ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆ ಮಾಡಲು ಸೂಚನೆ
ಕ.ಪ್ರ.ವಾರ್ತೆ ಸಾಗರ ಆ.13 ತಾಲೂಕಿನ ಯಡಜಿಗಳೇಮನೆ ಗ್ರಾಪಂ ವ್ಯಾಪ್ತಿಯ ಹುಲ್ಕೋಡು ಗ್ರಾಮದಲ್ಲಿ ಮನೆ ಬಿರುಕು ಬಿಡುತ್ತಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂತ್ರಸ್ತ ಏಳು ಮನೆಯವರಿಗೆ ತಕ್ಷಣ ಪರ್ಯಾಯ ವಸತಿ, ಆಹಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ರಾಜ್ಯ ವಿಧಾನಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಕಂದಾಯ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಯಡಜಿಗಳೇಮನೆ ಗ್ರಾಪಂ ಆವರಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಸದರಿ ಪ್ರಕರಣವನ್ನು ಗಮನಕ್ಕೆ ತಂದಾಗ ಲಿಂಗನಮಕ್ಕಿ ಆಣೆಕಟ್ಟೆಗಾಗಿ ತಮ್ಮ ಅಮೂಲ್ಯ ಜಮೀನು, ಮನೆಯನ್ನು ಕಳೆದುಕೊಂಡವರು ಈಗ ವಾಸವಾಗಿರುವ ಹುಲ್ಕೋಡಿನಲ್ಲಿಯೂ ಮನೆ ಬಿರುಕು ಬಿಡುತ್ತಿದೆ ಎಂಬುದು ಆತಂಕಕಾರಿ ವಿಚಾರ. ಇದನ್ನು ವಿಶೇಷ ಪ್ರಕರಣವೆಂದು ಪರಿಗಣಿಸಿ ಗೋಮಾಳ ಅಥವಾ ಸೊಪ್ಪಿನ ಬೆಟ್ಟದಲ್ಲಿ ಪರ್ಯಾಯ ನಿವೇಶನ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಗಮನಿಸಬೇಕು: ಈಗಾಗಲೇ ಎಲ್ಲ ಶಾಲೆಗಳ ಸ್ವಾಧೀನದಲ್ಲಿರುವ ಜಾಗವನ್ನು ಅವುಗಳ ಅಭಿವೃದ್ಧಿ ಸಮಿತಿಗಳಿಗೆ ಹಕ್ಕುಪತ್ರ ಮಾಡಿಕೊಡಲು ನಿರ್ಧರಿಸಲಾಗಿದೆ.
ಅನ್ನಭಾಗ್ಯ ಯೋಜನೆಯಲ್ಲಿ ಅವ್ಯವಹಾರ ನಡೆಯುತ್ತಿದೆಯೇ ಎಂಬುದನ್ನು ಪಂಚಾಯ್ತಿ ಸದಸ್ಯರು ನಿಷ್ಠುರವಾಗಿ ಗಮನಿಸಬೇಕು. ಪರಿಶೀಲನೆಗೆ ಪಂಚಾಯ್ತಿಯಿಂದ ನಾಲ್ಕು ಪೈಸೆ ಖರ್ಚಾದರೂ ಬೇಸರಿಸದೆ ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯ ಸಫಲತೆಗೆ ದುಡಿಯಬೇಕು ಎಂದು ಕರೆ ನೀಡಿದರು.
ಕ್ರಿಯಾಯೋಜನೆ: ಪ್ರತಿ ಪಂಚಾಯ್ತಿ ವ್ಯಾಪ್ತಿಯಲ್ಲಿ ಕನಿಷ್ಠ 30 ಲಕ್ಷ ರು. ವೆಚ್ಚದ ಉದ್ಯೋಗ ಖಾತ್ರಿ ಕೆಲಸಗಳಾಗಬೇಕು.
ಹಿಂದಿನ ಬಾರಿಗಿಂತ ಎರಡು ಮೂರು ಪಟ್ಟು ಕೆಲಸದ ಗುರಿ ಹೊಂದಿರಬೇಕು. ಮುಂದಿನ ಮೂರು ದಿನಗಳಲ್ಲಿ ಇದಕ್ಕೆ ಅಗತ್ಯವಾದ ಹೊಸ ಕ್ರಿಯಾಯೋಜನೆಗಳನ್ನು ಸೇರಿಸಬೇಕು.
ಈ ಕುರಿತು ತಾವು ಪದೇ ಪದೇ ಸಭೆ ನಡೆಸಲಿದ್ದು ಪರಿಣಾಮಕಾರಿಯಾಗಿ ಜಾರಿಗೊಳಿಸದಿದ್ದರೆ ಪಂಚಾಯ್ತಿಗಳ ಕಾರ್ಯದರ್ಶಿ, ಪಿಡಿಓಗಳನ್ನು ಹೊಣೆ ಮಾಡಲಾಗುತ್ತದೆ ಎಂದು ಎಚ್ಚರಿಸಿದರು.
ಪಂಚಾಯ್ತಿ ಅಧ್ಯಕ್ಷೆ ಶಶಿಕಲಾ, ತಾಪಂ ಅಧ್ಯಕ್ಷ ಮಹಾಬಲೇಶ್ವರ ಕುಗ್ವೆ, ಉಪಾಧ್ಯಕ್ಷೆ ಗೌರಮ್ಮ, ಕಾರ್ಯನಿರ್ವಹಣಾಧಿಕಾರಿ ಡಾ. ಸದಾಶಿವ್, ತಾಪಂ ಮಾಜಿ ಅಧ್ಯಕ್ಷ ಮಲ್ಲಿಕಾರ್ಜುನ ಹಕ್ರೆ, ಈಳಿ ನಾರಾಯಣರಾವ್, ಹೊಳಿಯಪ್ಪ, ಶ್ರೀನಿವಾಸ ಶೇರಿಗಾರ್, ಕೃಷ್ಣಮೂರ್ತಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

