ಶಿವಮೊಗ್ಗ

ಮೊದಲು ಮನಸ್ಸು ಗಟ್ಟಿಗೊಳಿಸಿ

Published On :

ಕ.ಪ್ರ.ವಾರ್ತೆ ಟಿ ಹೊಸನಗರ ಟಿ  ಡಿ.12
ದೇಶವನ್ನು ಗಟ್ಟಿಗೊಳಿಸುವ ಮುನ್ನ ಪರಸ್ಪರ ನಮ್ಮ ಮನಸ್ಸುಗಳನ್ನು ಗಟ್ಟಿಗೊಳಿಸಿಕೊಳ್ಳಬೇಕಿದೆ ಎಂದು ರಾಮಚಂದ್ರಾಪುರಮಠದ ರಾಘವೇಶ್ವರಭಾರತೀ ಶ್ರೀ ಹೇಳಿದರು.
ರಾಮಚಂದ್ರಾಪುರ ಮಠದ ಆವರಣದಲ್ಲಿ ನಡೆದ ಬ್ರಹ್ಮಲೀನ ರಾಘವೇಂದ್ರ ಭಾರತೀ ಸ್ವಾಮೀಜಿಯವರ 16 ನೇ ಆರಾಧನಾ ಮಹೋತ್ಸವ ಮತ್ತು ಶಿಷ್ಯ ಸಮಾವೇಶದಲ್ಲಿ ಪ್ರಧಾನ ಮಠದ ಪುನರ್ ನಿರ್ಮಾಣ ಉದ್ಘೋಷಣೆ ಮಾಡಿ, ಆಶೀರ್ವಚನ ನೀಡಿದರು.
ಭಾಷಣಕ್ಕೆ ಸೀಮಿತ: ಪಸ್ತುತ ಸಮಾನತೆ ಮಾತುಗಳು ಭಾಷಣಕ್ಕೆ ಸೀಮಿತವಾಗುತ್ತಿವೆ. ಆದರೆ ಅದು ಆಚರಣೆಯಲ್ಲಿದ್ದರೆ ಮಾತ್ರ ಅದು ಸಾರ್ಥಕವಾಗುತ್ತದೆ. ಸಮಾನತೆ, ಮನಸ್ಸು ಮತ್ತು ಹೃದಯದಲ್ಲಿರಬೇಕು. ಆಡಂಬರದಲ್ಲಲ್ಲ ಎಂದ ಅವರು, ಆಳವಾಗಿ ಗಮನಿಸಿದಾಗ ಸಮಾನತೆ ಇಲ್ಲ ಎನ್ನುವಲ್ಲಿ ನಿಜವಾಗಿಯೂ ಅಂತಹ ಭಾವ ಕಂಡು ಬರುತ್ತದೆ ಎಂದರು.
ಅದು ಇದೆ ಎಂದು ತೋರಿಸುವಲ್ಲಿ ಹುಸಿತನ ಅಡಗಿರುತ್ತದೆ ಎಂದರು. ಶ್ರದ್ಧೆಯಿಂದ ಅರ್ಪಣೆ ಮಾಡಿಕೊಂಡ  ಯಾವ ವ್ಯಕ್ತಿಗೂ ಜೀವನ ದಾರಿದ್ರ್ಯ ಇಲ್ಲ. ಅರ್ಪಣಾಭಾವವಿಲ್ಲದವರಿಗೆ ಎಷ್ಟಿದ್ದರೂ ಎಂದೂ ನೆಮ್ಮದಿ ಇಲ್ಲ,
ನಂಬಿಕೆ ವ್ಯಕ್ತಿಯನ್ನು ಉತ್ತುಂಗಕ್ಕೇರಿಸುವ ಮೌಲ್ಯ ಅದರ ಮೇಲೆ ಯಾರಿಗೂ ಅಧಿಕಾರವಿಲ್ಲ ಎಂದರು.
ಇದಕ್ಕೂ ಮುನ್ನ ಬ್ರಹ್ಮಲೀನ ರಾಘವೇಂದ್ರ ಭಾರತೀ ಸ್ವಾಮೀಜಿಯವರ ಸಂಸ್ಮರಣೆ ಅಂಗವಾಗಿ ವಿಶೇಷ ಗಾನ ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು.
ಗಾಯಕ ಚಂದ್ರಶೇಖರ ಕೆದಿಲಾಯ ಗಾಯನ ನಡೆಸಿಕೊಟ್ಟರು. ವಿದ್ವಾನ್ ಜಗದೀಶ್ ಶರ್ಮ,  ಸಿ.ಎಚ್.ಎಸ್. ಭಟ್, ಮತ್ತು ಮೋಹನ ಭಾಸ್ಕರ್ ಹೆಗಡೆ ವ್ಯಾಖ್ಯಾನ ನಿರ್ವಹಿಸಿದರು. ಮಾಜಿ ಶಾಸಕ ಎಲ್.ಟಿ. ತಿಮ್ಮಪ್ಪ ಹೆಗಡೆ, ಹೊರನಾಡು ಅನ್ನಪೂರ್ಣೇಶ್ವರಿ ದೇವಾಲಯದ ಧರ್ಮದರ್ಶಿ ಭೀಮೇಶ್ವರ ಜೋಯ್ಸ್, ಮಠದ ಕಾರ್ಯನಿರ್ವಹಣಾಧಿಕಾರಿ ಕೆ.ಜಿ. ಭಟ್,  ಹವ್ಯಕ ಮಹಾಮಂಡಲ ಅಧ್ಯಕ್ಷ ವೈ.ವಿ. ಕೃಷ್ಣಮೂರ್ತಿ, ಮಾತೃವಿಭಾಗದ ಈಶ್ವರಿ  ಸೇವಾ ಪ್ರಧಾನ
ಜಟ್ಟಿಮನೆ ಗಣಪತಿಭಟ್, ಪ್ರಧಾನ ಮಠದ ನಿರ್ವಹಣ ಸಮಿತಿ ಅಧ್ಯಕ್ಷ  ಸಂಪೆಕಟ್ಟೆ ಕುಮಾರ್, ಹೆರಂಬ ಶಾಸ್ತ್ರಿ, ವಿಶ್ವೇಶ್ವರ ಉಂಡೇಮನೆ, ರಮೇಶ್ ಹೆಗಡೆ ಇದ್ದರು. ಹವ್ಯಕ ಮಹಾಮಂಡಲದ ಕಾರ್ಯದರ್ಶಿ ಪ್ರಮೋದ ಪಂಡಿತ್ ನಿರೂಪಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.