ನಕಲಿ ಸಹಿ ಪ್ರಮಾಣಪತ್ರ: ದೂರು
ಸಾಗರ: ಸರ್ಕಾರದ ವಿವಿಧ ಯೋಜನೆಗಳಿಗೆ ಕೆಲವು ವ್ಯಕ್ತಿಗಳು ನಕಲಿ ಸಹಿ ಮಾಡಿ ಪ್ರಮಾಣಪತ್ರ ನೀಡುತ್ತಿದ್ದು ಅಂಥವರ ಮೇಲೆ ಕ್ರಮ ಜರುಗಿಸುವಂತೆ ಒತ್ತಾಯಿಸಿ ವಕೀಲರ ಸಂಘದ ವತಿಯಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ಸರ್ಕಾರದ ವಿವಿಧ ಯೋಜನೆಗಳಾದ ಸಂಧ್ಯಾ ಸುರಕ್ಷಾ, ವೃದ್ಧಾಪ್ಯ ವೇತನ, ವಿಧವಾ ವೇತನ, ಅಂಗವಿಕಲ ವೇತನ, ವಿದ್ಯಾರ್ಥಿಗಳ ಜಾತಿ ಮತ್ತು ಆದಾಯ ಪ್ರಮಾಣಪತ್ರಗಳಿಗೆ ಛಾಪಾ ಕಾಗದದ ಮೇಲೆ ಪ್ರಮಾಣಪತ್ರ ನೀಡಬೇಕಾಗಿರುತ್ತದೆ. ಈ ಪ್ರಮಾಣಪತ್ರಗಳಿಗೆ ಅಧಿಕೃತ ವ್ಯಕ್ತಿಗಳು ನೋಟರಿಯವರ ಮುಂದೆ ಸಹಿ ಮಾಡಿ ವಕೀಲರಿಂದ ಗುರುತಿಸಲ್ಪಡಬೇಕು.
ಆದರೆ, ಕೆಲವು ಏಜೆಂಟರು ಈ ಎಲ್ಲಾ ಪ್ರಮಾಣಪತ್ರಗಳಿಗೆ ತಾವೆ ಸಹಿ ಮಾಡಿ ನಕಲಿ ಪ್ರಮಾಣಪತ್ರ ಸೃಷ್ಟಿಸುತ್ತಿರುವ ಪ್ರಕರಣ ಸಾಗರದಲ್ಲಿ ಸಾಕಷ್ಟು ನಡೆದಿದೆ.
ಇದರಿಂದಾಗಿ ಕಾನೂನುಬಾಹಿರವಾಗಿ ಅನೇಕ ಪ್ರಮಾಣಪತ್ರಗಳು ಸೃಷ್ಟಿಯಾಗಿದೆ. ಈಗಾಗಲೇ ಏಜೆಂಟರು ಸಹಿ ಮಾಡಿರುವ ನಕಲಿ ಪ್ರಮಾಣಪತ್ರಗಳನ್ನು ಪತ್ತೆ ಹಚ್ಚಿ ತಪ್ಪಿತಸ್ತರ ವಿರುದ್ಧ ಕಾನೂನುಕ್ರಮ ಕೈಗೊಳ್ಳಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ವಕೀಲರ ಸಂಘದ ಅಧ್ಯಕ್ಷ ಎಚ್.ಕೆ. ಅಣ್ಣಪ್ಪ, ರವೀಶ್ ಕುಮಾರ್, ಕೆ.ವಿ.ಪ್ರವೀಣಕುಮಾರ್, ಚೇತನರಾಜ್, ರಶೀದ್, ಹೇಮಂತ್, ಗೌತಮ್, ಆದರ್ಶ, ಎಸ್. ಹಿರೇಮಠ್, ಪುಟ್ಟಪ್ಪ, ತ್ಯಾಗಮೂರ್ತಿ, ಗಣಪತಿ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

