ಗಣಪತಿ ಚಿತ್ರಬರೆದು ಸಂಭ್ರಮಿಸಿದ ಮಕ್ಕಳು
ಕ.ಪ್ರ.ವಾರ್ತೆ ಶಿವಮೊಗ್ಗ ಆ.25
ಭಾನುವಾರ ಗೋಪಾಳದ ಶ್ರೀರಾಮಕೃಷ್ಣ ವಿದ್ಯಾನಿಕೇತನದಲ್ಲಿ ಬಗೆಬಗೆಯ ಗಣಪತಿ ಅನಾವರಣಗೊಂಡಿತ್ತು. ಪುಟ್ಟ ಪುಟ್ಟ ಮಕ್ಕಳು ತಮ್ಮದೇ ಭಾವನೆಯಲ್ಲಿ ಗಣಪತಿಯನ್ನು ಅನಾವರಣಗೊಳಿಸಿದ್ದರು.
ಈ ವಿಶೇಷ ಸಂದರ್ಭಕ್ಕೆ ವೇದಿಕೆ ಸೃಷ್ಟಿ ಮಾಡಿದ್ದು ಶ್ರೀರಾಮಕೃಷ್ಣ ವಿದ್ಯಾನಿಕೇತನ ಸಂಸ್ಥೆ. ಮುಂಬರುವ ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ಭಾನುವಾರ ಶಾಲೆಯ ಅವರಣದಲ್ಲಿ ವೈವಿದ್ಯಮಯ ಗಣಪತಿ ಚಿತ್ರ ರಚನಾ ಸ್ಪರ್ಧೆಯನ್ನು ಆಯೋಜಿಸಲಾಗಿತ್ತು.
ರಾಮಕೃಷ್ಣ ಶಾಲೆಯ ಮಕ್ಕಳು ಸೇರಿದಂತೆ ವಿವಿಧ ಶಾಲೆಯ ಎಲ್‌ಕೆಜಿಯಿಂದ 10ನೇ ತರಗತಿ ವರೆಗಿನ ಮಕ್ಕಳು ವೈವಿಧ್ಯಮಯ ಗಣಪತಿಯನ್ನು ಚಿತ್ರಿಸಿ ತಮ್ಮ ಕಲಾಪ್ರೌಢಿಮೆಯನ್ನು ಮೆರೆದರು.
ಸುಮಾರು 1200 ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದು, ತಮ್ಮದೇ ಭಾವನೆಯನ್ನು ಒಡಮೂಡಿದ ಗಣಪತಿಯನ್ನು ಚಿತ್ರಿಸಿ ಸಂಭ್ರಮಿಸಿದರು.
ಗಣಪತಿ ಹಬ್ಬ ಎದುರಿಗಿರುವ ಸಂದರ್ಭದಲ್ಲಿ ಭಾವೈಕ್ಯತೆ ಮೂಡಿಸುವ ಉದ್ದೇಶದಿಂದ, ಗಣಪತಿ ಬಗ್ಗೆ ಮಕ್ಕಳು ಒಂದಷ್ಟು ತಿಳಿದುಕೊಳ್ಳಲಿ ಎಂದು ಹಾಗೂ ಮಕ್ಕಳಲ್ಲಿ ಚಿತ್ರಕಲೆಯ ಬಗ್ಗೆ ಆಸಕ್ತಿ ಹೆಚ್ಚಿಸುವ ಉದ್ದೇಶದಿಂದ ನಮ್ಮ ಶಾಲೆಯು ಕಳೆದ 7-8 ವರ್ಷದಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಿಕೊಂಡು ಬರುತ್ತಿದೆ ಎಂದು ಶ್ರೀ ರಾಮಕೃಷ್ಣ ವಿದ್ಯಾನಿಕೇತನದ ಕಾರ್ಯದರ್ಶಿ ವೆಂಕಟರಮಣ ಕನ್ನಡಪ್ರಭಕ್ಕೆ ವಿವರಿಸಿದರು.
ಅನ್ಯ ಧರ್ಮೀಯರೂ ಭಾಗಿ: ಸ್ಪರ್ಧೆಯಲ್ಲಿ ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯಕ್ಕೆ ಸೇರಿದ ಮಕ್ಕಳೂ ಪಾಲ್ಗೊಂಡಿದ್ದರು. ಎಲ್ಲ ಮಕ್ಕಳೊಂದಿಗೆ ಕೂಡಿಕೊಂಡು ಗಣಪತಿ ರಚಿಸಿ ಸಂಭ್ರಮಿಸಿದರು. ಎಲ್ಲಾ ಮಕ್ಕಳು ಉತ್ಸುಕತೆಯಿಂದ ಗಣಪತಿಯನ್ನು ರಚಿಸಿ ಖುಷಿಪಟ್ಟರು ಎಂದು ಅವರು ತಿಳಿಸಿದರು. ಶಾಲೆಯಿಂದ ಗಣಪತಿ ಹಬ್ಬ ಆಚರಿಸುತ್ತಿದ್ದು, ಗಣಪತಿ ವಿಸರ್ಜನೆ ಪೂರ್ವಭಾವಿಯಾಗಿ ಆಯೋಜಿಸುವ ಕಾರ್ಯಕ್ರಮದಲ್ಲಿ ಬಹುಮಾನ ವಿತರಿಸಲಾಗುತ್ತದೆ.
ಪ್ರತಿ ತರಗತಿಗೆ ತಲಾ ಮೂರು ಬಹುಮಾನ ನೀಡಲಾಗುತ್ತದೆ, ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲಾ ಮಕ್ಕಳಿಗೂ ಪ್ರಶಸ್ತಿ ಪತ್ರ ವಿತರಿಸಲಾಗುತ್ತದೆ ಎಂದು ವೆಂಕಟರಮಣ ಹೇಳಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

