ಅಡಕೆಗೆ ಹಳದಿ ಎಲೆ ರೋಗ ಬಾಧೆ
ಕ.ಪ್ರ.ವಾರ್ತೆ ಟಿ ಹೊಸನಗರ ಟಿ ಡಿ.24
ಸಾಂಪ್ರದಾಯಿಕ ಅಡಕೆ ತೋಟಗಳಾದ ನಿಟ್ಟೂರು ಭಾಗದಲ್ಲಿ ಈ ಬಾರಿಯ ಅತಿಯಾದ ಮಳೆಯಿಂದಾಗಿ ಅಡಕೆ ತೋಟಗಳಿಗೆ ಕೊಳೆ ರೋಗ ಬಂದು ಶೇಕಡಾ 80 ರಷ್ಟು ಬೆಳೆ ನಷ್ಟ ಸಂಭವಿಸಿ ರೈತರು ಸಂಕಷ್ಟದಲಿರುವ ಸಂದರ್ಭದಲ್ಲೇ ಹಳದಿ ಎಲೆ ರೋಗ ಕಾಣಿಸಿಕೊಂಡಿದ್ದು, ಅಡಕೆ ಬೆಳೆಗಾರರನ್ನು ಆತಂಕಕ್ಕೆ ದೂಡಿದೆ.
ಅಡಕೆ ಮರಗಳು ಮತ್ತು ಕಾಳು ಮೇಣಸು ಬಳ್ಳಿಗಳು ಹಾಳಾಗುತ್ತಿದ್ದು, ಹಳದಿ ಎಲೆ ರೋಗ ಬಾಧಿಸುತ್ತಿರುವುದೆ ಇದಕ್ಕೆ ಕಾರಣವಿರಬಹುದು ಎಂದು ಅಂದಾಜಿಸಿ ತಾಲೂಕಿನ ನಿಟ್ಟೂರಿನ ಶೋಧ ಸಂಸ್ಥೆಯು ನವಿಲೆಯ ಅಡಕೆ ಸಂಶೋಧನ ಕೇಂದ್ರಕ್ಕೆ ಮಾಹಿತಿ ನೀಡಿದೆ.
ಕೃಷಿ ವಿಜ್ಞಾನಿಗಳಾದ ಡಾ. ಶೇಷಗಿರಿ, ಡಾ. ನಾರಾಯಣ ಸ್ವಾಮಿ, ಡಾ. ದೇಶಮುಖ್, ತೋಟಗಳಿಗೆ ಭೇಟಿ ನೀಡಿ ಅಡಕೆ ಮರಗಳು ಸಾಯುತ್ತಿರುವುದನ್ನು ಪರೀಶೀಲಿಸಿದ್ದಾರೆ. ಹಳದಿ ಎಲೆ ರೋಗದ ಲಕ್ಷಣಗಳು ಗೋಚರಿಸುತ್ತಿರುವ ಬಗ್ಗೆ ವಿಜ್ಞಾನಿಗಳು ಶಂಕೆ ವ್ಯಕ್ತ ಪಡಿಸಿದ್ದು ಹೆಚ್ಚಿನ ಪರಿಶೀಲನೆಗಾಗಿ ಅಡಕೆ ಮರದ ಮಾದರಿಗಳನ್ನು ಪರೀಕ್ಷೆಗಳಿಗಾಗಿ ತೆಗೆದುಕೊಂಡು ಹೋಗಿದ್ದಾರೆ.
ಈಗಾಗಲೇ ಪ್ರತಿ ಎಕರೆಯಲ್ಲಿ ಶೇ.20ರಷ್ಟು ಮರಗಳು ಸತ್ತಿದ್ದು, ರೈತರು ಆತಂಕಗೊಡಿದ್ದು. ಸರ್ಕಾರವು ಗೋರಖ್ಸಿಂಗ್ ವರದಿಯನ್ನು ಅನುಷ್ಠಾನಗೊಳಿಸಿ ರೈತರ ನೆರವಿಗೆ ಧಾವಿಸುವಂತೆ ಶೋಧ ಸಂಸ್ಥೆಯ ವಿವೇಕ್ ನಿಟ್ಟೂರ್ ಅಗ್ರಹಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

