ವಿವೇಕ ಕಳೆದುಕೊಳ್ಳುತ್ತಿರುವ ಬುದ್ಧಿವಂತರು: ಗುರುಮಾತಾ ಅಮ್ಮ
ಶಿವಮೊಗ್ಗ: ಪ್ರಸ್ತುತ ಮನುಷ್ಯ ಎಷ್ಟೇ ಬುದ್ಧಿವಂತನಾದರೂ, ಹಲವು ಪಿಎಚ್ಡಿ ಗೌರವಗಳನ್ನು ಪಡೆದರೂ ವಿವೇಕ ಕಳೆದುಕೊಳ್ಳುತ್ತಿದ್ದಾನೆ ಎಂದು ಬೆಂಗಳೂರು ಶ್ರೀಧರ ಶ್ರೀಗುಡ್ಡ ಕೇಂದ್ರದ ಸಂಸ್ಥಾಪಕಿ ಗುರುಮಾತಾ ಅಮ್ಮ ಹೇಳಿದರು.
ಪಾಥ್ವೇಸ್ ಘಟಕ ಬುಧವಾರ ಸಹ್ಯಾದ್ರಿ ಕಾಲೇಜಿನ ಸಿಎನ್ಆರ್ ರಾವ್ ಸಭಾಂಗಣದಲ್ಲಿ ಆಯೋಜಿಸಿದ್ದ ಮಧ್ಯಂತರ ಕಾರ್ಯಾಗಾರದಲ್ಲಿ ಮಾತನಾಡಿದ ಅವರು, ಮನುಷ್ಯ ವಿವೇಕ ಎಂಬುದು ಬೆಳೆಸಿಕೊಂಡರೆ ಆತನಿಗೆ ಗೌರವ, ನೈತಿಕತೆ ತಾನಾಗಿಯೇ ದೊರೆಯುತ್ತದೆ. ಇದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಎಂದು ಕರೆ ನೀಡಿದರು.
ಇಂದು ಯಂತ್ರಗಳ ರೂಪದಲ್ಲಿ ಕಾರ್ಯನಿರ್ವಹಿಸುತ್ತಿರುವ ನಮ್ಮಲ್ಲಿ ವಿವೇಕ ನಶಿಸುತ್ತಿದೆ. ಪ್ರತಿಯೊಬ್ಬರು ಯಂತ್ರಗಳ ರೀತಿ ತಮ್ಮ ಕಾರ್ಯದಲ್ಲಿ ತೊಡಗಿರುವುದರಿಂದ ಜ್ಞಾನ ಹೆಚ್ಚಾಗುತ್ತದೆ ಹೊರತು ಸಮಾಜದಲ್ಲಿ ವಿವೇಕಯುತ ಜೀವನ ನಡೆಸುವಲ್ಲಿ ವಿಫವಾಗಿದ್ದೇವೆ ಎಂದರು.
ವಿವೇಕವೇ ಜ್ಞಾನದ ಕೇಂದ್ರ ಬಿಂದು. ಅದು ಜನರಲ್ಲಿ ಪರಸ್ಪರ ಸಹಾಯ ಮಾಡುವ ಹಾಗೂ ಸ್ಪಂದಿಸುವ ಗುಣಗಳನ್ನು ಬೆಳೆಸುತ್ತದೆ. ಪ್ರತಿಯೊಂದು ಸಂದರ್ಭವನ್ನು ಪ್ರಶ್ನೆ ಮಾಡಿ ಉತ್ತರ ಪಡೆಯುವ ಗುಣಗಳನ್ನು ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಸಹ್ಯಾದ್ರಿ ವಿಜ್ಞಾನ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಜಿ.ಶಕುಂತಲಾ, ಸಹ್ಯಾದ್ರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಪ್ರೊ. ಎಚ್.ಜಯದೇವಪ್ಪ, ಫಾಥ್ವೇಸ್ ಘಟಕದ ನಿರ್ದೇಶಕ ಡಾ ಬಿ.ಸಿ.ಪಾಟೀಲ್, ವಿದ್ಯಾರ್ಥಿನಿ ಕಾವ್ಯಾ ಮತ್ತಿತರರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

