ಸು ಗಳಿಸಬಹುದು ಎಂದು ಉಪವಿಭಾಗಧಿಕಾರಿ ಕುಸುಮಾ ಕುಮಾರಿ ಹೇಳಿದರು.
ರಾಷ್ಟ್ರೀಯ ಪದವಿ ಪೂರ್ವ ಕಾಲೇಜು ಬುಧವಾರ ಕುವೆಂಪು ರಂಗಮಂದಿರದಲ್ಲಿ ಆಯೋಜಿಸಿದ್ದ ವಿದ್ಯಾರ್ಥಿ ಸಾಂಸ್ಕೃತಿಕ ವೇದಿಕೆ, ಕ್ರೀಡಾ ವೇದಿಕೆ ಮತ್ತು ಎನ್‌ಎಸ್‌ಎಸ್ ಘಟಕದ ಉದ್ಘಾಟನಾ ಸಮಾರಂಭದಲ್ಲಿ ಅವರು, ಸಮಯ ಎಂಬುದು ಮನುಷ್ಯನ ಜೀವನದಲ್ಲಿ ಬಹಳ ಮುಖ್ಯ. ಅದರಲ್ಲಿಯೂ ವಿದ್ಯಾರ್ಥಿಗಳ ಜೀವನದಲ್ಲಿ ಸಮಯ ಪ್ರಮುಖ ಪಾತ್ರವಹಿಸುತ್ತದೆ.
ಯಾವುದೇ ಸಮಯಕ್ಕೆ ನಿರ್ದಿಷ್ಟ ಸಮಯವನ್ನು ಮೀಸಲಿರಿಸಿಕೊಳ್ಳಬೇಕು ಎಂದು ತಿಳಿಸಿದರು.
ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ವಿ. ತಿಮ್ಮಯ್ಯ, ಶಿಕ್ಷಣಕ್ಕೆ ಮನುಷ್ಯನ ವರ್ತನೆಯಲ್ಲಿ ಪರಿವರ್ತನೆಗೊಳ್ಳಿಸುವ ಶಕ್ತಿ ಇದೆ. ಶಿಕ್ಷಣ ಅರಿವಿರದ ವಿಷಯವನ್ನು ತಿಳಿಸುವ ಸಾಧನವಲ್ಲ. ಅದು ನಮ್ಮಲ್ಲಿರುವ ವರ್ತನೆಯನ್ನು ಪರಿಪೂರ್ಣಗೊಳಿಸಿ ಉತ್ತಮ ಸಂಸ್ಕಾರ ನೀಡುವ ಸಾಧನವಾಗಿದೆ.
ಪ್ರತಿಯೊಬ್ಬ ವ್ಯಕ್ತಿಯ ಪರಿಪೂರ್ಣರೆಂದು ಹೇಳಲಾಗದು. ಆದರೆ, ಪರಿಪೂರ್ಣತೆಯ ಹಾದಿಯಲ್ಲಿ ಸಾಗುವ ಪ್ರತಿಯೊಬ್ಬರು ವಿದ್ಯಾರ್ಥಿಗಳಾಗಿರುತ್ತಾರೆ. ಬದುಕನ್ನು ಕಟ್ಟಿಕೊಳ್ಳುವಳ್ಳಿ ಶಿಕ್ಷಣ ಮುಖ್ಯ ಪಾತ್ರ ವಹಿಸಲಿದ್ದು, ಹಲವು ಅವಕಾಶಗಳನ್ನು ಒದಗಿಸಿಕೊಡುತ್ತದೆ. ಹಾಗಾಗಿ ಪ್ರತಿಯೊಬ್ಬರು ಅದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಹೇಳಿದರು.
ಅಧ್ಯಯನಶೀಲರಾಗಿ: ಇಂದು ನೀವು ಬಯಸಿದ ಶಿಕ್ಷಣವನ್ನು ಪಡೆಯಲು ಎಲ್ಲಾ ರೀತಿಯ ಸೌಲಭ್ಯಗಳಿದ್ದು, ತಮ್ಮ ಆಯ್ಕೆ ಮುಂದಿನ ಜೀವನಕ್ಕೆ ಪೂರಕವಾಗುವಂತಿರಬೇಕು.
ಜ್ಞಾನಕ್ಕೆ ಯಾವುದೇ ಮಿತಿಯಿಲ್ಲ. ಅದು ನಿರಂತರತೆಯಿಂದ ಕೂಡಿದ ಪ್ರಕ್ರಿಯೆ ಎಂದ ಅವರು, ಅಧ್ಯಯನ ಹಾಗೂ ಅಧ್ಯಾಪನ ಅಧ್ಯಾಪಕರ ನಾಡಿ ಆಗಿರಬೇಕು. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳನ್ನು ಪರಿಪೂರ್ಣತೆ ಹಾದಿಯಲ್ಲಿ ಕೊಂಡೊಯ್ಯಲು ಸಾಧ್ಯ. ಹಾಗಾಗಿ ಅಧ್ಯಾಪಕರು ಅಧ್ಯಯನಶೀಲರಾಗಬೇಕು ಎಂದರು.
ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲ ಯು.ಎನ್. ಜಗದೀಶ್, ನಿವೃತ್ತ ಉಪನ್ಯಾಸಕ ಟಿ.ಕೆ. ಪದ್ಮನಾಭಗುಪ್ತ, ಎನ್. ಕುಮಾರಸ್ವಾಮಿ, ಎಚ್.ವಿ. ಶುಭಕರ್, ಟಿ. ರವಿಕುಮಾರ್ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

