ಶಿವಮೊಗ್ಗ

2 ಶವ ಪತ್ತೆ: ಮುಗಿಯದ ಕಾರ್ಯಾಚರಣೆ

Published On :

ಜೋಗ್‌ಫಾಲ್ಸ್: ಕಳೆದೆರಡು ದಿನಗಳಿಂದ ಇಲ್ಲಿನ ರಾಜಾ ಜಲಪಾತದಿಂದ ಕೆಳಗೆ ಬಿದ್ದಿದ್ದ ಮೂವರ ಶವದ ಪತ್ತೆಯಲ್ಲಿ ಬುಧವಾರ ಕೊಂಚ ಯಶಸ್ಸು ಕಂಡು ಬಂದಿದ್ದು, ಜಲಪಾತದ ಕೆಳಭಾಗದ ನೀರಿನಲ್ಲಿ ಮಧ್ಯಾಹ್ನದ ವೇಳೆಗೆ ಎರಡು ಶವಗಳು ಪತ್ತೆಯಾಗಿವೆ.
ಈ ಶವಗಳು ಜ್ಯೋತಿ ರಾಜ್ ಕಣ್ಣಿಗೆ ಜಲಪಾತದ ಮೇಲ್ಭಾಗದಿಂದ ಗೋಚರಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಜ್ಯೋತಿರಾಜ್ ಮತ್ತವರ ತಂಡ ಕೇವಲ 15 ನಿಮಿಷಗಳಲ್ಲಿ ಜಲಪಾತದ ಕೆಳಗಿಳಿದು ಶವಗಳನ್ನು ನೀರಿನಿಂದ ಮೇಲಕ್ಕೆ ತರುವಲ್ಲಿ ಯಶಸ್ವಿಯಾಗಿದ್ದಾರೆ. ಇದರೊಂದಿಗೆ ಶವದ ಹುಡುಕಾಟದ ಕಾರ್ಯಾಚರಣೆ ಮುಕ್ತಾಯವಾಗಿದ್ದು, ಇನ್ನೊಂದು ಶವ ಜಲಪಾತದ ಮಧ್ಯದಲ್ಲೇ ಉಳಿದಿದೆ. ಲಿಂಗನಮಕ್ಕಿ ಜಲಾಶಯದ ಗೇಟುಗಳ ಮೂಲಕ ನೀರನ್ನು ಬಿಟ್ಟಲ್ಲಿ ಆ ಶವವೂ ಜಲಪಾತದ ಕೆಳಭಾಗಕ್ಕೆ ಬರುವ ಸಾಧ್ಯತೆಯನ್ನು ಈಗ ಎದುರು ನೋಡಲಾಗುತ್ತಿದ್ದು, ಈ ಬಗ್ಗೆ ಸಿದ್ದಾಪುರ ಸಿಪಿಐ ವೀರೇಂದ್ರಕುಮಾರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬುಧವಾರ ಜೋಗಕ್ಕೆ ಶಿಕಾರಿಪುರ ಡಿವೈಎಸ್ಪಿ ಜಿ.ಬಿ. ಮಂಜುನಾಥ್, ತಹಸೀಲ್ದಾರ್ ರಾಜಣ್ಣ ಭೇಟಿ ನೀಡಿದ್ದರು. ಜೋಗ ಎಸ್‌ಐ ಮೊಹಮದ್ ರಫಿ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಕಾರು ಮರಕ್ಕೆ ಡಿಕ್ಕಿ: ಒಬ್ಬನ ಸಾವು
ಭದ್ರಾವತಿ: ಭದ್ರಾ ಅಣೆಕಟ್ಟನ್ನು ನೋಡಲು ಸ್ನೇಹಿತರು ಹೊರಟಿದ್ದ ಕಾರೊಂದು ಹೊನ್ನಟ್ಟಿ ಹೊಸೂರು ಗೇಟಿನ ಬಳಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಪಕ್ಕದಲ್ಲಿದ್ದ ಬೇವಿನ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮ ಕಾರಿನಲ್ಲಿದ್ದ ಹರಿಕೇಶ ಎಂಬವರಿಗೆ ತೀವ್ರ ಸ್ವರೂಪದ ಗಾಯಗಳಾಗಿ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗಮಧ್ಯದಲ್ಲಿ ಅಸುನೀಗಿದ ಘಟನೆ ಜರುಗಿದೆ.
ಎಂದು ಭದ್ರಾವತಿ ಗ್ರಾಮಾಂತರ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಪ್ರಯಾಣಿಕರಿಗೆ ಗಾಯ: ಪಟ್ಟಣದ ಹೊಸಬುಳ್ಳಾಪುರ ವಾಸಿ ಶೇಖರ ಎಂಬವರು ಜೋಳದಾಳ್ ಗ್ರಾಮದಿಂದ ಭದ್ರಾವತಿಗೆ ಬಸ್ಸಿನಲ್ಲಿ ಬರುತ್ತಿದ್ದಾಗ ಬಸ್ಸಿನ ಚಾಲಕ ರಮೇಶ ಅಜಾಗರೂಕತೆಯಿಂದ ಬಸ್ ಚಾಲನೆ ಮಾಡಿದ ಪರಿಣಾಮ ಬಸ್ಸು ರಸ್ತೆ ಪಕ್ಕದ ಚರಂಡಿಗೆ ಇಳಿಸಿದ್ದರಿಂದ ತಮಗೆ ಮತ್ತು ಇತರ ಪ್ರಯಾಣಿಕರಿಗೆ ರಕ್ತಗಾಯಗಳಾಗಿವೆ ಎಂದು ಶೇಖರ  ಗ್ರಾಮಾಂತರ ಪೊಲೀಸರಿಗೆ ದೂರಿದ್ದಾರೆ.
ನೋಂದಣಿ ಅಭಿಯಾನ
ಶಿವಮೊಗ್ಗ: ಸ್ವಾತಂತ್ರ್ಯೋತ್ಸವ ಹಾಗೂ ವಿಶ್ವ ಛಾಯಾಗ್ರಾಹಕರ ದಿನಾಚರಣೆ ಹಿನ್ನೆಲೆಯಲ್ಲಿ ಜಿಲ್ಲಾ ವಿಡಿಯೋ, ಪೋಟೋಗ್ರಾಫರ್ ಅಸೋಸಿಯೇಷನ್ ನೋಂದಣಿ ಅಭಿಯಾನ ಆರಂಭಿಸಿದೆ. ಆಸಕ್ತ ಛಾಯಾಗ್ರಾಹಕರು ಹಾಗೂ ಸ್ಟುಡಿಯೋ ಮಾಲೀಕರು 100 ಪಾವತಿಸಿ ಅಸೋಸಿಯೇಷನ್‌ನ ಸದಸ್ಯತ್ವ ಪಡೆಯಬಹುದು. ಛಾಯಾಗ್ರಾಹಕರು ಶಿವಮೊಗ್ಗದ ಜಿಲ್ಲಾ ವಿಡಿಯೋ ಮತ್ತು ಫೋಟೋಗ್ರಾಫರ್ ಅಸೋಸಿಯೇಷನ್, ವೈಭವಿ ಡಿಜಿಟಲ್ ಸ್ಟುಡಿಯೋ, ಹಳೇ ತೀರ್ಥಹಳ್ಳಿ ರಸ್ತೆ ಇಲ್ಲಿ ನೋಂದಾಯಿಸಿಕೊಳ್ಳಬಹುದು ಎಂದು ತಿಳಿಸಿರುವ ಅಸೋಸಿಯೇಷನ್, ಜಿಲ್ಲಾ ಮಟ್ಟದ ಸಂಘ ಒಂದೇ ಇದ್ದು ಇದರ ಹೆಸರನ್ನು ಕೆಲವರು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಇಂತಹ ಊಹಪೋಹಗಳಿಗೆ ಕಿವಿಗೊಡಬಾರದು ಅಧ್ಯಕ್ಷ ಶಿವಮೊಗ್ಗ ನಂದನ್, ಕಾರ್ಯದರ್ಶಿ ಕೃಷ್ಣಮೂರ್ತಿ ತಿಳಿಸಿದ್ದಾರೆ. ವಿವರಗಳಿಗಾಗಿ 9448944111.
ಬಿಜೆಪಿಗೆ ಸೇರ್ಪಡೆ
ಶಿವಮೊಗ್ಗ: ಜಿಲ್ಲಾ ಬಿಜೆಪಿ ಕಚೇರಿಯಲ್ಲಿ  ನಡೆದ  ಸಮಾರಂಭದಲ್ಲಿ ಶಿಕಾರಿಪುರದ ಪ್ರಮುಖ ನಾಯಕ ಮಲ್ಲೇಶಪ್ಪನವರು ತಮ್ಮ ಅಭಿಮಾನಿಗಳೊಂದಿಗೆ ಬಿಜೆಪಿಗೆ ಸೇರ್ಪಗೊಂಡರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ದತ್ತಾತ್ರಿ, ಜಿಲ್ಲಾ ಕಾರ್ಯದರ್ಶಿ . ಚನ್ನಬಸಪ್ಪ ಉಪಸ್ಥಿತರಿದ್ದು, ಪಕ್ಷಕ್ಕೆ ಬರಮಾಡಿಕೊಂಡರು. ಶಿಕಾರಿಪುರದ ಪ್ರಶಾಂತ್ ಸಂಕ್ಲಾಪುರ, ಕೃಷ್ಣಮೂರ್ತಿ ಕಂಚುಗಾರ್, ವಾಸುದೇವ್, ಮಧು, ರಾಜು, ಸತೀಶ್, ಮಂಜು, ರಂಗನಾಥ, ಯಲ್ಲಪ್ಪ, ಸಂತೋಷ್, ರಾಮಣ್ಣ, ಸಂಜೀವ, ಅಣ್ಣಪ್ಪ, ರಂಗನಾಥ ಜಿ, ಸುರೇಶ, ಸಾಗರ್, ಅಣ್ಣಪ್ಪ ಪಾರಿವಾಳದ, ಅರುಣ್ ರಾಮಪ್ಪ, ಸುಭಾಷ್, ಈಸೂರಿನ ಪ್ರಭಾಕರ, ಪರಶುರಾಮ, ರಂಗನಾಥ, ಮನು, ರಂಗ, ಹಿತ್ಲದ ಪುನೀತ್, ಬಸವರಾಜು, ಚಂದ್ರ, ಮಂಜುನಾಥ್ ಸೇರ್ಪಡೆಗೊಂಡರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.