ಶಿವಮೊಗ್ಗ

ಇಂದು ಗೀತಾ ಗಾಯನ

Published On :

ಶಿವಮೊಗ್ಗ: ಕರ್ನಾಟಕ ಸಂಘ ಆ.31ರಂದು ಸಂಜೆ 5.30ಕ್ಕೆ ಕರ್ನಾಟಕ ಸಂಘದಲ್ಲಿ ಭಾವ ವರ್ಷ ಗೀತ ಗಾಯನ ಕಾರ್ಯಕ್ರಮ ಹಮ್ಮಿಕೊಂಡಿದೆ. ಪದ್ಮಿನಿ ಸುಧೀರ್, ಜಯಶ್ರೀ ಶ್ರೀಧರ್, ನಾಗಮಣಿ ಅನಂತರಾಂ, ಋತ್ವಿಕ್ ಮುರಳೀಧರ್ ಗಾಯನವಿದ್ದು ಕೀಬೋರ್ಡ್‌ನಲ್ಲಿ ನವೀಲೇಶ್, ತಬಲಾದಲ್ಲಿ ರಾಘವೇಂದ್ರ ಪ್ರಭು ಸಹಕಾರ ನೀಡುವರು. ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷ ಎಸ್.ವಿ. ತಿಮ್ಮಯ್ಯ ವಹಿಸುವರು.
ನಾಳೆ ತಪಸಾಣಾ ಶಿಬಿರ
ಶಿವಮೊಗ್ಗ: ಸಪ್ತಗಿರಿ ಆಸ್ಪತ್ರೆ ಬೆಂಗಳೂರು, ರೋಟರಿ ಕ್ಲಬ್ ಹಾಗೂ ರೋಟರಿ ಸಮುದಾಯ ದಳ ಕುಂಸಿ ಆಶ್ರಯದಲ್ಲಿ ಸೆ.1ರಂದು ಬೆಳಿಗ್ಗೆ 9ಗಂಟೆಯಿಂದ ಮಧ್ಯಾಹ್ನ 2 ಗಂಟೆವರೆಗೆ ಕುಂಸಿಯ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ಉಚಿತ ಹೃದಯ ರೋಗ, ನರರೋಗ, ಮೂತ್ರ ಪಿಂಡ ತಪಸಾಣಾ ಶಿಬಿರ ಏರ್ಪಡಿಸಲಾಗಿದೆ. ಬೆಂಗಳೂರಿನ ಸಪ್ತಗಿರಿ ಆಸ್ಪತ್ರೆಯ ವೈದ್ಯರು ಶಿಬಿರದಲ್ಲಿ ತಪಾಸಣೆ ನಡೆಸುವರು. ಇದರ ಸದುಪಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬೇಕು ಎಂದು ಕ್ಲಬ್‌ನ ಅಧ್ಯಕ್ಷ ವಾ. ಗೋಪಾಲಕೃಷ್ಣ ಗುಪ್ತಾ ತಿಳಿಸಿದ್ದಾರೆ. ವಿವರಗಳಿಗಾಗಿ-9480058076.
ಕುರಿ ಕಾಳಗ ಸ್ಪರ್ಧೆ
ಶಿವಮೊಗ್ಗ: ಯೂತ್ ಫೈಟರ್ ಕ್ಲಬ್ ಸೆ.1ರಂದು ಬೆಳಗ್ಗೆ 10ಕ್ಕೆ ಸಹ್ಯಾದ್ರಿ ಕಾಲೇಜು ಆವರಣದಲ್ಲಿ ಗೌರಿ ಗಣೇಶ ಹಬ್ಬದ ಪ್ರಯುಕ್ತ ರಾಜ್ಯ ಮಟ್ಟದ ಕುರಿ ಕಾಳಗ ಸ್ಪರ್ಧೆ ಏರ್ಪಡಿಸಿದೆ. 8 ಹಲ್ಲಿನ ಕುರಿಗೆ ಪ್ರಥಮ ಬಹುಮಾನ 20 ಸಾವಿರ, ದ್ವಿತೀಯ 10 ಸಾವಿರ, 6 ಹಲ್ಲಿನ ಕುರಿಗೆ ಪ್ರಥಮ 15 ಸಾವಿರ, ದ್ವಿತೀಯ 7,500 ಸಾವಿರ, 4 ಹಲ್ಲಿನ ಕುರಿಗೆ ಪ್ರಥಮ 10 ಸಾವಿರ, ದ್ವಿತೀಯ 5 ಸಾವಿರ, 2 ಹಲ್ಲಿನ ಕುರಿಗೆ ಪ್ರಥಮ 6 ಸಾವಿರ ರುಪಾಯಿ, ದ್ವಿತೀಯ 3 ಸಾವಿರ ರುಪಾಯಿ ಬಹುಮಾನ ವಿತರಿಸಲಾಗುವುದು. 50 ಹೊಡೆತ ಮೇಲ್ಪಟ್ಟ ಕುರಿಗಳಿಗೆ ವಿಶೇಷ ಬಹುಮಾನ 1 ಸಾವಿರ ರುಪಾಯಿ ನಿಗದಿ ಮಾಡಲಾಗಿದೆ ಎಂದು ಕ್ಲಬ್‌ನ ಸದಸ್ಯರು ತಿಳಿಸಿದ್ದಾರೆ. ವಿವರಗಳಿಗಾಗಿ- 9036224481.
ಇಂದು ಸಭೆ
ಶಿವಮೊಗ್ಗ: ಜಿಲ್ಲಾ ಕಾಂಗ್ರೆಸ್ ಸಮಿತಿ ಆ.31ರಂದು ಬೆಳಗ್ಗೆ 11.30ಕ್ಕೆ ಕಾಂಗ್ರೆಸ್ ಕಚೇರಿಯಲ್ಲಿ ಅಲ್ಪಸಂಖ್ಯಾತರ ವಿಭಾಗದ ಸಭೆ ನಡೆಯಲಿದೆ. ಜಿಲ್ಲಾಧ್ಯಕ್ಷ ಸೈಯದ್ ವಾಹೀದ್ ಅಧ್ಯಕ್ಷತೆ ವಹಿಸುವರು. ಜಿಲ್ಲಾ ಕಾಂಗ್ರೆಸ್ ಅಲ್ಪಸಂಖ್ಯಾತರ ವಿಭಾಗದ ಜಿಲ್ಲಾ ಪದಾಧಿಕಾರಿಗಳು ಹಾಗೂ ಜಿಲ್ಲೆಯ ಬ್ಲಾಕ್ ಅಧ್ಯಕ್ಷರು, ಕಾರ್ಯಕರ್ತರು ಹಾಗೂ ರಾಜ್ಯ ಉಪಾಧ್ಯಕ್ಷ ರಫೀಕ್ ಸಭೆಯಲ್ಲಿ ಉಪಸ್ಥಿತರಿರುವರು ಎಂದು ವಿಭಾಗದ ಪ್ರಧಾನ ಕಾರ್ಯದರ್ಶಿ ಜಯಶೀಲನ್ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.