ನೇಣು ಬಿಗಿದುಕೊಂಡು ಮಹಿಳೆ ಆತ್ಮಹತ್ಯೆ
ಭದ್ರಾವತಿ: ದೊಣಬಘಟ್ಟೆ ಮಹಿಳೆಯೊಬ್ಬರು ತನ್ನ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಯಾಸ್ಮಿನ್ಬಾನು (32) ಮೃತ ಮಹಿಳೆ. ಆಕೆಯ ಗಂಡ ಮಹಮದ್ ಖಾನ್ ಯಾವಾಗಲೂ ಕುಡಿದು ಬರುತ್ತಿದ್ದು, ಸಂಸಾರದ ಕಡೆ ಗಮನ ಕೊಡದಿದ್ದರಿಂದ ಬೇಸತ್ತು ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆಂದು ಮೂಲಗಳು ತಿಳಿಸಿವೆ. ಭದ್ರಾವತಿ ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಜೂಜು: 7 ಮಂದಿ ಬಂಧನ
ವೀರಾಪುರ ಗ್ರಾಮದಲ್ಲಿ ಇಸ್ಪೀಟ್ ಆಡುಗಿದ್ದ ವೀರಾಪುರ ಗ್ರಾಮದ ರಾಮಲಿಂಗ, ವೀರಾಪುರ ಗ್ರಾಮದ ಫಯಾಜ್, ವೀರಾಪುರ ಗ್ರಾಮದ ಚಂದ್ರಪ್ಪ, ಶ್ರೀರಾಮನಗರದ ನಾರಾಯಣ, ವೀರಾಪುರದ ಜಾವಿದ್, ದೇವರಹಳ್ಳಿ ಗ್ರಾಮದ ಶಿವಣ್ಣ, ವೀರಾಪುರ ಗ್ರಾಮದ ರಾಮನಾಯ್ಕ ಮತ್ತು ವೀರಾಪುರ ಗ್ರಾಮದ ಸಣ್ಣೇಗೌಡ ಏಳು ಜನರನ್ನು ಬಂಧಿಸಿ ಇಸ್ಪೀಟ್ ಆಟಕ್ಕೆ ಬಳಸಿದ್ದ ಎಲೆಗಳು ಮತ್ತು ರು. 7620 ನಗದನ್ನು ಭದ್ರಾವತಿ ಗ್ರಾಮಾಂತರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಾಲಕ ಪರಾರಿ
ಶಿವಮೊಗ್ಗ: ಇಲ್ಲಿನ ಆಲ್ಕೊಳದಲ್ಲಿರುವ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸರ್ಕಾರಿ ಬಾಲಮಂದಿರದಿಂದ ಬಾಲಕನೊಬ್ಬ ಪರಾರಿಯಾಗಿರುವ ಘಟನೆ ಬೆಳಕಿಗೆ ಬಂದಿದೆ.
ಸೊರಬ ತಾಲೂಕು ಆನವಟ್ಟಿ ಸಮೀಪದ ಕೋಟಿಪುರ ಗ್ರಾಮದ ವಾಸಿ ಆಸಿಫ್ (17) ನಾಪತ್ತೆಯಾದ ಬಾಲಕ. ಕೈ ತೊಳೆಯುವ ನೆಪದಲ್ಲಿ ಈತ ರಕ್ಷಕರನ್ನು ಹಿಂದಿನಿಂದ ತಳ್ಳಿ ಸಂಸ್ಥೆಯ ಮುಖ್ಯ ದ್ವಾರದಿಂದ ತಪ್ಪಿಸಿಕೊಂಡು ಪರಾರಿಯಾಗಿದ್ದಾನೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

