ಸರ್ಕಾರಿ ಬಸ್ ಸೇವೆ ಕಲ್ಪಿಸಿ
ಶಿವಮೊಗ್ಗದಿಂದ 25 ಕಿ.ಮೀ ದೂರದಲ್ಲಿರುವ ಉಂಬ್ಳೆಬೈಲು ಗ್ರಾಮಕ್ಕೆ ಇದುವರೆಗೆ ಯಾವುದೇ ಸರ್ಕಾರಿ ಬಸ್ ಸೌಲಭ್ಯವಿಲ್ಲ. ಇಲ್ಲಿಂದ ಜನರು ಜೀವನೋಪಾಯಕ್ಕೆ, ಚಿಕಿತ್ಸೆಗಾಗಿ ಮತ್ತು ಶಾಲಾ- ಕಾಲೇಜು ವಿದ್ಯಾರ್ಥಿಗಳು ದಿನನಿತ್ಯ ನಗರಕ್ಕೆ ಪ್ರಯಾಣಿಸಬೇಕು.
ಈ ಮಾರ್ಗದಲ್ಲಿ ಸಂಚರಿಸುವ ಖಾಸಗಿ ಬಸ್ ಪ್ರಯಾಣ ದರ ದುಬಾರಿಯಾಗಿದೆ. ಬಡ ವಿದ್ಯಾರ್ಥಿಗಳಿಗೆ ಪ್ರಯಾಣಿಸಲು ಕಷ್ಟವಾಗಿದೆ. ಇದರಿಂದ ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸುವ ಬದಲು ಕೂಲಿ ಕೆಲಸಕ್ಕೆ ಕಳುಹಿಸುತ್ತಾರೆ. ಈ ಬಗ್ಗೆ ಹಿಂದೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. ಜಿಲ್ಲಾಡಳಿತ ಸೂಕ್ತ ಸೌಲಭ್ಯ ಒದಗಿಸಬೇಕು. ಸರ್ಕಾರಿ ಬಸ್ಗಳು ಸಂಚರಿಸಲು ಅವಕಾಶ ಮಾಡಿಕೊಡಬೇಕು.
- ಸಿ.ಅನಿಲ್, ಅಧ್ಯಕ್ಷ, ಜಯಕರ್ನಾಟಕ ಸಂಘಟನೆ.
ಒಳಚರಂಡಿ ಮಾಡಿಸಿ
ನಗರದ ಬಸ್ ನಿಲ್ದಾಣದ ಬಳಿ ಇರುವ ಅಶೋಕ ಸರ್ಕ್ಲ್ನಿಂದ ಎನ್.ಟಿ. ರಸ್ತೆಯ ಬಲಭಾಗದ ಅನೇಕ ಕಡೆಗಳಲ್ಲಿ ಒಳಚರಂಡಿ ಕಾಮಗಾರಿ ಆಗಿಲ್ಲ. ಕನ್ಸರ್ವೆನ್ಸಿಗಳಲ್ಲಿ ನೀರು ನಿಂತು ದುರ್ನಾತ ಬೀರುತ್ತಿದೆ. ಸೊಳ್ಳೆ- ಹಂದಿಗಳ ವಾಸ ಸ್ಥಳವಾಗಿದೆ. ಇದರಿಂದ ಈ ಭಾಗದ ಜನರಿಗೆ ರೋಗ ಅಂಟಿಕೊಳ್ಳುವ ಭೀತಿ ಇದೆ. ಕೂಡಲೇ ಸಂಬಂಧಿಸಿದ ಅಧಿಕಾರಿಗಳು ಒಳಚಂರಡಿ ಕಾಮಗಾರಿ ಪ್ರಾರಂಭ ಮಾಡಬೇಕು. ಇಲ್ಲವಾದಲ್ಲಿ ಹೋರಾಟ ಅನಿವಾರ್ಯವಾಗಲಿದೆ.
-ಎಚ್.ಜಿ. ವಿರೂಪಾಕ್ಷ, ಅಧ್ಯಕ್ಷ, ಶಿವಮೊಗ್ಗ ನಗರದ ಎನ್.ಟಿ. ರಸ್ತೆ ನಿವಾಸಿಗಳ ಸಂಘ.
ಸ್ವಚ್ಛತೆ ಕೊರತೆ
ನಗರದ ವಿವೇಕಾನಂದ ಬಡಾವಣೆಯಲ್ಲಿ ಸ್ವಚ್ಛತೆ ಸಂಪೂರ್ಣ ನಿರ್ಲಕ್ಷಿಸಲಾಗಿದೆ. ಹಾವುಗಳು, ವಿಷಜಂತುಗಳು, ಹಂದಿಗಳು, ನಾಯಿಗಳು ಹೆಚ್ಚಾಗಿವೆ. ಇಲ್ಲಿರುವ ಖಾಲಿ ಜಾಗದಲ್ಲಿ ಬಡಾವಣೆಯ ನೇರ ಹಾಗೂ ಅಡ್ಡ ರಸ್ತೆಗಳ ಅಕ್ಕಪಕ್ಕದಲ್ಲಿ ಹಾಗೂ ಹೆಚ್ಚುವರಿ ವಿದ್ಯುತ್ ತಂತಿ ಹಾದು ಹೋಗಿರುವ ಜಾಗದಲ್ಲಿ ಪಾರ್ಥೇನಿಯಂ, ಕುರುಚಲು ಹಾಗೂ ಕಾಡುಗಿಡಗಳು ಬೆಳೆದಿವೆ. ವಿಷ ಜಂತುಗಳು, ಹಂದಿಗಳ ವಾಸಸ್ಥಳವಾಗಿದೆ. ಇಲ್ಲಿರುವ ರಾಜಕಾಲುವೆ ಕೊಳೆತು ನಾರುವುದರಿಂದ ಸೊಳ್ಳೆ, ನೊಣಗಳು ವಿಪರೀತವಾಗಿವೆ. ಇದಕ್ಕೆ ತಡೆಗೋಡೆಯು ಇಲ್ಲ. ಬಡಾವಣೆಯ ಹೆಬ್ಬಾಗಿಲಿನ 80 ಅಡಿ ರಸ್ತೆ ನೂರಾರು ಗುಂಡಿಗಳಿಂದ ತುಂಬಿದೆ. ಕುಡಿಯುವ ನೀರಿನ ಟ್ಯಾಂಕ್ ಸರಿಯಾಗಿಲ್ಲ. ಇಲ್ಲಿರುವ ಉದ್ಯಾನವನಗಳು ಅಭಿವೃದ್ಧಿ ಕಾಣದೆ ಸೊರಗುತ್ತಿವೆ. ಇಷ್ಟೆಲ್ಲ ಸಮಸ್ಯೆಗಳಿದ್ದರೂ ಚುನಾಯಿತ ಪ್ರತಿನಿಧಿಗಳಾಗಲಿ, ಅಧಿಕಾರಿಗಳಾಗಲಿ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಜಿಲ್ಲಾಡಳಿತ, ನಗರಸಭೆ ಈ ಕಡೆ ಗಮನಹರಿಸಿ ಸ್ವಚ್ಛತೆಗೆ ಒತ್ತು ನೀಡಬೇಕು.
-ಕೆ.ಈಶ್ವರಯ್ಯ, ಕಾರ್ಯದರ್ಶಿ, ಗುಡ್ಲಕ್ ಆರೈಕೆ ಕೇಂದ್ರ.
ಕಂಟೈನರ್ಗಳನ್ನು ಹಾಕಿ
ನಗರದಲ್ಲಿ ಕಸ ವಿಲೇವಾರಿ ಮಾಡಲು ಉತ್ತಮ ಕಂಟೈನರ್ಗಳನ್ನು ವ್ಯವಸ್ಥೆಗೊಳಿಸುವಂತೆ ನಾಗರಿಕರು ಒತ್ತಾಯಿಸಿದ್ದಾರೆ. ಬಹುತೇಕ ನಗರದಲ್ಲಿರುವ ಕಸದ ಕಂಟೈನರ್ಗಳು ಕಳಪೆಯಿಂದ ಕೂಡಿವೆ. ಕಂಟೈನರ್ನ 4 ಭಾಗಗಳಲ್ಲಿ ತುಕ್ಕು ಹಿಡಿದು ಹಾಳಾಗಿವೆ. ಸ್ಥಳೀಯರು ಹಾಕುವಂತಹ ಕಸದ ರಾಶಿ ರಸ್ತೆಗೆ ಬಂದು ಬೀಳುತ್ತದೆ. ಇದರೊಂದಿಗೆ ಹಂದಿಗಳ ಕಾಟ ವಿಪರೀತವಾಗಿದೆ. ಈ ರೀತಿ ಕಂಟೈನರ್ನ ಹೊರಭಾಗದಲ್ಲಿ ಬಿದ್ದಿರುವ ಕಸವನ್ನು ಎಳೆದು ರಸ್ತೆ ಮಧ್ಯಕ್ಕೆ ಬಿಸಾಡುತ್ತವೆ. ಈ ಮಾರ್ಗದಲ್ಲಿ ಸಂಚರಿಸುವಾಗ ಮೂಗುಮುಚ್ಚಿಕೊಂಡು ಹೋಗುವಂತ ಸ್ಥಿತಿ ನಿರ್ಮಾಣವಾಗಿದೆ. ಇನ್ನೂ ವಿನೋಬನಗರದ ಮಾಧವ ನೆಲೆ ಬಳಿ ಇದ್ದಂತಹ ಕಬ್ಬಿಣದ ಕಂಟೈನರ್ ತೆಗೆದು ಇದೀಗ ಸಿಮೆಂಟ್ ತೊಟ್ಟಿ ಹಾಕಿದ್ದಾರೆ. ಅದೂ ಕೂಡ ಸರಿಯಿಲ್ಲ. ಸೂಕ್ತ ಕಂಟೈನರ್ ಹಾಕುವಂತೆ ನಾಗರಿಕರು ಒತ್ತಾಯಿಸಿದ್ದಾರೆ.
- ರವಿ, ವಿನೋಬನಗರ.
ನೀರು ಪೋಲು ತಡೆಗಟ್ಟಿ
ನಗರದ ವಿನೋಬನಗರದ ಕಲ್ಲಹಳ್ಳಿಯ ನಾಗಚೌಡೇಶ್ವರಿ ದೇವಾಲಯದ ಹಿಂಭಾಗದ ನೀರಿನ ಟ್ಯಾಂಕ್ನಲ್ಲಿ ಸೋರಿಕೆ ಆಗುತ್ತಿರುವ (ಓವರ್ ಫ್ಲೋ) ನೀರು ನೇರವಾಗಿ ಮುಖ್ಯರಸ್ತೆಗೆ ಬರುತ್ತಿದೆ. ನಾಗರಿಕರಿಗೆ ರಸ್ತೆಯಲ್ಲಿ ಸಂಚರಿಸಲು ಕಷ್ಟವಾಗಿದೆ. ಟ್ಯಾಂಕ್ ನಿರ್ವಹಣೆಗೆ ನಿಯೋಜಿಸಿರುವ ಅಧಿಕಾರಿಗಳು ಕೂಡ ಸೋರಿಕೆಯಾಗುತ್ತಿರುವ ನೀರನ್ನು ತಡೆಗಟ್ಟುವ ಗೋಜಿಗೆ ಹೋಗಿಲ್ಲ. ಕೂಡಲೇ ಅಧಿಕಾರಿಗಳು ಈ ರೀತಿ ಸಾವಿರಾರು ಲೀಟರ್ ಕುಡಿಯುವ ನೀರು ಪೋಲಾಗುತ್ತಿರುವುದನ್ನು ತಡೆಗಟ್ಟಲು ಕ್ರಮ ಕೈಗೊಳ್ಳಬೇಕು.
-ಫ್ರಾನ್ಸಿಸ್ ದೇವದಾನಂ, ಸ್ಥಳೀಯ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

