ಬೆದರಿಕೆ ಕರೆಯಿಂದ ಪ್ರದರ್ಶನ ರದ್ದುಗೊಳಿಸಿದ್ದು ವಿಷಾದನೀಯ
ಸಾಗರ: ಸಾಂಸ್ಕೃತಿಕ ನಗರಿ ಧಾರವಾಡದ ಸೃಜನ ರಂಗಮಂದಿರದಲ್ಲಿ ಈಚೆಗೆ ಕ್ರಿಸ್ತಕಾವ್ಯ ಕೃತಿಯ ನೃತ್ಯರೂಪಕ ಪ್ರದರ್ಶನವನ್ನು ಬೆದರಿಕೆ ಕರೆಗಳ ಹಿನ್ನೆಲೆಯಲ್ಲಿ ರದ್ದುಪಡಿಸಿರುವುದು ಅತ್ಯಂತ ವಿಷಾದನೀಯ ಎಂದು ಕೃತಿಯ ಸಂಪಾದಕ ವಿಲಿಯಂ ಹೇಳಿದ್ದಾರೆ.
ಶಿವಮೊಗ್ಗದ ಶ್ರೀವಿಜಯ ಕಲಾನಿಕೇತನದ ಡಾ.ಕೆ.ಎಸ್.ಪವಿತ್ರ ಅವರ ಮಾರ್ಗದರ್ಶನದಲ್ಲಿ ರಾಜ್ಯದ ಬೇರೆ ಕಡೆಗಳಲ್ಲಿ ನೃತ್ಯ ಪ್ರದರ್ಶನ ಏರ್ಪಡಿಸಲಾಗುತ್ತದೆ. ಧಾರವಾಡದ ನೃತ್ಯ ಪ್ರದರ್ಶನವನ್ನು ಬಲಪಂಥೀಯ ಸಂಘಟನೆಯೊಂದರ ಹೆಸರು ಹೇಳಿ ಬೆದರಿಕೆ ಕರೆಗಳು ಬಂದ ಕಾರಣ ಬೇಸರಗೊಂಡು ರದ್ದು ಮಾಡುವ ಪರಿಸ್ಥಿತಿ ನಿರ್ಮಾಣವಾಗಿರುವುದು ವಿಷಾದನೀಯ.
ಕ್ರಿಸ್ತಕಾವ್ಯವು ಒಂದು ಸಾಹಿತ್ಯ ಕೃತಿಯೆ ಹೊರತು ಧಾರ್ಮಿಕ ಕೃತಿ ಅಲ್ಲ. ಧಾರವಾಡದ ಡಾ.ಎಸ್.ಆರ್. ಗುಂಜಾಳ್, ದ.ರಾ. ಬೇಂದ್ರೆ, ಚನ್ನವೀರ ಕಣವಿ ಸೇರಿದಂತೆ ಅನೇಕರ ಕಾವ್ಯಗಳು ಕ್ರಿಸ್ತ ಕಾವ್ಯದಲ್ಲಿ ಸಂಗ್ರಹವಾಗಿವೆ. ಈ ಕೃತಿಯ ನೃತ್ಯ ಪ್ರದರ್ಶನ ಪ್ರೋತ್ಸಾಹಿಸುವ ಬದಲು ಬೆದರಿಸುವ ಮನೋಭಾವ ಖಂಡನೀಯ ಎಂದು ವಿಲಿಯಂ ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಇಂದು ಬೃಹತ್ ರಕ್ತದಾನ ಶಿಬಿರ
ಸೊರಬ: ಪಟ್ಟಣದ ಸರ್ಕಾರಿ ಪದವಿಪೂರ್ವ ಕಾಲೇಜು ಆವರಣದಲ್ಲಿ ಮಾಜಿ ಮುಖ್ಯಮಂತ್ರಿ ದಿವಂಗತ ಎಸ್ ಬಂಗಾರಪ್ಪನವರ 26ರಂದು ಎರಡನೇ ವರ್ಷದ ಪುಣ್ಯಸ್ಮರಣೆಯ ಅಂಗವಾಗಿ ಎಸ್. ಬಂಗಾರಪ್ಪ ಅಭಿಮಾನಿ ಬಳಗ ಮತ್ತು ಸೊರಬ ಲೈಫ್ ಲೈನ್, ರೆಡ್ಕ್ರಾಸ್ ಸಂಜೀವಿನಿ ರಕ್ತನಿಧಿ ಶಿವಮೊಗ್ಗ ಇವರುಗಳ ಸಂಯುಕ್ತ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವನ್ನು ಏರ್ಪಡಿಸಲಾಗಿದೆ. ರಕ್ತದಾನಿಗಳು ಬೆಳಿಗ್ಗೆ 10ರಿಂದ ಸಂಜೆ 5 ರ ವರೆಗೆ ನಡೆಯುವ ರಕ್ತದಾನ ಶಿಬಿರ ಯಶಸ್ವಿಗೊಳಿಸಬೇಕೆಂದು ಸೊರಬ ಲೈಫ್ ಲೈನ್ ಅಧ್ಯಕ್ಷರಾದ ನಾಗರಾಜ ಜೈನ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

