ಶಿವಮೊಗ್ಗ

ಅರ್ಜಿ ಆಹ್ವಾನ

Published On :

ಶಿವಮೊಗ್ಗ: ಜಿಲ್ಲೆಯ ಎಲ್ಲಾ ತಾಲೂಕು ಕಚೇರಿಗಳಲ್ಲಿ ಸಕಾಲ ಸಹಾಯವಾಣಿ ಕೇಂದ್ರಗಳನ್ನು ನಿರ್ವಹಿಸಲು ಸಾಮಾಜಿಕ ಕಳಕಳಿಯುಳ್ಳ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಸಕಾಲ ಕೇಂದ್ರದಲ್ಲಿ ಕಾರ್ಯನಿರ್ವಹಿಸಲು ಇಚ್ಚಿಸುವ ಅಭ್ಯರ್ಥಿ ಪದವೀಧರನಾಗಿದ್ದು, ಗಣಕಯಂತ್ರ ಬಳಸುವ ಪರಿಣಿತಿ ಹೊಂದಿರಬೇಕು.  ತಮ್ಮದೇ ಆದ ಲ್ಯಾಪ್ಟಾಪ್, ಡಾಟಾ ಕಾರ್ಡ್, ಪ್ರಿಂಟರ್, ಯು.ಪಿ.ಎಸ್. ಹಾಗೂ ಸ್ಕ್ಯಾನರ್ಗಳನ್ನು ಹೊಂದಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ಆರಂಭದ 6 ತಿಂಗಳಿಗೆ ರು. 10,000 ಗೌರವಧನ ನೀಡಲಾಗುವುದು. ಆಸಕ್ತರು ತಮ್ಮ ಪ್ರಸ್ತಾವನೆಯನ್ನು ಸೆ.10ರೊಳಗೆ ಜಿಲ್ಲಾ ಸಕಾಲ ಮಾಹಿತಿ ತಂತ್ರಜ್ಞಾನ  ಸಮಾಲೋಚಕರು, ಜಿಲ್ಲಾಧಿಕಾರಿ ಕಚೇರಿ ಶಿವಮೊಗ್ಗ ಇವರಿಗೆ ಸಲ್ಲಿಸಬೇಕು. ವಿವರಗಳಿಗಾಗಿ ಮೊ. 9482757407 ಅಥವಾ ಈ-ಮೇಲ್ ಝಛಛಟಿಜಛಟಿ3103ಅ್ಜಟಛ್ಝಟ.್ಛ್ಟಟ ಸಂಪರ್ಕಿಸಿ.
4ಕ್ಕೆ ಕಾರ್ಯಕ್ರಮ
ಶಿವಮೊಗ್ಗ: ಕುವೆಂಪು ವಿಶ್ವವಿದ್ಯಾನಿಲಯವು ಸೆಪ್ಟೆಂಬರ್ 4ರಂದು ಬೆಳಗ್ಗೆ 11ಗಂಟೆಗೆ ಶಂಕರಘಟ್ಟ ಜ್ಞಾನ  ಸಹ್ಯಾದ್ರಿಯ ಒಳಾಂಗಣ ಕ್ರೀಡಾಂಗಣ ಸಮುಚ್ಛಯದಲ್ಲಿ ಪರಸ್ಪರ ಕಾರ್ಯಕ್ರಮ ಆಯೋಜಿಸಿದೆ.ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕುವೆಂಪು ವಿವಿ ಕುಲಪತಿ ಪ್ರೊ. ಎಸ್.ಎ. ಬಾರಿ ವಹಿಸುವರು. ಚಿತ್ರದುರ್ಗ ಮುರುಘಾಮಠ-ಬಸವಕೇಂದ್ರದ ಶರಣರಾದ ಡಾ. ಶಿವಮೂರ್ತಿ ಮುರುಘಾ ಶರಣರು ಮುಖ್ಯ ಅತಿಥಿಯಾಗಿಗಿ ಆಗಮಿಸಲಿರುವರು. ಕುವಿವಿ ಕುಲಸಚಿವ ಪ್ರೊ. ಎ.ರಾಮೇಗೌಡ, ಕುವಿವಿಯ ವಿದ್ಯಾರ್ಥಿ ಕ್ಷೇಮಪಾಲನಾ ವಿಭಾಗದ ನಿರ್ದೇಶಕ ಪ್ರೊ. ಶಿವಕುಮಾರಸ್ವಾಮಿ ಅತಿಥಿಯಾಗಿ ಆಗಮಿಸುವರು. ಡಾ.ಚಂದ್ರಶೇಖರ್ ಉಪಸ್ಥಿತರಿರುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.