ಶಿವಮೊಗ್ಗ

ದಿಲ್ಲಿ 'ಕೈ' ಕುರ್ಚಿ ಅಲ್ಲಾಡಿದ್ದು ಬಿಜೆಪಿಗೆ ಶುಭ ಸೂಚಕ

Published On :

ಕ.ಪ್ರ.ವಾರ್ತೆ    ಸಾಗರ    ಡಿ. 8
ರಾಷ್ಟ್ರ ರಾಜಧಾನಿ ದೆಹಲಿಯಲ್ಲೇ ಕಾಂಗ್ರೆಸ್ ಕುರ್ಚಿ ಅಲ್ಲಾಡಿರುವುದು ಬಿಜೆಪಿಗೆ ಶುಭ ಸೂಚಕ ಎಂದು ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.
4 ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸಿರುವ ಹಿನ್ನೆಲೆಯಲ್ಲಿ ತಾಲೂಕು ಬಿಜೆಪಿ ಭಾನುವಾರ ಹಮ್ಮಿಕೊಂಡಿದ್ದ ವಿಜಯೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಒಂದು ಕಾಲದಲ್ಲಿ ದೆಹಲಿ ಧ್ವನಿ, ದೇಶದ ಧ್ವನಿ ಎನ್ನುವ ಮಾತಿತ್ತು. ಅದು ನಿಜವಾಗುತ್ತಿದೆ. ದೆಹಲಿಯಲ್ಲಿ ಕಾಂಗ್ರೆಸ್ ಪಕ್ಷ ಹೀನಾಯವಾಗಿ ಸೋತಿರುವುದು ಮುಂದೆ ದೇಶದಲ್ಲಿ ಕಾಂಗ್ರೆಸ್ ಧೂಳೀಪಟ ಆಗುವ ಸೂಚನೆ ಎಂದರು.
ದೇಶದಲ್ಲಿ ಕಾಂಗ್ರೆಸ್ ವಿರೋಧಿ ಅಲೆ ವ್ಯಾಪಕವಾಗಿದೆ. ಮುಂದಿನ ಲೋಕಸಭೆ ಚುನಾವಣೆಯ ಸೆಮಿಫೈನಲ್ನಲ್ಲಿ ಬಿಜೆಪಿ ಹೆಚ್ಚು ಸ್ಥಾನ ಗಳಿಸುವ ಮೂಲಕ ಫೈನಲ್ನಲ್ಲಿ ದಿಗ್ವಿಜಯ ಸಾಧಿಸುವ ಮುನ್ಸೂಚನೆ ನೀಡಿದೆ. ಈ ಫಲಿತಾಂಶ ಮುಂದುವರಿಯುತ್ತದೆ. ಯಾವ್ಯಾವ ಪಕ್ಷಗಳು ಎನ್ಡಿಎ ತೊರೆದು ಹೊರಗೆ ಹೋಗಿದ್ದವೋ ಅವು ಪುನಹ ಎನ್ಡಿಎ ಅಂಗಪಕ್ಷ ಆಗುವ ಜೊತೆಗೆ ಬೇರೆ ಪಕ್ಷಗಳು ಸಹ ಬಿಜೆಪಿಯೊಂದಿಗೆ ಕೈಜೋಡಿಸಿ, ಮೋದಿ ಪ್ರಧಾನಿ ಆಗುವುದು ಖಚಿತ ಎಂದರು.
ಬಿ.ಎಸ್. ಯಡಿಯೂರಪ್ಪ ಬಿಜೆಪಿ ಸೇರುವುದು ಬಹುತೇಕ ಖಚಿತವಾಗಿದೆ. ಬಿಜೆಪಿಯೊಂದಿಗೆ ಕೆಜೆಪಿ ವಿಲೀನವಾದರೆ ನಮ್ಮ ಶಕ್ತಿ ನೂರುಪಟ್ಟು ಹೆಚ್ಚುತ್ತದೆ. ಯಡಿಯೂರಪ್ಪ ಅವರು ಈ ಹಿಂದೆ ಮೋದಿ ಪ್ರಧಾನಿಯಾಗಬೇಕು ಎಂಬ ಅಭಿಪ್ರಾಯಪಟ್ಟಿದ್ದರು. ನಮ್ಮ ಉದ್ದೇಶವೂ ಮೋದಿ ಪ್ರಧಾನಿಯಾಗಬೇಕು ಎಂದಿರುವುದರಿಂದ ಸಹಜವಾಗಿ ಇಬ್ಬರೂ ಸೇರಿ ರಾಜ್ಯದಲ್ಲಿ ಹೆಚ್ಚು ಸ್ಥಾನ ಗಳಿಸಲು ಪ್ರಯತ್ನ ನಡೆಸುತ್ತೇವೆ. ಯಡಿಯೂರಪ್ಪ ಅವರನ್ನು ಬಿಜೆಪಿಗೆ ಕರೆ ತರುವ ನಿಟ್ಟಿನಲ್ಲಿ ಇದ್ದ ಚರ್ಚೆಗಳೆಲ್ಲಾ ಮುಕ್ತಾಯವಾಗಿವೆ. ಶೀಘ್ರದಲ್ಲಿಯೇ ಅವರು ತಮ್ಮ ಮಾತೃಪಕ್ಷಕ್ಕೆ ಬರುವ ಎಲ್ಲ ಲಕ್ಷಣಗಳು ಗೋಚರವಾಗಿದೆ ಎಂದರು.
ಶಿವಮೊಗ್ಗ ಲೋಕಸಭಾ ಚುನಾವಣೆಗೆ ಇನ್ನೂ ಅಭ್ಯರ್ಥಿ ಪಟ್ಟಿ ಅಂತಿಮಗೊಳಿಸಿಲ್ಲ. ಈಗಾಗಲೇ ನನ್ನನ್ನು ಸೇರಿದಂತೆ, ಕೆ.ಎಸ್. ಈಶ್ವರಪ್ಪ, ಆರಗ ಜ್ಞಾನೇಂದ್ರ, ಭಾನುಪ್ರಕಾಶ್ ಹಾಗೂ ಆರ್.ಕೆ. ಸಿದ್ದರಾಮಣ್ಣ ಅವರ ಹೆಸರು ಪ್ರಸ್ತಾಪದಲ್ಲಿದೆ. ಒಂದೊಮ್ಮೆ ಬಿ.ಎಸ್. ಯಡಿಯೂರಪ್ಪ ಬಿಜೆಪಿಗೆ ಮರಳಿ ಬಂದರೆ ಹಾಲಿ ಸಂಸದ ಬಿ.ವೈ. ರಾಘವೇಂದ್ರ ಅವರ ಹೆಸರನ್ನು ಸೇರಿಸಿಕೊಂಡು ಗೆಲ್ಲಲು ಯಾರು ಸಮರ್ಥರು ಎಂಬುದನ್ನು ಪರಿಶೀಲಿಸಿ ಅವರಿಗೆ ಟಿಕೇಟ್ ನೀಡಲಾಗುವುದು ಎಂದು ಹೇಳಿದರು.
ಬಿಜೆಪಿ ತಾಲೂಕು ಅಧ್ಯಕ್ಷ ಚೇತನರಾಜ್, ನಗರ ಘಟಕದ ಅಧ್ಯಕ್ಷ ಸತೀಶಬಾಬು, ಕಾರ್ಯದರ್ಶಿಗಳಾದ ರವೀಶಕುಮಾರ್, ವ.ಶಂ. ರಾಮಚಂದ್ರ ಭಟ್, ಸಂತೋಷ ಶೇಟ್, ಮಹಿಳಾ ಮೋರ್ಚಾ ಜಿಲ್ಲಾಧ್ಯಕ್ಷೆ ಶರಾವತಿ ಸಿ. ರಾವ್, ಜಿಲ್ಲಾ ಘಟಕದ ಉಪಾಧ್ಯಕ್ಷ ಯು.ಎಚ್. ರಾಮಪ್ಪ, ಯುವ ಮೋರ್ಚಾ ಅಧ್ಯಕ್ಷ ರಾಜು ಮಡಿವಾಳ, ಎಲ್.ವಿ. ಅಕ್ಷರ, ಪುರುಷೋತ್ತಮ, ಶ್ರೀನಿವಾಸ್, ಅರವಿಂದ್ ರಾಯ್ಕರ್, ಯಶೋದಮ್ಮ, ಲಕ್ಷ್ಮಣ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.