ವೀಣಾ ಮಹೋತ್ಸವ ದಶಮಾನೋತ್ಸವಕ್ಕೆ ಚಾಲನೆ
ಕ.ಪ್ರ.ವಾರ್ತೆ ಶಿವಮೊಗ್ಗ ಡಿ. 8
ನಾವು ಸಂಗೀತವನ್ನು ಒಪ್ಪಿಕೊಂಡಿದ್ದೇವೆ. ಆದರೆ, ಸಂಗೀತ ನಮ್ಮನ್ನು ಒಪ್ಪಿಕೊಂಡಿದ್ದೇವೆಯೇ ಎಂದು ಸತತ ಪ್ರಶ್ನಿಸಿಕೊಳ್ಳುತ್ತಿರಬೇಕು ಎಂದು ಪ್ರಸಿದ್ಧ ವೀಣಾ ವಿದ್ವಾಂಸ, ಸಂಗೀತ ಶಾಸ್ತ್ರಜ್ಞ ಪ್ರೊ. ವಿದ್ವಾನ್ ವಿಶ್ವೇಶ್ವರನ್ ಹೇಳಿದರು.
ಭಾನುವಾರ ಸಂಜೆ ನಗರದ ರವೀಂದ್ರ ನಗರ ಬಡಾವಣೆಯ ಗುರುಗುಹ ವಾಗ್ಗೇಯ ಪ್ರತಿಷ್ಠಾನ ಟ್ರಸ್ಟ್ ಹಾಗೂ ಗುರುಗುಹ ಸಂಗೀತ ಮಹಾವಿದ್ಯಾಲಯ ಆಯೋಜಿಸಿದ್ದ ವೀಣಾ ಮಹೋತ್ಸವ ದಶಮಾನೋತ್ಸವ ಉದ್ಘಾಟಿಸಿ, ಈ ಪ್ರಶ್ನೆ ಕೇಳಿಕೊಂಡರೆ ಭಕ್ತಿ, ಶ್ರದ್ಧೆ, ಒಳನೋಟ, ಸೂಕ್ಷ್ಮ ಜ್ಞಾನ, ಪರಿಶ್ರಮ ಬೆಳೆಯುತ್ತಿರಬೇಕು ಎಂದರು.
ವಿಧಾನಪರಿಷತ್ ಸದಸ್ಯ ಎಂ.ಬಿ. ಭಾನುಪ್ರಕಾಶ್, ವೇದ ಹೇಗೆ ಅಪೌರುಷೇಯವೋ ಹಾಗೆ ಸಂಗೀತವೂ ಸಾವಿಲ್ಲದ್ದು ಎಂದರು.
ಅಧ್ಯಕ್ಷತೆ ವಹಿಸಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ವಿದ್ವಾನ್ ಶೃಂಗೇರಿ ನಾಗರಾಜ್ ಅವರು ಶಿವಮೊಗ್ಗದ ಆಸ್ತಿ. ಮಕ್ಕಳಿಗೆ ಸಂಸ್ಕಾರ ದೊರಕಿಸಿಕೊಡುವ ದಿಕ್ಕಿನಲ್ಲಿ ಈ ಆಸ್ತಿ ಬಳಸಿಕೊಳ್ಳಬೇಕು ಎಂದರು.
ನಾದಸುಧಾ ಸಂಸ್ಥೆ ಅಧ್ಯಕ್ಷ ಡಾ. ಬಿ. ವೆಂಕಟರಾಮ್, ಗುರುಗುಹ ಗಾನಸಭಾ ಗೌರವಾಧ್ಯಕ್ಷ ಎಂ.ಆರ್. ಶ್ರೀನಿವಾಸ ಅಯ್ಯಂಗಾರ್ ಮಾತನಾಡಿದರು. ನಂತರ ವಿದ್ವಾನ್ ಪ್ರೊ. ರಾ. ವಿಶ್ವೇಶ್ವರನ್ ಅವರಿಂದ -ವೀಣಾ ಮಾರ್ಗದರ್ಶಿ- ವೀಣಾ ವಾದನ ಕಾರ್ಯಕ್ರಮ ನಡೆಯಿತು. ಮೃದಂಗದಲ್ಲಿ ಬೆಂಗಳೂರಿನ ವಿದ್ವಾನ್ ಚೆಲುವರಾಜು, ಘಟಂನಲ್ಲಿ ಗುರುಮೂರ್ತಿ ಸಹಕರಿಸಿದರು. ಭಾನುವಾರದಿಂದ ಹತ್ತು ದಿನಗಳ ವೀಣಾ ಮಹೋತ್ಸವ ನಡೆಯಲಿದೆ.
ಶಿರಾಳಕೊಪ್ಪ: ಶಿರಾಳಕೊಪ್ಪ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರನ್ನಾಗಿ ಮಲ್ಲೇನಹಳ್ಳಿಯ ಬಿ. ಹನುಮಂತಪ್ಪ ಅವರನ್ನು ಆಯ್ಕೆ ಮಾಡಲಾಗಿದೆ.
ಕೆಪಿಸಿಸಿ ಅಧ್ಯಕ್ಷ ಪರಮೇಶ್ವರ ಅವರು ನೇಮಕಾತಿ ಆದೇಶ ನೀಡಿದ್ದು, ತಕ್ಷಣದಿಂದ ಆದೇಶ ಜಾರಿ ಮಾಡಲಾಗಿದ್ದು, ತಕ್ಷಣ ಅಧಿಕಾರ ವಹಿಸಿಕೊಂಡು ಜಿಲ್ಲಾ ಕಾಂಗ್ರೆಸ್ ಸಮಿತಿಯ ಮಾರ್ಗದರ್ಶನದಲ್ಲಿ ಮತ್ತು ಸ್ಥಳೀಯ ನಾಯಕರ ಸಹಯೋಗದೊಂದಿಗೆ ಪಕ್ಷ ಸಂಘಟನೆ ಹಾಗೂ ಬಲವರ್ಧನೆಗೆ ಕಾರ್ಯೋನ್ಮುಖರಾಗಬೇಕೆಂದು ತಿಳಿಸಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

