ಸಂಭ್ರಮದ ಕ್ರಿಸ್‌ಮಸ್ ಆಚರಣೆ
ಶಿವಮೊಗ್ಗ: ಶಾಂತಿ ಮತ್ತು ಸೌಹಾರ್ದತೆ ಪ್ರತೀಕವಾದ ಕ್ರಿಸ್‌ಮಸ್ ಹಬ್ಬವನ್ನು ಕ್ರೈಸರು ಬಾಂಧವರು ನಗರದಲ್ಲಿ ಅದ್ಧೂರಿಯಾಗಿ ಆಚರಿಸಿದರು. ನಗರದ ಎಲ್ಲಾ ಚರ್ಚ್‌ಗಳು ವಿದ್ಯುತ್ ದೀಪಾಲಂಕೃತಗೊಂಡು ಕಂಗೊಳಿಸಿದವು.
ಬೆಳಗ್ಗೆಯಂದಲೇ ಚರ್ಚ್‌ಗಳಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಕ್ಯಾಂಡಲ್ ಬೆಳಗಿಸಿ ಪರಸ್ಪರ ಶುಭಾಶಯ ಕೋರಿದರು. ಮಕ್ಕಳೆಲ್ಲರೂ ಹೊಸ ಬಟ್ಟೆ ಧರಿಸಿದರು.
ನಗರದ ಸೆಕ್ರೆಡ್ ಹಾರ್ಟ್ ಚರ್ಚ್‌ನಲ್ಲಿ ಏಸು ಕ್ರಿಸ್ತನ ಜನನ ಸ್ಥಳದ ಚಿತ್ರಣ ಬಿಂಬಿಸುವ ಕಲಾಕೃತಿ ನಿರ್ಮಾಣ ಭಕ್ತರನ್ನು ಆಕರ್ಷಿಸಿತು.
ಶರಾವತಿ ನಗರದ ಚರ್ಚ್‌ನಲ್ಲಿಯೂ ಭಕ್ತರು ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು. ಮಂಗಳವಾರ ತಡರಾತ್ರಿ 11.30ಕ್ಕೆ ಪೂಜೆ ಪ್ರಾರಂಭವಾದ್ದರಿಂದ ಫಾ. ಮಾರ್ಕ್ ಫ್ಯಾರ್ಟಿಕ್ ಡಿಸಿಲ್ವಾ ಮತ್ತು ಫಾ. ಫ್ರಾಂಕ್ಲಿನ್ ಇವರ ನೇತೃತ್ವದಲ್ಲಿ ಪ್ರವಚನ ನಡೆದವು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆದವು. ಪ್ರಚಲಿತ ವಿಷಯಗಳ ಕುರಿತು ಮಾತನಾಡಿದರು. ನಂತರ ಏಸು ದೇವನ ಕುರಿತಾದ ಹಾಡುಗಳಿಗೆ ನೃತ್ಯ ಪ್ರದರ್ಶನ ನಡೆಯಿತು.
ಎಲ್ಲಾ ಧರ್ಮದ ಸಂದೇಶ ಒಂದೇ
ಜೋಗ್ ಫಾಲ್ಸ್: ಎಲ್ಲಾ ಧರ್ಮಗಳ ಸಂದೇಶ ಒಂದೇ. ಸಮಾಜದಲ್ಲಿ ಎಲ್ಲರೂ ತಮ್ಮ ಧರ್ಮಗಳನ್ನು ನಿಷ್ಠೆಯಿಂದ ಪಾಲಿಸಿದಾಗ ಮಾತ್ರ ಶಾಂತಿ- ನೆಮ್ಮದಿ ನೆಲೆಸಲು ಸಾಧ್ಯ ಎಂದು ಜೋಗ ಕ್ರಿಸ್ತರಾಜರ ದೇವಾಲಯದ ಧರ್ಮಗುರು ಫಾದರ್ ಸ್ಟಿಫನ್ ಅಲ್ಬುಕರ್ಕ್ ತಿಳಿಸಿದರು. ಇಲ್ಲಿನ ಕ್ರಿಸ್ತರಾಜರ ದೇವಾಲಯದಲ್ಲಿ ಕ್ರಿಸ್‌ಮಸ್ ಅಂಗವಾಗಿ ಭಕ್ತಾದಿಗಳಿಗೆ ಪ್ರವಚನ ನೀಡಿ ಮಾತನಾಡಿದರು. ಮನುಷ್ಯ ತನ್ನ ಸ್ವಾರ್ಥ ಜೀವನಕ್ಕಾಗಿ ವಾಮ ಮಾರ್ಗದಲ್ಲಿ ಹಣ ಸಂಪಾದಿಸುವ ಹಾದಿ ತುಳಿದಿದ್ದು, ಐಶಾರಾಮಿ ಜೀವನಕ್ಕಾಗಿ ಹಾತೊರೆಯುತ್ತಿದ್ದಾನೆ. ಧರ್ಮ ಮಾರ್ಗದಲ್ಲಿ ದುಡಿದು ಅದರಲ್ಲಿ ಸ್ವಲ್ಪ ಭಾಗವನ್ನಾದರೂ ಬಡವರಿಗೆ- ದೀನ ದಲಿತರಿಗೆ ದಾನ ಮಾಡುವುದರಿಂದ ಮನಶ್ಶಾಂತಿ ಪಡೆಯಬಹುದು ಎಂದು ತಿಳಿಸಿದರು.
ನೂರಾರು ಮಂದಿ ಕ್ರೈಸ್ತರು ಕ್ರಿಸ್‌ಮಸ್ ಹಬ್ಬದ ಪ್ರಾರ್ಥನೆ ಸಲ್ಲಿಸಿ, ಶುಭಾಶಯ ವಿನಿಮಯ ಮಾಡಿಕೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

