ಶಿವಮೊಗ್ಗ

ಇಂದಿನಿಂದ ಸಿಂಗಾರೆವ್ವ ಮತ್ತು ಅರಮನಿ ನಾಟಕ ಪ್ರದರ್ಶನ

Published On :

ಶಿವಮೊಗ್ಗ: ಫೆ.16 ಮತ್ತು 17ರಂದು ಕುವೆಂಪು ರಂಗಮಂದಿರದಲ್ಲಿ ಸಾಹಿತಿ ಚಂದ್ರಶೇಖರ ಕಂಬಾರ ವಿರಚಿತ ಸಿಂಗಾರೆವ್ವ ಮತ್ತು ಅರಮನಿ ನಾಟಕ ಪ್ರದರ್ಶನ ಕಾಣಲಿದೆ.
ಸಹ್ಯಾದ್ರಿ ರಂಗತರಂಗ ಸಂಸ್ಥೆ ರಜತ ಮಹೋತ್ಸವದ ಸಂಭ್ರಮದ ಹಿನ್ನೆಲೆಯಲ್ಲಿ ಈ ಪ್ರದರ್ಶನ ಆಯೋಜಿಸಲಾಗಿದೆ ಎಂದು ಸಹ್ಯಾದ್ರಿ ರಂಗತರಂಗದ ಮುಖ್ಯಸ್ಥ ಕಾಂತೇಶ್ ಕದರಮಂಡಲಗಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಮೂಲ ಕೃತಿಗೆ ಧಕ್ಕೆಯಾಗದಂತೆ ಕೃತಿಯನ್ನು ನಾಟಕ ರೂಪಾಂತರಗೊಳಿಸಲಾಗಿದೆ. ಸಿಂಗಾರೆವ್ವ ನಾಟಕ ಮಹಿಳೆಯ ಬದುಕಿನ ಏರುಪೇರನ್ನು ತಿಳಿಸುತ್ತದೆ. ಅದೊಂದು ಸಾಹಸಯಾತ್ರೆ, ಬದುಕಿನಲ್ಲಿ ಎದುರಾಗುವ ಸಂದರ್ಭಗಳು ಕಂದಾಚಾರ, ಯಾತನೆಗಳ ಸಹಿಸುವ ಮತ್ತು ಪ್ರತಿಭಟಿಸುವ ವಿಷಯವಸ್ತು ಅದರಲ್ಲಿದೆ ಎಂದರು.
ನಾಟಕದ ಎರಡು ಪ್ರದರ್ಶನ ಕುವೆಂಪು ರಂಗಮಂದಿರದಲ್ಲಿ ಪ್ರತಿ ದಿನ ಸಂಜೆ 6-30ಕ್ಕೆ ನಡೆಯಲಿದೆ. ಪ್ರವೇಶ ಶುಲ್ಕ 20 ನಿಗದಿಪಡಿಸಲಾಗಿದೆ.
ಸಹ್ಯಾದ್ರಿ ರಂಗತರಂಗ ಆರಂಭವಾಗಿ 25 ವರ್ಷಗಳು ತುಂಬಿದೆ. ನಮ್ಮ ಸಂಸ್ಥೆ ಸಮಾಜಿಕ ಕಳಕಳಿವುಳ್ಳ ಮತ್ತು ಮಾನವೀಯ ಮೌಲ್ಯ ಎತ್ತಿ ಹಿಡಿಯುವ ನಾಟಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದೆ ಎಂದರು.
ಇದರ ಜೊತೆಗೆ ಯುವ ಪ್ರತಿಭೆಗಳನ್ನು ಗುರುತಿಸಿ ಪ್ರೋತ್ಸಾಹ ನೀಡುತ್ತಿದೆ, ಗುಣಮುಖ, ಸಂಕ್ರಾಂತಿ, ದೇವರ ಹೆಣ, ಜ್ಯೂಲಿಯಸ್ ಸೀಜರ್, ಸೂರ್ಯಶಿಕಾರಿ, ರಾವಿ ನದಿಯ ದಂಡೆಯಲ್ಲಿ ಹೀಗೆ ವಿವಿಧ ನಾಟಕಗಳ ಪ್ರದರ್ಶನ ನೀಡಿದ್ದೇ ಎಂದು ವಿವರಿಸಿದರು.
ಹೊರ ರಾಜ್ಯಗಳಲ್ಲಿ ಪ್ರದರ್ಶನ: ಶಿವಮೊಗ್ಗವಲ್ಲದೆ ಹೊರ ಜಿಲ್ಲೆ ಮತ್ತು ಹೊರ ರಾಜ್ಯಗಳಲ್ಲಿ ಪ್ರದರ್ಶನ ನೀಡಿದ್ದೇವೆ. ಶ್ರೇಷ್ಠ ನಿರ್ದೇಶಕ, ನಟ, ನಟಿ, ಪೋಷಕ ನಟ, ರಂಗಸಜ್ಜಿಕೆ ಹೀಗೆ ಅನೇಕ ವಿಭಾಗಗಳಲ್ಲಿ ಪ್ರಶಸ್ತಿ ಪಡೆದಿದ್ದೇವೆ ಎಂದು ಹೇಳಿದ ಅವರು ಒಟ್ಟಾರೆ ರಂಗಭೂಮಿಯ ಉಳಿವಿಗೆ ಮತ್ತು ಬೆಳವಣಿಗೆಗೆ ನಮ್ಮ ತಂಡ ಸಾಕಷ್ಟು ಶ್ರಮಿಸಿದೆ ಎಂದರು.
ರಂಗ ಸಂಗೀತ ಶಿಬಿರ ಹಾಗೂ ಶಾಲಾ ಮಕ್ಕಳಿಗೆ ರಂಗ ತರಬೇತಿ ಶಿಬಿರ ಹಮ್ಮಿಕೊಳ್ಳಲಾಗುವುದು. ಶಿಕ್ಷಣದಲ್ಲಿ ರಂಗ ಶಿಕ್ಷಣ ಅಳವಡಿಸುವ ಬಗ್ಗೆ ಸದಾಚಿಂತನೆ ನಡೆಸುತ್ತಾ ಬಂದಿದ್ದೇವೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.