ರೈತ ಹೋರಾಟಗಾರರ ನೆನಪಿಗೆ ಬಸ್ಸು ನಿಲ್ದಾಣ: ಶಾಸಕಿ ಶಾರದಾ
ಶಿವಮೊಗ್ಗ,: ಗ್ರಾಮಾಂತರ ಕ್ಷೇತ್ರದ ಒಂದೆರಡು ಕಡೆ ರೈತ ಹೋರಾಟಗಾರ ಎನ್.ಡಿ. ಸುಂದರೇಶ್ ಹಾಗೂ ಪ್ರೊ. ನಂಜುಂಡಸ್ವಾಮಿಯವರ ನೆನಪಿಗಾಗಿ ಬಸ್ಸು ನಿಲ್ದಾಣ ನಿರ್ಮಿಸುವುದಾಗಿ ಗ್ರಾಮಾಂತರ ಶಾಸಕಿ ಶಾರದಾ ಪೂರ್ಯಾನಾಯ್ಕ ಭರವಸೆ ನೀಡಿದರು.
ಎನ್.ಡಿ. ಸುಂದರೇಶ್ ಪ್ರತಿಷ್ಟಾನ ನಗರದ ಕಮಲಾ ನೆಹರು ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಭಾನುವಾರ ಆಯೋಜಿಸಿದ್ದ ಎನ್.ಡಿ. ಸುಂದರೇಶ್ ವ್ಯಕ್ತಿ ಮತ್ತು ವ್ಯಕ್ತಿತ್ವ ಕುರಿತ ವಿಚಾರ ಸಂಕಿರಣದಲ್ಲಿ ಮಾತನಾಡಿದ ಅವರು, ಎನ್.ಡಿ. ಸುಂದರೇಶ್ ಹಾಗೂ ನಂಜುಂಡಸ್ವಾಮಿ ರೈತ ಸಂಘವನ್ನು ಸಂಘಟನೆ ಮೂಲಕ ಕಟ್ಟಿ ಬೆಳೆಸಿದ್ದಾರೆ. ಅವರನ್ನು ಸ್ಮರಿಸುವುದು ನಮ್ಮೆಲ್ಲರ ಕರ್ತವ್ಯ. ಈ ಹಿನ್ನೆಲೆಯಲ್ಲಿ ಬಸ್ಸು ನಿಲ್ದಾಣ ನಿರ್ಮಾಣ ಮಾಡಲಾಗುವುದು ಎಂದರು.
ಪರಿಹಾರ ಕೊಡಿಸುವಲ್ಲಿ ಯಶಸ್ಸು: ರೈತರು ಸಮಸ್ಯೆಗಳಲ್ಲಿ ಇದ್ದಾಗ ಅವರಿಗೆ ಧ್ವನಿಗೂಡಿಸಿದವರು ಈ ನಾಯಕರು. ಇಡೀ ರಾಜ್ಯದ ಹಳ್ಳಿಗಳ ಮೂಲೆ- ಮೂಲೆ ತಿರುಗಿ ರೈತರ ಕಷ್ಟ ಆಲಿಸಿ ಅದಕ್ಕೆ ಸಕಾಣೇರದಿಂದ ಸಿಗಬೇಕಾದ ಪರಿಹಾರವನ್ನು ಕೂಡಿಸುವಲ್ಲಿ ಯಶಸ್ವಿಯಾದವರು. ಇದಕ್ಕೆ ಯಾವ ರೀತಿ ಹೋರಾಟ ಮಾಡಿದ್ದರೂ ಎಂದು ಎಲ್ಲರೂ ತಿಳಿಯಬೇಕು. ಅದರಲ್ಲೂ ಮುಖ್ಯವಾಗಿ ಇಂದಿನ ಪೀಳಿಗೆಯವರು ಇವರ ಬಗ್ಗೆ ತಿಳಿಯಬೇಕಿದೆ ಎಂದರು.
ರೈತ ನಾಯಕಿ ಸುನಂದ ಜಯರಾಮ್ ಮಾತನಾಡಿ, ಎನ್.ಡಿ. ಸುಂದರೇಶ್ ಹಸಿರು ಬಟ್ಟೆ ಧರಿಸಿ ಸಂಘಟನೆಗಾಗಿ ಸೈನಿಕರಂತೆ ಹೋರಾಟ ಮಾಡುತ್ತಿದ್ದರು. ಅಂತಹ ವ್ಯಕ್ತಿಗಳನ್ನು ದೀರ್ಘಕಾಲ ಉಳಿಸಿಕೊಳ್ಳಲು ಸಾಧ್ಯವಾಗಿಲ್ಲ. ಇಂದು ಅವರ ಆಶೋತ್ತರಗಳಿಗೆ ದಕ್ಕೆಯಾಗಿದೆ. ಇದನ್ನು ಸಹಿಸಲು ಸಾಧ್ಯವಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಎನ್.ಡಿ. ಸುಂದರೇಶ್ ಪ್ರತಿಷ್ಠಾನದ ಅಧ್ಯಕ್ಷೆ ಶೋಭಾ ಸುಂದರೇಶ್, ನಗರಸಭೆ ಉಪಾಧ್ಯಕ್ಷೆ ರೇಖಾ ಚಂದ್ರಶೇಖರ್, ವೀಣಾ, ಕಿರಣ ದೇಸಾಯಿ, ರೈತ ಮುಖಂಡ ದುರ್ಗಪ್ಪ, ಬೋರಯ್ಯ ಇತರರು ಇದ್ದರು.
ಪ್ರಧಾನಿ ಬಳಿ ನಿಯೋಗ
ಅಡಕೆ- ತೆಂಗು ಬೆಳೆಗಾರರ ಸಮಸ್ಯೆಯನ್ನು ಕೇಂದ್ರ ಸರ್ಕಾರದ ಗಮನ ಸೆಳೆಯುವ ಉದ್ದೇಶದಿಂದ ನಿಯೋಗ ಹೊರಡಲು ರೈತ ಸಂಘ ಉದ್ದೇಶಿಸಿದೆ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಬಡಗಲಪುರ ನಾಗೇಂದ್ರ ತಿಳಿಸಿದ್ದಾರೆ. ಪ್ರಧಾನ ಮಂತ್ರಿ ಮನಮೋಹನ್ ಸಿಂಗ್, ಕೃಷಿ ಸಚಿವ ಶರದ್ ಪವಾರ್ ಅವರನ್ನು ಜನವರಿ ಎರಡನೇ ವಾರದಲ್ಲಿ ಭೇಟಿ ಮಾಡಲು ಪ್ರಯತ್ನ ನಡೆಸಲಾಗಿದೆ ಎಂದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

