ತಾಲೂಕು, ಜಿಲ್ಲಾ ಮಟ್ಟದ ಕೃಷಿ ಪ್ರಶಸ್ತಿ ವಿಜೇತರಿಗೆ ಸನ್ಮಾನ
ಕ.ಪ್ರ.ವಾರ್ತೆ ಟಿ ಶಿವಮೊಗ್ಗ ಟಿ ಡಿ.24
2012- 13ನೇ ಸಾಲಿನ ಜಿಲ್ಲಾ ಮತ್ತು ತಾಲೂಕು ಮಟ್ಟದ ಕೃಷಿ ಪ್ರಶಸ್ತಿ ವಿಜೇತರಿಗೆ ಇಲಾಖೆ ಸನ್ಮಾನಿಸಿದೆ.
ನವಿಲೆಯ ಕೃಷಿ ವಿಜ್ಞಾನ ಕೇಂದ್ರ, ಕೃಷಿ ಇಲಾಖೆ ಮತ್ತು ಕೃಷಿ ತಂತ್ರಜ್ಞಾನ ಸಂಸ್ಥೆ ಆಶ್ರಯದಲ್ಲಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ಆಯೋಜಿಸಿದ್ದ ಭಾರತದ 5ನೇ ಪ್ರಧಾನ ಮಂತ್ರಿ ಚೌಧರಿ ಚರಣ್ ಸಿಂಗ್ ಅವರ ಜನ್ಮದಿನದ ಪ್ರಯುಕ್ತ ರೈತ ದಿನಾಚರಣೆ ಮತ್ತು ಕೀಟನಾಶಕಗಳ ಸುರಕ್ಷಿತ ಬಳಕೆ ಕುರಿತ ತರಬೇತಿ ಕಾರ್ಯಕ್ರಮದಲ್ಲಿ ಸುಮಾರು 26 ಜನ ರೈತರನ್ನು ಅಭಿನಂದಿಸಲಾಯಿತು.
ಪ್ರಶಸ್ತಿ ವಿಜೇತರರು: ಜಿಲ್ಲಾ ಮಟ್ಟದಲ್ಲಿ ಹೊಸನಗರ ತಾಲೂಕಿನ ಹಾರೋಹಿತ್ಲಲು ಗ್ರಾಮದ ಸುಬ್ಬರಾವ್(ಪ್ರಥಮ), ಗಾಜನೂರಿನ ರಾಜಪ್ಪ (ದ್ವಿತೀಯ), ಭದ್ರಾವತಿಯ ದೊಣಬಘಟ್ಟದ ರಹೀಂ ಬೇಗ್(ತೃತೀಯ).
ತಾಲೂಕು ಮಟ್ಟದ ವಿಜೇತರು: ಶಿವಮೊಗ್ಗ ತಾಲೂಕು ಆಯನೂರಿನ ಎನ್. ಬಸವರಾಜ(ಪ್ರಥಮ), ತಿಮಕಾಪುರದ ವಿಜಯಲಕ್ಷ್ಮಿ(ದ್ವಿತೀಯ), ಕೂಸ್ಕೂರಿನ ಕೆ.ಪಿ. ಕೃಷ್ಣಮೂರ್ತಿ(ತೃತೀಯ).
ಭದ್ರಾವತಿ ತಾಲೂಕು: ದೊಣಬಘಟ್ಟದ ಫಜಲ್ ಬೇಗ್(ಪ್ರಥಮ), ತಟ್ಟೆಹಳ್ಳಿಯ ಮಂಜೋಜಿರಾವ್(ದ್ವಿತೀಯ), ಆನವೇರಿಯ ಮೌನೇಶಾಚಾರ್(ತೃತೀಯ)
ತೀರ್ಥಹಳ್ಳಿ ತಾಲೂಕು: ಕೀಗಡಿ ಗ್ರಾಮದ ಕೆ.ಎಂ. ಯೋಗೇಂದ್ರ(ಪ್ರಥಮ),ಸಣ್ಣಿಕೊಪ್ಪ ಗ್ರಾಮದ ಪುರುಷೋತ್ತಮ(ದ್ವಿತೀಯ), ಹಣಗೆರೆಯ ಬಂಗಾರಪ್ಪ(ತೃತೀಯ)
ಹೊಸನಗರ ತಾಲೂಕು: ಹಾರೋಹಿತ್ಲು ಎಚ್.ಎಸ್. ಸಿದ್ದಪ್ಪ(ಪ್ರಥಮ), ಆಲುವಳ್ಳಿ ಎಸ್.ವೈ. ತೇಜಸ್ವಿ(ದ್ವಿತೀಯ), ಹಾರೋಹಿತ್ಲು ಯೋಗೇಂದ್ರ(ತೃತೀಯ)
ಸೊರಬ ತಾಲೂಕು: ಅಂಡಿಗೆ ಗ್ರಾಮದ ಕೆ.ಪಿ. ಷಣ್ಮುಖಪ್ಪ(ಪ್ರಥಮ), ಮಳಲಿಕೊಪ್ಪ ಗ್ರಾಮದ ಗಣೇಶಪ್ಪ(ದ್ವಿತೀಯ), ಬಂಕವಳ್ಳಿಯ ಲಿಂಗರಾಜ ಗೌಡ(ತೃತೀಯ)
ಸಾಗರ ತಾಲೂಕು: ಹಿರೇಹಾರಕ ಗ್ರಾಮದ ಶೇಖರಪ್ಪ(ಪ್ರಥಮ), ಕಂಬಳಿಕೊಪ್ಪ ಗ್ರಾಮದ ಪರಮೇಶ್ವರ(ದ್ವಿತೀಯ), ಬರೂರು ಗ್ರಾಮದ ಲಿಂಗರಾಜು(ತೃತೀಯ)
ಶಿಕಾರಿಪುರ ತಾಲೂಕು: ಕೋಡಿಕೊಪ್ಪದ ಪ್ರಭುದೇವ(ಪ್ರಥಮ),ಮುದ್ದನಹಳ್ಳಿಯ ಪಿ.ಎಸ್. ಬಸವರಾಜಪ್ಪ(ದ್ವಿತೀಯ), ಗಾಮದ ಬಿ.ನಾಗರತ್ನ(ತೃತೀಯ).
ಈ ವೇಳೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಜಿಪಂ ಉಪಾಧ್ಯಕ್ಷೆ ಹೇಮಾಪಾವನಿ ಶ್ರೀನಿವಾಸ್, ರೈತರಿಗೆ ಬೇಕಾಗುವ ಅಗತ್ಯ ಮಾಹಿತಿ ತರಬೇತಿ ಹೋಬಳಿ ಮತ್ತು ತಾಲೂಕು ಮಟ್ಟದಲ್ಲಿ ನಡೆಯಬೇಕು ಎಂದು ಹೇಳಿದರು.
ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ.ಮಧುಸೂಧನ್, ಮಾಜಿ ಪ್ರಧಾನಿ ಚೌಧರಿ ಚರಣ್ ಸಿಂಗ್ ಅವರು ರೈತ ಸಮೂಹಕ್ಕೆ ಅಪಾರ ಕೊಡುಗೆ ನೀಡಿದ್ದಾರೆ. ರೈತರಿಗೆ ಬೆಂಬಲ ಬೆಲೆ, ಜಮೀನ್ದಾರಿ ಪದ್ಧತಿ ನಿರ್ಮೂಲನಾ ಕಾಯ್ದೆ ಜಾರಿಗೆ ತಂದು ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.
ಕೃಷಿ ಮತ್ತು ತೋಟಗಾರಿಕಾ ಸಂಶೋಧನಾ ಕೇಂದ್ರದ ಸಸ್ಯರೋಗ ಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಡಾ. ರವೀಂದ್ರ, ಕಾರ್ಯಕ್ರಮ ಸಂಯೋಜಕ ಡಾ. ಬಿ.ಸಿ. ಹನುಮಂತಸ್ವಾಮಿ, ಕೆ.ವಿ.ಕೆ. ವಿಷಯ ತಜ್ಞ (ಬೇಸಾಯ ಶಾಸ್ತ್ರ) ಡಾ. ಟಿ.ಎಂ. ಸೌಮ್ಯ, ವಿಷಯ ತಜ್ಞ ಡಾ. ಬಸವರಾಜ ಬೀರಣ್ಣವರ್, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ಡಿ.ಎಂ. ಬಸವರಾಜ್, ಸೀತಾರಾಮ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

