ಕನ್ನಡ ಬರವಣಿಗೆ ಸರಳೀಕರಣದಿಂದ ಆತಂಕ ನಿವಾರಣೆ ಸಾಧ್ಯ
ಕ.ಪ್ರ.ವಾರ್ತೆ, ಸಾಗರ, ಡಿ.19
ಪ್ರಸ್ತುತ ಕನ್ನಡ ಭಾಷೆ ಎದುರಿಸುತ್ತಿರುವ ಆತಂಕ ನಿವಾರಣೆ ಆಗಬೇಕಾದರೆ ಕನ್ನಡ ಬರವಣಿಗೆ ಸರಳೀಕರಿಸಬೇಕು ಎಂದು ಪಂಪ ಪ್ರಶಸ್ತಿ ಪುರಸ್ಕೃತ ಭಾಷಾ ವಿದ್ವಾಂಸ ಡಿ.ಎನ್. ಶಂಕರ ಭಟ್ಟ ಹೇಳಿದರು.
ಇಲ್ಲಿನ ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ನೀಡಿದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಎಲ್ಲರೂ ಕನ್ನಡವನ್ನು ಓದುವಂತಾಗಬೇಕು. ಕನ್ನಡ ಬರೆಯಲು ಸುಲಭವಾಗಬೇಕು. ಸಂಸ್ಕೃತ ಶಬ್ಧ ಬಳಸಿ ಬರೆದರೆ ಶ್ರೇಷ್ಠರು ಎಂಬ ಮನೋಭಾವ ಕನ್ನಡಿಗರಿಂದ ಮೊದಲು ದೂರವಾಗಬೇಕು ಎಂದು ಅಭಿಪ್ರಾಯಪಟ್ಟರು.
ಒಂದು ಕಾಲದಲ್ಲಿ ವಿದ್ಯೆ ಮೇಲ್ವರ್ಗದವರಿಗೆ ಮಾತ್ರ ಸೀಮಿತ ಎನ್ನುವ ವಾತಾವರಣವಿತ್ತು. ಆಗ ಸಹಜವಾಗಿ ಸಂಸ್ಕೃತ ಬಳಕೆ ಹೆಚ್ಚಾಗಿತ್ತು. ಈಗ ಎಲ್ಲ ವರ್ಗದವರೂ ಶಿಕ್ಷಣದ ಬಗ್ಗೆ ಆಸಕ್ತಿ ವಹಿಸಿರುವುದರಿಂದ ಸಂಸ್ಕೃತದ ಬಳಕೆ ಅಗತ್ಯವಿಲ್ಲ. ಕನ್ನಡಭಾಷೆ ಅತ್ಯಂತ ಶ್ರೀಮಂತವಾದದ್ದು. ಆಡುಭಾಷೆಯೇ ಬರವಣಿಗೆಯಲ್ಲಿಯೂ ಚಾಲ್ತಿಗೆ ಬರಬೇಕು. ಬರವಣಿಗೆಯ ಭಾಷೆ ಸುಲಭವಾಗಿದ್ದರೆ ಅದನ್ನು ಬಳಸುವವರ ಸಂಖ್ಯೆ ಹೆಚ್ಚುತ್ತದೆ ಎಂದು ಪ್ರತಿಪಾದಿಸಿದರು.
ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಸಂಸ್ಥಾಪಕ ಮ.ಸ. ನಂಜುಂಡಸ್ವಾಮಿ ಮಾತನಾಡಿ, ಶಂಕರಭಟ್ಟ ಅವರಂಥವರು ಯುವಜನರಿಗೆ ಆದರ್ಶರಾಗಬೇಕು. ಕನ್ನಡ ಬರವಣಿಗೆ ಸರಳೀಕರಿಸುವ ನಿಟ್ಟಿನಲ್ಲಿ ಶಂಕರಭಟ್ಟರು ಮಾಡುತ್ತಿರುವ ಕಾರ್ಯ ನಿಜಕ್ಕೂ ಅರ್ಥಪೂರ್ಣ. ಅವರ ಆಲೋಚನೆ ಜನರಿಗೆ ತಲುಪುವಂತಾಗಬೇಕು ಎಂದು ಹೇಳಿದರು.
ತಾಲೂಕು ಕಸಾಪ ಕಾರ್ಯದರ್ಶಿ ಜಿ.ನಾಗೇಶ್, ನಿರ್ದೇಶಕರಾದ ಲೋಕೇಶಕುಮಾರ್, ಡಾ.ಕೆಳದಿ ವೆಂಕಟೇಶ್ ಜೋಯಿಸ್, ವಿಪ್ರ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಶ್ರೀಧರ ಆರ್. ಭಟ್, ಕಾರ್ಯದರ್ಶಿ ವೈ.ಮೋಹನ್, ಪ್ರೊ. ಗಣೇಶಭಟ್, ಎಲ್.ಎಂ. ಹೆಗಡೆ, ಕೆ.ಜಿ. ಮುರಳಿಧರ ಹತ್ವಾರ್, ಎಂ.ಬಿ. ವೆಂಕಟೇಶ್, ನಾಗವೇಣಿ, ಬದರಿನಾಥ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

