ಪೇದೆ ಕೊಲೆ: 3 ಬಂಧನ
ಕ.ಪ್ರ.ವಾರ್ತೆ, ಶಿವಮೊಗ್ಗ, ಡಿ.13
ನಗರದ ಬೊಮ್ಮನಕಟ್ಟೆ ಬಡಾವಣೆಯಲ್ಲಿ ನಡೆದ ಪೊಲೀಸ್ ಪೇದೆಯ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರು ಆರೋಪಿಗಳನ್ನು ಬಂಧಿಸುವಲ್ಲಿ ವಿನೋಬನಗರ ಠಾಣೆ ಪೊಲೀಸರು ಯಶಸ್ವಿಯಾಗಿದ್ದು, ಬಂಧಿತರ ಪೈಕಿ ಇಬ್ಬರು ವಿದ್ಯಾರ್ಥಿಗಳಾಗಿದ್ದಾರೆ.
ಮಲ್ಲೇಶಪ್ಪ (54), ಅವರ ಪುತ್ರ ಡಿಪ್ಲೋಮಾ ಓದುತ್ತಿದ್ದ ಮನು (17) ಹಾಗೂ ಎಂಜಿನಿಯರಿಂಗ್ ಅಭ್ಯಾಸ ಮಾಡುತ್ತಿದ್ದ ಮಂಜುನಾಥ್ (20) ಬಂಧಿತರು. ಮೊಬೈಲ್ ಕರೆಯ ಜಾಡು ಹಿಡಿದ ವಿನೋಬನಗರ ಪೊಲೀಸರು ಶಿಕಾರಿಪುರ ತಾಲೂಕಿನ ಕಲ್ಮನೆಯ ತೋಟದ ಮನೆಯೊಂದರಲ್ಲಿ ಅಡಗಿದ್ದ ಆರೋಪಿಗಳನ್ನು ಶುಕ್ರವಾರ ಬೆಳಿಗ್ಗೆ ಬಂಧಿಸಿದರು.
ನಗರದ ಹೊರವಲಯ ಬೊಮ್ಮನಕಟ್ಟೆ ಬಡಾವಣೆಯ ಬಳಸೋಕೆರೆ ಸಮೀಪದ ಮಲ್ಲೇಶಪ್ಪನವರ ಮನೆಯ ಆವರಣದಲ್ಲಿ ನಡೆದ ಕಲಹದಲ್ಲಿ ದಾವಣಗೆರೆ ವಿದ್ಯಾನಗರದ ಪೊಲೀಸ್ ಪೇದೆ ನಾಗರಾಜ್ (32)ರನ್ನು ಕೊಲೆ ಮಾಡಲಾಗಿತ್ತು.
ಕೌಟುಂಬಿಕ ಕಲಹ: ಮಲ್ಲೇಶಪ್ಪರ ಪತ್ನಿಯ ಅಕ್ಕನ ಮಗಳನ್ನು ನಾಗರಾಜ್ ವಿವಾಹವಾಗಿದ್ದರು. ಆದರೆ, ಕೌಟಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯೂ ನಾಗರಾಜ್ರನ್ನು ತೊರೆದಿದ್ದರು.
ಮಾತಿನ ಚಕಮಕಿ: ಸೋಮವಾರ ಬೊಮ್ಮನಕಟ್ಟೆಗೆ ಆಗಮಿಸಿದ್ದ ನಾಗರಾಜ್ ಮತ್ತೆ ಗಲಾಟೆ ನಡೆಸಿದ್ದು, ಆಗ ಆಕ್ರೋಶಗೊಂಡ ಮಲ್ಲೇಶಪ್ಪ ನಾಗರಾಜ್ನನ್ನು ನೆಲಕ್ಕೆ ಕೆಡವಿ ಮರದ ತುಂಡಿನಿಂದ ಬಡಿದು, ತಲೆ ಮೇಲೆ ಕಲ್ಲು ಎತ್ತಿಹಾಕಿದ್ದಾರೆ. ಈ ಸಂದರ್ಭದಲ್ಲಿ ಮನೆಯಲ್ಲಿ ಓದುತ್ತಿದ್ದ ಮಕ್ಕಳೂ ಸಹ ಘಟನೆಗೆ ಸಾಕ್ಷಿಯಾಗಿದ್ದಾರೆ, ಆರೋಪಿ ಪಟ್ಟವನ್ನೂ ಹೊತ್ತುಕೊಂಡಿದ್ದಾರೆ.
ಪೊಲೀಸರ ಬೇಟೆ: ಆರೋಪಿ ಮಲ್ಲೇಶಪ್ಪರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದರು.
ಡಿಸೆಂಬರ್ 10ರಂದು ಕೊಲೆ ನಡೆದಿದ್ದು, 12ರಂದು ಬೆಳಿಗ್ಗೆ ಆರೋಪಿಗಳು ಶಿಕಾರಿಪುರ ತಾಲೂಕಿನಲ್ಲಿರುವುದು ಗೊತ್ತಾಯಿತು. ಆರೋಪಿಗಳು ಬಳಸಿದ ಮೊಬೈಲ್ ಚಾಲೂಗೊಂಡ ನಂತರ ನೆಟ್ವರ್ಕ್ ಆಧರಿಸಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

