10ಕ್ಕೆ ನಗರಕ್ಕೆ ಸಿಎಂ ಶೆಟ್ಟರ್
ಶಿವಮೊಗ್ಗ: 10ರಂದು ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅವರು ಶಿವಮೊಗ್ಗ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಲಿದ್ದಾರೆ.
ಶನಿವಾರ ಈ ಕುರಿತಂತೆ ಪೂರ್ವ ಭಾವಿ ಸಭೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ನಡೆದಿದ್ದು, ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮದ ರೂಪುರೇಷೆ ಕುರಿತು ಚರ್ಚೆ ನಡೆಸಿದರು. ಆಶ್ರಯ ನಿವೇಶನ ಹಂಚಿಕೆ, ನೆಹರು ರಸ್ತೆ ಸೇರಿ ಅಭಿವೃದ್ಧಿಗೊಂಡ ಪ್ರಮುಖ ರಸ್ತೆ ಉದ್ಘಾಟನೆ, ಭಾಗ್ಯಲಕ್ಷ್ಮಿ ಬಾಂಡ್ ವಿತರಣೆ ಸೇರಿದಂತೆ ವಿವಿಧ ಕಾರ್ಯಕ್ರಮ ಅಂದು ನಡೆಯುವುದಿದೆ.
ತರಾಟೆಗೆ: 10ರ ಕಾರ್ಯಕ್ರಮದ ಪೂರ್ವಭಾವಿಯಾಗಿ ನಡೆದ ಸಭೆಯಲ್ಲಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಪ್ರಸಂಗ ನಡೆಯಿತು.
600 ಮನೆ ಹಸ್ತಾಂತರಕ್ಕಾಗಿ ಇಷ್ಟರಲ್ಲೇ ಸಿದ್ಧವಾಗಬೇಕಾಗಿತ್ತು. ಆದರೆ, 274 ಮನೆ ಮಾತ್ರ ಪೂರ್ಣಗೊಂಡಿದೆ. ಈ ಕುರಿತು ಮಾಹಿತಿ ಆಲಿಸಿದ ಡಿಸಿಎಂ, ಆಶ್ರಯ ಮನೆಗಳ ಕಾಮಗಾರಿ ಪೂರ್ಣವಾಗಿ ಮುಗಿಯದ ಮೇಲೆ ಮುಖ್ಯಮಂತ್ರಿಗಳನ್ನು ಯಾಕೆ ಕರೆಸಬೇಕು. ಉದ್ಘಾಟನೆ ಯಾಕೆ ಮಾಡಿಸಬೇಕು. ಎಂದು ಸಿಡಿಮಿಡಿಗೊಂಡರು.
ಪೂರ್ಣಗೊಂಡಿರುವ ಮನೆಗಳಲ್ಲಿ ನೀರು, ವಿದ್ಯುತ್ ಸೇರಿದಂತೆ ಮೂಲ ಸೌಕರ್ಯದ ವ್ಯವಸ್ಥೆ ಆಗಿದೆಯಾ ಎಂದು ಡಿಸಿಎಂ ಇದೇ ಸಂದರ್ಭದಲ್ಲಿ ಪ್ರಶ್ನಿಸಿದರು. ಈ ಸಂದರ್ಭದಲ್ಲಿ ಆಶ್ರಯ ಸಮಿತಿ ಅಧ್ಯಕ್ಷ ಅನಂತ ಶಾಸ್ತ್ರಿ ವಿವರಣೆ ನೀಡಿ, ಯಾವುದೂ ಪೂರ್ಣಗೊಂಡಿಲ್ಲ. ಹಲವು ಸಮಸ್ಯೆಗಳಿವೆ ಎಂದರು. ಇದರಿಂದ ಕೆಲಕಾಲ ಕೋಪಗೊಂಡ ಈಶ್ವರಪ್ಪ, ಬಡವರಿಗೆ ಮನೆ ಹಂಚಲು ನಿರ್ಧರಿಸಿದ್ದೇವೆ. ಈ ರೀತಿಯ ಕಾಮಗಾರಿ ಮನೆಗಳನ್ನು ನೀಡಿದರೆ ಜನ ಎನೆನ್ನುತ್ತಾರೆ. ಸಿಎಂ ಬಂದಾಗ ಪ್ರತಿಷ್ಟೆಗೆ ಮನೆಗಳನ್ನು ನೀಡುವುದು ಎಷ್ಟು ಸರಿ. ಮೂಲಸೌಕರ್ಯವಿಲ್ಲದ ಮನೆಗಳನ್ನು ನೀಡೋದಾದರೂ ಹೇಗೆ ಎಂದು ಪ್ರಶ್ನಿಸಿದರು.
ನಂತರ ಮುಖ್ಯಮಂತ್ರಿಗಳು ಆಗಮಿಸುವ ದಿನ 275 ಮನೆಗಳನ್ನು ಹಸ್ತಾಂತರಿಸಲು ಸಿದ್ಧತೆ ಮಾಡಬೇಕು. ಈ ಬಗ್ಗೆ ಸಮಸ್ಯೆ ಇದ್ದರೆ ಖುದ್ದಾಗಿ ನನನ್ನು ಕಾಣಿ ಎಂದು ಜಿಲ್ಲಾಕಾರಿಗಳಿಗೆ ಸೂಚಿಸಿದರು.
ಉದ್ಘಾಟನಾ ಆಹ್ವಾನ ಪತ್ರಿಕೆಯಲ್ಲಿ ಆಯಾ ಇಲಾಖೆಗೆ ಸಂಬಂಧಪಟ್ಟ ಸಚಿವರ ಹೆಸರನ್ನು ಹಾಕಬೇಕು. ಅವರನ್ನು ಖುದ್ದಾಗಿ ಇಲಾಖಾ ಅಧಿಕಾರಿಗಳೇ ಆಹ್ವಾನಿಸಬೇಕು ಎಂದರು.
ಸಭೆಯಲ್ಲಿ ರಾಜ್ಯಸಭಾ ಸದಸ್ಯ ಆಯನೂರು ಮಂಜುನಾಥ್, ಶಾಸಕ ಕೆ.ಜಿ. ಕುಮಾರಸ್ವಾಮಿ, ಕಾಡಾ ಅಧ್ಯಕ್ಷ ಗಿರೀಶ್ ಪಟೇಲ್, ಜಿಲ್ಲಾಕಾರಿ ವೇದಮೂರ್ತಿ, ಅಪರ ಜಿಲ್ಲಾಕಾರಿ ಶ್ರೀರಂಗಯ್ಯ, ಸೂಡಾ ಅಧ್ಯಕ್ಷ ದತ್ತಾತ್ರಿ, ಜಿಲ್ಲಾ ರಕ್ಷಣಾಕಾರಿ ಕೌಶಲೇಂದ್ರಕುಮಾರ್ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

