ಉದ್ವಿಘ್ನತೆಗೆ ಕಾರಣವಾದ ಪತ್ರ
ಕ.ಪ್ರ.ವಾರ್ತೆ, ಶಿವಮೊಗ್ಗ, ಆ.29
ಕೋಮು ಸಾಮರಸ್ಯ ಕೆಡಿಸುವ ಕೀಡಿಗೇಡಿಗಳ ಪತ್ರವೊಂದು ಆಯನೂರು ಗ್ರಾಮದಲ್ಲಿ ಗುರುವಾರ ಉದ್ವಿಘ್ನತೆಗೆ ಕಾರಣವಾಗಿದ್ದು, ಕೆಲಕಾಲ ಬಂದ್ ಆಚರಣೆ ಪ್ರತಿಭಟನೆಯೂ ನಡೆಯಿತು.
ಗಣಪತಿ ಹಬ್ಬ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಸಂಭವಿಸಿರುವ ಕಿಡಿಗೇಡಿ ಕೃತ್ಯಕ್ಕೆ ತೀವ್ರ ಆಕ್ರೋಶ ವ್ಯಕ್ತವಾಯಿತು.
ಸಾಮರಸ್ಯ ಕದಡುವ ಕೆಲಸ: ಇದನ್ನು ತೀವ್ರವಾಗಿ ಖಂಡಿಸಿರುವ ಹಿಂದೂಪರ ಸಂಘಟನೆಗಳು ಧಾರ್ಮಿಕ ಭಾವನೆಗಳಿಗೆ ದಕ್ಕೆ ತರುವಂತಹ ಹಾಗೂ ಸಮಾಜದ ಸಾಮರಸ್ಯ ಕದಡುವ ಕೆಲಸ ಆಗುತ್ತಿದೆ. ಈ ಕೂಡಲೇ ರಕ್ಷಣಾ ಇಲಾಖೆ ಅಂತಹ ಕೀಡಿಗೇಡಿಗಳನ್ನು ಬಂಧಿಸಬೇಕು ಎಂದು ಪ್ರತಿಭಟನಕಾರರು ಆಗ್ರಹಿಸಿದರು.
ಈ ವೇಳೆ ಮಾತನಾಡಿದ ಆರ್‌ಎಸ್‌ಎಸ್ ಮುಖಂಡ ಮಂಜುನಾಥ ಶೆಟ್ಟಿ, ದೇಶ ಹಾಗೂ ಧರ್ಮದ ರಕ್ಷಣೆಗಾಗಿ ಜೀವ ಕೊಡಲು ನಾವು ತಯಾರಾಗಿದ್ದೇವೆ. ಉದ್ದೇಶ ಪೂರ್ವಕವಾಗಿಯೇ ಇಂತಹ ಕೆಲಸ ಮಾಡುತ್ತಿದ್ದಾರೆ ಎಂದರು.
ಕರವೇ ಗೌರವಾಧ್ಯಕ್ಷ ಉದಯ ಶೆಟ್ಟಿ ಮಾತನಾಡಿ, ಸಮಾಜಘಾತುಕ ಕೆಲಸವನ್ನು ಯಾವುದೇ ಧರ್ಮದ ವ್ಯಕ್ತಿಗಳು ಮಾಡಿದರೂ ಅದು ಅಪರಾಧ. ಧಾರ್ಮಿಕ ಕೇಂದ್ರಗಳಿಗೆ ಬಾಂಬ್ ಹಾಕುವುದು, ಕಳ್ಳತನ ಇನ್ನೂ ಮುಂತಾದ ಅಪರಾಧ ಮಾಡುವವರನ್ನು ಪತ್ತೆ ಹಚ್ಚಬೇಕು. ಅವರ ವಿರುದ್ಧ ಕ್ರಮ ಕೈಗೊಳ್ಳದೇ ಹೋದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದರು.
ಸರ್ಕಲ್ ಇನ್‌ಸೆಕ್ಟರ್ ಬಸವರಾಜಪ್ಪ ಅವರಿಗೆ ಮನವಿ ಮಾಡಲಾಯಿತು. ಸ್ಥಳಕ್ಕೆ ಡಿವೈಎಸ್‌ಪಿ ರಾಮಾನಾಯ್ಕ್, ಎಸ್‌ಪಿ ದಯಾಳ್, ಕುಂಸಿ ಠಾಣೆ ಪಿಎಸ್‌ಐ ಅಭಯ್ ಪ್ರಕಾಶ್ ಆಗಮಿಸಿ ಪರಿಶೀಲಿಸಿದರು.
ಪ್ರತಿಭಟನೆಯಲ್ಲಿ ಕುಪೇಂದ್ರ, ಕೇಶವನ್ ನಾಯರ್, ಲಕ್ಷ್ಮೀಕಾಂತ್ ಶೆಟ್ಟಿ, ಚಂದ್ರು ಶೆಟ್ಟಿ, ಗಿಡ್ಡೇಗೌಡ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

