ಆಟದ ಮೈದಾನದಲ್ಲಿ ಕಟಾವು ಯಂತ್ರ...!
ಶಿರಾಳಕೊಪ್ಪ: ಶಾಲಾ ವಿದ್ಯಾರ್ಥಿಗಳು ಆಟವಾಡುವ ಕ್ರೀಡಾಂಗಣ ಬತ್ತ ಕಟಾವು ಮಾಡುವ ದೈತ್ಯ ವಾಹನಗಳ ನಿಲುಗಡೆಗೆ ಬ ್ಥಳಸಲಾಗಿದ್ದು, ಅಲ್ಲಿಯೇ ವಾಹನ ರಿಪೇರಿಯೂ ಮಾಡಲಾಗುತ್ತಿದೆ. ಹೀಗಾಗಿ ಕ್ರೀಡಾಂಗಣ ಸಂಪೂರ್ಣ ಉಪಯೋಗಕ್ಕೆ ಬಾರದಂತಾಗಿದೆ.
ಶಿರಾಳಕೊಪ್ಪ ಇಂದಿರಾಗಾಂಧಿ ಕ್ರೀಡಾಂಗಣವೇ ಈ ರೀತಿಯ ವಾಹನ ನಿಲ್ದಾಣದ ಸ್ಥಳವಾಗಿದೆ. ಇದು ಹೆಸರಿಗೆ ಮಾತ್ರ ಸರ್ಕಾರಿ ಹಿರಿಯ ಪ್ರಾಥಮಿಕ ಗಂಡುಮಕ್ಕಳ ಶಾಲಾ ಆವರಣ. ಆದರೆ ಈ ಕ್ರೀಡಾಂಗಣವನ್ನು ನೋಡುವವರೇ ಇಲ್ಲದಂತಾಗಿದೆ.
ಲಕ್ಷಾಂತರ ರು. ವೆಚ್ಚ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಜಿಲ್ಲಾ ಹೌಸಿಂಗ್ ಬೋರ್ಡ್ ಆಶ್ರಯದಲ್ಲಿ ಕ್ರೀಡಾಂಗಣ ಅಭಿವೃದ್ಧಿ ಮಾಡಲು ಹೇಳಿದ್ದರೂ, ಆ ಕಾರ್ಯವನ್ನು ಇಲಾಖೆ ಸರಿಯಾಗಿ ಕಾರ್ಯನಿರ್ವಹಿಸದೇ ಹಾಗೆಯೇ ಯುವಜನ ಕ್ರೀಡಾ ಇಲಾಖೆಗೆ ಹಸ್ತಾಂತರ ಮಾಡಿದ್ದಾಗಿ ತಿಳಿದುಬಂದಿದೆ.
ನಾಲ್ಕುನೂರು ಮೀಟರ್ ಟ್ರ್ಯಾಕ್ ಮಾಡಬೇಕು ಎಂದು ತಿಳಿಸಿದ್ದರೂ, ಇಲಾಖೆ ಬೇಜವಾಬ್ದಾರಿಯಿಂದ ಎರಡು ನೂರು ಮೀಟರ್ ಮಾತ್ರ ನಿರ್ಮಿಸಿ, ಇಡೀ ಕ್ರೀಡಾಂಗಣ ಹಾಳು ಮಾಡಿದ ಸಂಗತಿಯನ್ನು ಆಗ ಪಪಂ ಸದಸ್ಯರು, ಇತರರು ಸಂಸದ ಬಿ.ವೈ. ರಾಘವೇಂದ್ರ ಅವರ ಗಮನಕ್ಕೆ ತಂದಿದ್ದರು.
ಅನೈತಿಕ ಚಟುವಟಿಕೆ: ಆದರೆ ಯುವಜನ ಕ್ರೀಡಾ ಇಲಾಖೆ ಈವರೆಗೆ ಯಾರಿಗೂ ಹಸ್ತಾಂತರ ಮಾಡದೇ ಇರುವುದರಿಂದ ಇಂದು ಕ್ರೀಡಾಂಗಣ ದೊಡ್ಡ ದೊಡ್ಡ ವಾಹನ ನಿಲುಗಡೆ ಸ್ಥಳ ಹಾಗೂ ಅಲೆಮಾರಿ ವಾಸಸ್ಥಾನ ಹಾಗೂ ಅನೈತಿಕ ಚಟುವಟಿಕೆ ಸ್ಥಳವಾಗಿ ಪರಿಣಮಿಸಿದೆ.
ಪಟ್ಟಣದ ಹಲವಾರು ಕಾರ್ಯಕ್ರಮ ನಡೆಯುವುದು ಇದೇ ಕ್ರೀಡಾಂಗಣದಲ್ಲಿ,ಸ್ವಾತಂತ್ರ ದಿನಾಚರಣೆ ಹಾಗು ತಾಲ್ಲೂಕ ಮಟ್ಟದ ಕ್ರೀಡಾ ಕೂಟ ಇತರ ಕಾರ್ಯಕ್ರಮ ನಡೆಯುವ ಸಂಧರ್ಪದಲ್ಲಿ ಪಪಂ ಸಿಬ್ಬಂದಿ ಹೋಗಿ ಕ್ರೀಡಾಂಗಣ ವನ್ನು ಸರಿಪಡಿಸಬೇಕಾಗುತ್ತದೆ.
-ಬಿ.ವಿ. ಶೇಷಗಿರಿ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

