ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದ ಸ್ಮಶಾನ ಕುರುಕ್ಷೇತ್ರ
ಕ.ಪ್ರ. ವಾರ್ತೆ, ಹೊಸನಗರ, ಡಿ.4
ಉತ್ತರ ಪ್ರದೇಶ ಸರ್ಕಾರದ ಸಾಂಸ್ಕೃತಿ ಇಲಾಖೆ ಸಹಯೋಗದಲ್ಲಿ ಅಲಹಾಬಾದ್ ನಾಟ್ಯ ಸಂಘ ಅಲಹಾಬಾದ್ನಲ್ಲಿ ಏರ್ಪಡಿಸಿದ್ದ 44ನೇ ಅಖಿಲ ಭಾರತ ಬಹುಭಾಷಾ ಲಘುನಾಟಕ ಮತ್ತು ಲೋಕನೃತ್ಯ ಸ್ಪರ್ಧೆಯಲ್ಲಿ ಕಾರಣಗಿರಿಯ ಕಲಾಭಾರತಿ ತಂಡ ಪೌರಾಣಿಕ ನಾಟಕ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದೆ.
ನವೆಂಬರ್ 19ರಿಂದ 23ರವರೆಗೆ ನಡೆದ ಈ ಸ್ಪರ್ಧೆಯಲ್ಲಿ ವಿವಿಧ ರಾಜ್ಯದ 71 ತಂಡಗಳು ಪ್ರತಿನಿಧಿಸಿದ್ದು, ವಿ. ಶಾಂತಾರಾಮ್ ನಿರ್ದೇಶನದ ಸ್ಮಶಾನ ಕುರಕ್ಷೇತ್ರ ಎಂಬ ಲಘು ನಾಟಕ ಪೌರಾಣಿಕ ವಿಭಾಗದಲ್ಲಿ ಪ್ರಥಮಸ್ಥಾನ ಗಳಿಸಿತು.
ಉತ್ತಮ ನಟ: ನಾಟಕದಲ್ಲಿ ಉತ್ತಮವಾಗಿ ಅಭಿನಯಿಸಿದ ಸರ್ಕಾರಿ ಜೂನಿಯರ್ ಕಾಲೇಜು ಪ್ರೌಢಶಾಲಾ ವಿಭಾಗದ ಶಿಕ್ಷಕ ಬಸವರಾಜ್ ಉತ್ತಮ ನಟ ಪ್ರಶಸ್ತಿ ಪಡೆದರು. ಜಾನಪದ ನೃತ್ಯ ವಿಭಾಗದಲ್ಲಿ ಕಲಾಭಾರತಿ ತಂಡ ದ್ವಿತೀಯ ಸ್ಥಾನ ಗಳಿಸಿದ್ದು, ಸೈನಿಕರು ಮತ್ತವರ ಕುಟುಂಬದವರಿಗೆ ಏರ್ಪಡಿಸಿದ್ದ, ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನೀಡಿದ ಕೋಲಾಟ ಪ್ರದರ್ಶನ ಮೆಚ್ಚುಗೆ ಗಳಿಸಿತು. ನಾಟಕ ತಂಡದಲ್ಲಿ ವಿ ಶಾಂತಾರಾಮ್, ಬಸವರಾಜ್, ಎಸ್.ಜಿ. ಪ್ರಕಾಶ್, ಕೃಷ್ಣಮೂರ್ತಿ, ಪ್ರಸನ್ನ, ಗುರುಮೂರ್ತಿ, ಪ್ರಶಾಂತ್, ಸಂತೋಷ್, ಹೇಮಾ ಮಂಡ್ರೊಳ್ಳಿ, ಅಂಜುಂ ಜಯನಗರ, ಮಂಜು, ಕೃತ್ತಿಕಾ, ಅಕ್ಷತಾ ಕಾಳಿಕಾಪುರ ಮತ್ತು ಹಿನ್ನೆಲೆ ಸಂಗೀತದಲ್ಲಿ ಪಂಚಾಕ್ಷರಿ, ಶ್ರೀಧರ ಜೋಯ್ಸ್, ಗುರುಮೂರ್ತಿ ಭಾಗವಹಿಸಿದ್ದರು. ಬೀದಿ ನಾಟಕದ ಮೂಲಕ ಗಮನ ಸೆಳೆದಿದ್ದ ಕಲಾಭಾರತಿ ತಂಡ ರಾಷ್ಟ್ರಮಟ್ಟದಲ್ಲಿಯೂ ಗುರುತಿಸಿಕೊಂಡಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

