ಸೂರ್ಯನೆಲ್ಲಿ ಪ್ರಕರಣದ ಅಪರಾಧಿ ಧರ್ಮರಾಜನ್ ಸಾಗರದಲ್ಲಿ ಸೆರೆ
ಕನ್ನಡಪ್ರಭ ವಾರ್ತೆ, ಶಿವಮೊಗ್ಗ, ಫೆ.15
ರಾಷ್ಟ್ರಾದ್ಯಂತ ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಸೂರ್ಯನೆಲ್ಲಿ ಸಾಮೂಹಿಕ ಅತ್ಯಾಚಾರ ಪ್ರಕರಣದ ಪ್ರಮುಖ ಅಪರಾಧಿ ಧರ್ಮರಾಜ್ನನ್ನು ಸಾಗರ ಪಟ್ಟಣದಲ್ಲಿ ಗುರುವಾರ ರಾತ್ರಿ ಕೇರಳ ಪೋಲೀಸರು ಬಂಧಿಸಿ, ಕೇರಳಕ್ಕೆ ಕರೆದುಕೊಂಡು ಹೋಗಿದ್ದಾರೆ.
ಖಚಿತ ಮಾಹಿತಿ ಆಧರಿಸಿ ಕೇರಳ ಪೊಲೀಸರ ವಿಶೇಷ ತಂಡ ಗುರುವಾರ ರಾತ್ರಿಯೇ ಸಾಗರಕ್ಕೆ ಬಂದು, ಲಾಡ್ಜ್ವೊಂದರಲ್ಲಿ ತಂಗಿದ್ದ ಧರ್ಮರಾಜನ್ನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ.
ಕೇರಳ ಪೊಲೀಸರು ತಮ್ಮ ಆಗಮನದ ಮಾಹಿತಿಯನ್ನು ಸ್ಥಳೀಯ ಪೊಲೀಸರಿಗೆ ನೀಡಿದ್ದರಲ್ಲದೇ, ಅಗತ್ಯಬಿದ್ದರೆ ನೆರವು ಪಡೆಯುವುದಾಗಿಯೂ ತಿಳಿಸಿದ್ದರು. ತಲೆ ತಪ್ಪಿಸಿಕೊಂಡಿದ್ದ ಧರ್ಮರಾಜನ್ ಬೇಟೆಗೆ ಪೊಲೀಸರು ಆತ ಬಳಸುವ ಮೊಬೈಲ್ಗಳ ಜಾಡು ಹಿಡಿದು ಸಾಗರ್ವರೆಗೂ ಬಂದಿದ್ದರು ಎಂದು ಮೂಲಗಳು ಹೇಳಿವೆ.
ಮಾಹಿತಿ ಇಲ್ಲ-ಎಸ್ಪಿ: ಸಾಗರಕ್ಕೆ ಬರುವಾಗ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದ ಕೇರಳ ಪೊಲೀಸರ ತಂಡ, ಧರ್ಮರಾಜನ್ನನ್ನು ಬಂಧಿಸಿ ವಾಪಸ್ ಕರೆದುಕೊಂಡ ಹೋದ ಬಗ್ಗೆ ತಿಳಿಸಿಲ್ಲ. ಬಂಧನವಾಗಿರುವುದು ನನಹೆ ಗೊತ್ತಿಲ್ಲ ಎಂದು ಶಿವಮೊಗ್ಗ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೌಶಲೇಂದ್ರಕುಮಾರ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.
ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣದ ವಿಚಾರಣೆ ನಡೆಯುತ್ತಿರುವಾಗಲೇ ಧರ್ಮರಾಜನ್ ಕೇರಳದಿಂದ ತಪ್ಪಿಸಿಕೊಂಡು ಉಡುಪಿಗೆ ಬಂದಿದ್ದ. ಆಗ ಆತನನ್ನು ಬಂಧಿಸಲಾಗಿತ್ತು. ನಂತರ ವಿಚಾರಣೆ ನಡೆದು ತೀರ್ಪು ಹೊರ ಬಿದ್ದ ಬಳಿಕ ಧರ್ಮರಾಜನ್ಗೆ ಶಿಕ್ಷೆ ವಿಧಿಸಲಾಗಿತ್ತು. ಆದರೆ, 2005ರಲ್ಲಿ ಪೆರೋಲ್ ಮೇಲೆ ಹೊರಗೆ ಬಂದಿದ್ದ ಧರ್ಮರಾಜನ್ ಮತ್ತೆ ಕೇರಳದಿಂದ ತಪ್ಪಿಸಿಕೊಂಡಿದ್ದ. ಇತ್ತೀಚೆಗಷ್ಟೇ ಮೈಸೂರಿನ ರಹಸ್ಯ ಸ್ಥಳವೊಂದರಿಂದ ಮಲಯಾಳಂ ಸುದ್ದಿವಾಹಿನಿಗೆ ಸಂದರ್ಶನ ನೀಡಿ, ಸೂರ್ಯನೆಲ್ಲಿ ಅತ್ಯಾಚಾರ ಪ್ರಕರಣದಲ್ಲಿ ರಾಜ್ಯಸಭೆಯ ಉಪಸಭಾಪತಿ ಪಿ.ಜೆ.ಕುರಿಯನ್ ಭಾಗಿಯಾಗಿದ್ದಾರೆ ಎಂದು ಹೇಳಿ, ರಾಜಕೀಯ ತಳಮಳಕ್ಕೆ ಕಾರಣನಾಗಿದ್ದ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

