ಕುಪ್ಪಳಿಯಲ್ಲಿ ಕುವೆಂಪು ಹುಟ್ಟಹುಬ್ಬ: ಪುಷ್ಪನಮನ
ಕುವೆಂಪು ಹುಟ್ಟುಹಬ್ಬದ ಹಿನ್ನೆಲೆ ರಾಜ್ಯದ ಮೂಲೆ ಮೂಲೆಯಿಂದ ಕುಪ್ಪಳಿಗೆ ಬಂದಿದ್ದ ಅಭಿಮಾನಿಗಳು, ಸಾಹಿತ್ಯಾಭಿಮಾನಿಗಳು ಕವಿಶೈಲದಲ್ಲಿ ಕುವೆಂಪು ಸಮಾಧಿಗೆ ಪುಷ್ಪನಮನ ಸಲ್ಲಿಸಿದರು. ಹಾಗೆಯೇ ಕುವೆಂಪು ಮನೆಯಲ್ಲಿ ಓಡಾಡಿ ಸಂಭ್ರಮಿಸಿದರು. ಅದೇ ರೀತಿ ಸಾಹಿತಿಗಳು, ಕಲಾವಿದರೂ ಅಲ್ಲಿ ಕಾಣಿಸಿಕೊಂಡರು.
ಮುಂಜಾನೆ ಮಲೆಯಾಳಂ ಕವಿ ಪ್ರೊ. ಸಚ್ಚಿದಾನಂದನ್, ಸಚಿವ ಕಿಮ್ಮನೆ ರತ್ನಾಕರ್, ಪ್ರತಿಷ್ಠಾನದ ಅಧ್ಯಕ್ಷ ಹಂ.ಪ. ನಾಗರಾಜಯ್ಯ ಮತ್ತಿತರರು ಪುಷ್ಪನಮನ ಸಲ್ಲಿಸಿದರು. ಶಾಲಾ ವಿದ್ಯಾರ್ಥಿಗಳು ಕುವೆಂಪು ಗೀತೆಗಳನ್ನು ಹಾಡಿದರು.
ವಿಚಾರ ಮಂಥನ: ಕುವೆಂಪು ಹುಟ್ಟಹಬ್ಬದ ಅಂಗವಾಗಿ ಸಾಹಿತ್ಯ ಗೋಷ್ಠಿ ಆಯೋಜನೆಗೊಂಡಿತ್ತು. ಕುವೆಂಪು ರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ ಮಲಯಾಳಂ ಸಾಹಿತಿ ಕೆ.ಸಚ್ಚಿದಾನಂದನ್ ಅವರ ಸಾಹಿತ್ಯ ಪರಿಚಯವನ್ನು ಹಂಪಿ ಕನ್ನಡ ವಿವಿ ಪ್ರಾಧ್ಯಾಪಕ ವಿಚಾರ ಮಂಡಿಸಿದರೆ, ಕುವೆಂಪು ಅವರ ವೈಚಾರಿಕ ಆಯಾಮ ಕುರಿತು ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮಕುಮಾರ್ ವಿಚಾರ ಮಂಡನೆ ಮಾಡಿದರು. ಗೋಷ್ಠಿಯನ್ನು ಕನ್ನಡ ವಿವಿ ಕುಲಪತಿ ಪ್ರೊ.ಹೀ.ಚಿ.ಬೋರಲಿಂಗಯ್ಯ ವಹಿಸಿದ್ದರು. ಸಂಜೆ ಕುವೆಂಪು ವಿರಚಿತ 'ಶೂದ್ರ ತಪಸ್ವಿ' ನಾಟಕವನ್ನು ರಂಗಾಯಣ ತಂಡ ಪ್ರಸ್ತುತಪಡಿಸಿತು. ಪ್ರತಿಷ್ಠಾನವು ಕುವೆಂಪು ಅವರಿರುವ ವಿಶೇಷ ಫೋಟೋಗಳನ್ನು ಪ್ರದರ್ಶಿಸಿತ್ತು. ಜಯಚಾಮರಾಜೇಂದ್ರ ಒಡೆಯರ್ ಅವರೊಂದಿಗಿನ ಫೋಟೋ ಸೇರಿದಂತೆ ಮುಖ್ಯಮಂತ್ರಿಗಳಾದ ಬಿ.ಡಿ. ಜತ್ತಿ, ಅರಸು, ಕಡಿದಾಳು ಮಂಜಪ್ಪ, ಗುಂಡೂರಾವ್, ರಾಮಕೃಷ್ಣ ಹೆಗಡೆ, ಬಂಗಾರಪ್ಪ ಸೇರಿದಂತೆ ವಿವಿಧ ಮುಖ್ಯಮಂತ್ರಿಗಳೊಂದಿಗಿನ ಅಪರೂಪದ ಫೋಟೋಗಳು ಸಭಾಂಗಣದಲ್ಲಿ ಎಲ್ಲರ ಗಮನ ಸೆಳೆಯುತ್ತಿತ್ತು.
ನಿರಾಸೆ ತಂದ ಸಿಎಂ ಗೈರು
ಕುವೆಂಪು ಹೆಸರಿನಲ್ಲಿ ಇದೇ ಪ್ರಥಮ ಬಾರಿಗೆ ರಾಷ್ಟ್ರಕವಿ ಕುವೆಂಪು ಪ್ರತಿಷ್ಠಾನ ನೀಡುತ್ತಿರುವ ಅತಿ ಶ್ರೇಷ್ಠ ಪ್ರಶಸ್ತಿಯನ್ನು ನೀಡಲು ಮುಖ್ಯಮಂತ್ರಿ ಸಿದ್ಧರಾಮಯ್ಯ ಹಾಜರಿರಬೇಕಿತ್ತು. ಸಿಎಂ ಕಾರ್ಯಕ್ರಮಕ್ಕೆ ಎಲ್ಲಾ ಸಿದ್ಧತೆ ನಡೆದಿತ್ತು. ಆದರೆ, ಕೊನೆ ಹಂತದಲ್ಲಿ ಸಿದ್ದರಾಮಯ್ಯ ಕೈ ಕೊಟ್ಟಿದ್ದು ಸಾಹಿತ್ಯ ಪ್ರೇಮಿಗಳನ್ನೂ ನಿರಾಸೆಗೊಳಿಸಿತು. ಪ್ರತಿಷ್ಠಾನದ ಸಮ ಕಾರ್ಯದರ್ಶಿ ಕಡಿದಾಳ್ ಸಮಾರಂಭದ ವೇದಿಕೆಯಲ್ಲಿ ಈ ವಿಷಯ ಪ್ರಸ್ತಾಪಿಸಿ, ಸಿದ್ದರಾಮಯ್ಯ ಬಂದು ಪ್ರಶಸ್ತಿ ವಿತರಿಸಿದ್ದರೆ ಅದೊಂದು ದಾಖಲೆಯಾಗುತ್ತಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

