ಹಳ್ಳಿಕೆರೆ ಶಾಲೆಯಲ್ಲಿ 'ಕ್ಷೀರ ಭಾಗ್ಯ'ಕ್ಕೆ ಚಾಲನೆ
ಭದ್ರಾವತಿ: ಇತ್ತೀಚೆಗೆ ಹಳ್ಳಿಕೆರೆಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಷೀರಭಾಗ್ಯ ಯೋಜನೆಯನ್ನು ಗ್ರಾಮ ಪಂಚಾಯ್ತಿ ಸದಸ್ಯ ಕೆ.ಆರ್. ಪ್ರಭುಕುಮಾರ್ ಶಾಲಾ ವಿದ್ಯಾರ್ಥಿಗಳಿಗೆ ಹಾಲು ವಿತರಿಸುವುದರ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಮುಖ್ಯಶಿಕ್ಷಕ ಎಸ್. ಕೂಬಾನಾಯ್ಕ ಮಕ್ಕಳಲ್ಲಿ ಪೌಷ್ಟಿಕಾಂಶ ಹೆಚ್ಚಿಸಿ ಜ್ಞಾನಾರ್ಜನೆಗೆ ಪೂರಕವಾಗುವ ಯೋಜನೆಯ ಮಹತ್ವವನ್ನು ವಿವರಿಸಿದರು. ವಿದ್ಯಾರ್ಥಿಗಳಿಗೆ ವಾರದಲ್ಲಿ ಮೂರು ದಿನ ಕುಡಿಯಲು ಹಾಲು ಕೊಡುವುದರಿಂದ ಅದಕ್ಕೆ ಅಗತ್ಯವಾದ 150 ಸ್ಟೀಲ್ ಲೋಟಗಳನ್ನು ಗ್ರಾ.ಪಂ. ಸದಸ್ಯ ಕೆ.ಆರ್. ಪ್ರಭುಕುಮಾರ್ ಕಾಣಿಕೆಯಾಗಿ ನೀಡಿದರು. ಗ್ರಾಪಂ ಅಧ್ಯಕ್ಷ ಪ್ರೇಮ್ಕುಮಾರ್ ಮತ್ತು ಕಾರ್ಯದರ್ಶಿ ಶಿವಾನಂದ್ ಸುಬೇದಾರ್, ಶೋಭ ಮತ್ತಿತರು ಹಾಜರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ರಮೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಕೆ. ನಾಗರಾಜ್ ಸ್ವಾಗತಿಸಿದರು. ಸಿ.ಎನ್. ಶೋಭ ವಂದಿಸಿದರು.
ಸಂತಾಪ
ಶೃಂಗೇರಿ: ನರಸಿಂಹರಾಜಪುರದ ಹಿರಿಯ ವಕೀಲ ಬೊಮ್ಮಪ್ಪರವರ ನಿಧನಕ್ಕೆ ಕ್ಷೇತ್ರ ವಕೀಲರ ಸಂಘ ಸಂತಾಪ ಸೂಚಿಸಿದೆ. ಇವರು ಶೃಂಗೇರಿ, ಕೊಪ್ಪ, ಎನ್.ಆರ್. ಪುರ ನ್ಯಾಯಾಲಯಗಳಲ್ಲಿ ವಕೀಲರಾಗಿ ಸುಮಾರು 50 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. ವಕೀಲರ ಸಂಘದ ಅಧ್ಯಕ್ಷರಾಗಿಯೂ ವಿವಿಧ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಸಂಘವು ಸಂತಾಪ ವ್ಯಕ್ತಪಡಿಸಿದೆ.
13ರಂದು ಪಡಿತರ ಅಂಗಡಿ ಸಿಬ್ಬಂದಿ ಪ್ರತಿಭಟನೆ
ಚಿತ್ರದುರ್ಗ: ಪಡಿತರ ಧಾನ್ಯಗಳ ಸಾಗಾಣಿಕೆಗೆ ಹೆಚ್ಚಿನ ಬಾಡಿಗೆ ನೀಡಬೇಕಾಗಿರುವುದರಿಂದ ನಷ್ಟ ಅನುಭವಿಸುತ್ತಿರುವುದು ಹಾಗೂ ಇತರೆ ಬೇಡಿಕೆಗಳನ್ನು ಈಡೇರಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ನಗರ ಪ್ರದೇಶ ಮತ್ತು ಗ್ರಾಮಾಂತರ ನ್ಯಾಯಬೆಲೆ ಅಂಗಡಿ ಮಾಲೀಕರು ಹಾಗೂ ಸಹಕಾರ ಸಂಘಗಳ ಕಾರ್ಯದರ್ಶಿಗಳ ಸಂಘದ ವತಿಯಿಂದ ಆ.13 ರಂದು ಪ್ರತಿಭಟನೆ ನಡೆಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಗುವುದು ಎಂದು ನ್ಯಾಯಬೆಲೆ ಅಂಗಡಿ ಸಂಘದ ಅಧ್ಯಕ್ಷ ಎಂ. ಭೀಮಣ್ಣ ತಿಳಿಸಿದ್ದಾರೆ. ಪಡಿತರ ಧಾನ್ಯಗಳ ಸಾಗಣೆಗೆ ಬಾಡಿಗೆ ದುಬಾರಿಯಾಗಿದ್ದು, ಅಲ್ಲದೆ ನ್ಯಾಯಬೆಲೆ ಅಂಗಡಿಗಳಿಗೆ ಅಗತ್ಯವಾಗಿರುವ ಬಿಲ್ ಬುಕ್ ಮತ್ತು ಇತರೆ ಸಾಮಗ್ರಿಗಳನ್ನು ನ್ಯಾಯಬೆಲೆ ಅಂಗಡಿಯವರು ಪೂರೈಸಿಕೊಳ್ಳಬೇಕು. ಗ್ರಾಮಾಂತರ ನ್ಯಾಯಬೆಲೆ ಅಂಗಡಿಗಳಿಗೆ ನೀಡುವ ಬಾಡಿಗೆ ವೆಚ್ಚವನ್ನು ನಗರ ಪ್ರದೇಶದ ನ್ಯಾಯಬೆಲೆ ಅಂಗಡಿಗಳಿಗೂ ನೀಡಬೇಕು ಹಾಗೂ ನ್ಯಾಯಬೆಲೆ ಅಂಗಡಿಗಳ ಸಿಬ್ಬಂದಿಗೆ ಸರ್ಕಾರವೇ ಸಂಬಳ ನೀಡಬೇಕೆಂದು ನ್ಯಾಯಬೆಲೆ ಅವರು ಒತ್ತಾಯಿಸಿದ್ದಾರೆ. ಸಮಸ್ತ ನ್ಯಾಯಬೆಲೆ ಅಂಗಡಿಗಳ ಮಾಲೀಕರು ಪ್ರತಿಭಟನೆಯಲ್ಲಿ ಪಾಲ್ಗೊಳ್ಳುವಂತೆ ಭೀಮಣ್ಣ ಕೋರಿದ್ದಾರೆ.
ಇಂದು ಉದ್ಘಾಟನೆ
ದಾವಣಗೆರೆ: ಬೆಂಗಳೂರಿನ ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಯಮಿತದಿಂದ ಗಂಧದ ಉತ್ಪನ್ನಗಳ ಮಾರಾಟ ಮಳಿಗೆ ಉದ್ಘಾಟನಾ ಸಮಾರಂಭ ಆ.9ರಂದು ದಾವಣಗೆರೆ ಎಂಸಿಸಿ ಎ ಬ್ಲಾಕ್ನ ಪಾಲಿಕೆ ಸ್ಟಾಲ್ ನಂ.17ರಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 7.30ಕ್ಕೆ ಸಂಸ್ಥೆ ಡಿಜಿಎಂ ಸಿ.ಎಂ. ಸುವರ್ಣಕುಮಾರ ಅಧ್ಯಕ್ಷತೆಯಲ್ಲಿ ಮಳಿಗೆ ಉದ್ಘಾಟನೆಗೊಳ್ಳಲಿವೆ. ಜಿಲ್ಲಾಧಿಕಾರಿ ಎಸ್ಸೆಸ್ ಪಟ್ಟಣಶೆಟ್ಟಿ, ಪಾಲಿ ಕೆ ಆಯುಕ್ತ ಸಂಜಣ್ಣ ಶೆಟ್ಟಣ್ಣನವರ್, ಸದಸ್ಯರಾದ ದಿನೇಶ ಕೆ. ಶೆಟ್ಟಿ, ಪಿ.ಕೆ, ಲಿಂಗರಾಜ ಇತರರು ಭಾಗವಹಿಸುವರು ಎಂದು ರಮೇಶ, ಆರ್.ಎಂ. ವಿವೇಕ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನೌಕರರ ಸಮಸ್ಯೆಗೆ ಸ್ಪಂದಿಸುವೆ
ಹೊಸದುರ್ಗ: ತಾಲೂಕಿನಲ್ಲಿ ಸರ್ಕಾರಿ ನೌಕರ ಸಂಘ ಶಕ್ತಿಯುತವಾಗಿದ್ದು ನೌಕರರ ಸಮಸ್ಯೆಗಳಿಗೆ ಸ್ಪಂದಿಸಲು ಸಿದ್ಧವಾಗಿದೆ ಎಂದು ಹೊಸದುರ್ಗ ಶಾಖೆಯ ನೌಕರರ ಸಂಘದ ಅಧ್ಯಕ್ಷ ಎಂ.ಆರ್.ಸಿ. ಮೂರ್ತಿ ತಿಳಿಸಿದರು. ಸರ್ಕಾರಿ ನೌಕರ ಭವನದಲ್ಲಿ ಅಧಿಕಾರ ಹಸ್ತಾಂತರ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿ, ಮುಂದಿನ ಅಧಿಖಾರ ಅವಧಿಯಲ್ಲಿ ಸಂಘವನ್ನು ಇನ್ನಷ್ಟು ಸದೃಢಗೊಳಿಸಲಾವುದು ಎಂದರು. ನಾಗರಾಜ್, ಕ್ಷೇತ್ರ ಶಿಕ್ಷಣಾಧಿಕಾರಿ ಸಿ.ಎಂ. ತಿಪ್ಪೇಸ್ವಾಮಿ, ರಾಘವೇಂದ್ರ ಪ್ರಸಾದ್, ಬಿ.ಕೆ.ನಾಗರಾಜಪ್ಪ, ಮೌಸೀನ್, ಶ್ರೀನಿವಾಸ್, ಡಾ.ನದಾಫ್, ಶಿರಸ್ತೆದಾರ್ ಜಯಣ್ಣ, ಮಲ್ಲಣ್ಣ ಮಾತನಾಡಿದರು. ತಿಪ್ಪೇಶಪ್ಪ, ಅಶೋಕ, ರಂಗಪ್ಪ, ಲಕ್ಷ್ಮಯ್ಯ, ಸಿದ್ದಪ್ಪ, ಗಂಗಾಧರ್ ಇದ್ದರು.
ದುರಭ್ಯಾಸಗಳಿಂದ ದೂರವಿರಿ
ಹಿರಿಯೂರು: ವ್ಯಾಸಂಗದಿಂದ ವಿಮುಖಗೊಂಡು ದುರಭ್ಯಾಸಗಳಿಗೆ ಬಲಿಯಾಗುವುದರಿಂದ ಭವಿಷ್ಯ ಹಾಳು ಮಾಡಿಕೊಂಡಂತಾಗುತ್ತದೆ ಆದ್ದರಿಂದ ಎಚ್ಚರದಿಂದ ಭವಿಷ್ಯ ರೂಪಿಸಿಕೊಳ್ಳಬೇಕಿದೆ ಎಂದು ಪ್ರಾಂಶುಪಾಲ ನಾಗಣ್ಣ ಸಲಹೆ ಮಾಡಿದರು. ಪಟ್ಟಣದ ವೇದಾವತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಿದ್ದ ಪುನಶ್ಚೇತನ ಕಾರ್ಯಕ್ರಮದಲ್ಲಿ ಮಾತನಾಡಿದರು.ಪ್ರಾಧ್ಯಾಪಕ ಚಂದ್ರಶೇಖರಪ್ಪ, ವೀರೇಂದ್ರ, ಗಿರೀಶ್ ಯಾದವ್, ಶ್ರೀನಿವಾಸ್, ನಟರಾಜ್ ಇದ್ದರು.
ಶ್ರಾವಣಸಂಜೆ ಕಾರ್ಯಕ್ರಮ
ಭದ್ರಾವತಿ: ಮಾನವ ಕೇವಲ ಉತ್ತಮ ಆಚಾರ-ವಿಚಾರಗಳಿಂದ ಮಾನವತೆಯಿಂದ ಮಾಧವತೆಯತ್ತ ಸಾಗಬಲ್ಲನೆಂದು ಶಿವಮೊಗ್ಗ ಬಸವಕೇಂದ್ರದ ಶ್ರೀ ಬಸವಮರುಳಸಿದ್ದ ಸ್ವಾಮೀಜಿಯವರು ನುಡಿದರು. ಮಂಗಳವಾರ ಸಂಜೆ ಹಳೇನಗರದ ಶ್ರೀ ಅಕ್ಕಮಹಾದೇವಿ ದೇವಸ್ಥಾನದಲ್ಲಿ ಶ್ರೀ ಅಕ್ಕಮಹಾದೇವಿ ಬಳಗ ಆಯೋಜಿಸಿದ್ದ ಶ್ರಾವಣಸಂಜೆ ಕಾರ್ಯಕ್ರಮದಲ್ಲಿ ಸಾನ್ನಿಧ್ಯ ವಹಿಸಿ ಮಾತನಾಡಿದ ಅವರು ಶರಣರು ಪಲಾಯನವಾದವನ್ನು ಜೀವನದಲ್ಲಿ ತೀವ್ರವಾಗಿ ವಿರೋಧಿಸುತ್ತಿದ್ದರೆಂದರು. ದೈವವನ್ನುಳಿದು ಅಸ್ತಿತ್ವವನ್ನು ಕಾಣಲು ಸಾಧ್ಯವಿಲ್ಲ. ದೇವರು ಸರ್ವಾಂತರ್ಯಾಮಿಯಾಗಿದ್ದು ಚೈತನ್ಯಸ್ವರೂಪಿಯಾಗಿ ನಮ್ಮ ಸುತ್ತಲೂ ಇದ್ದಾನೆ. ಅಂತಹ ದೇವರನ್ನು ಮೂರ್ತ ಸ್ವರೂಪದಲ್ಲಿ ಇಷ್ಟಲಿಂಗದ ರೂಪದಲ್ಲಿ ಕಂಡು ಮಾನವ ಮಾಧವತೆಯತ್ತ ಸಾಗಲು ಸಾಧ್ಯವೆಂದು ಅವರು ತಿಳಿಸಿದರು. ಉದ್ಯಮಿ ಕೆ.ಸದಾಶಿವಪ್ಪ ಅಧ್ಯಕ್ಷತೆ ವಹಿಸಿದ್ದರು. ಸಿ.ಪಂಚಾಕ್ಷರಪ್ಪ ಅತಿಥಿಯಾಗಿ ಆಗಮಿಸಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

