ಅನುಸೂಚಿತ ಜಾತಿ ಪಟ್ಟಿಯಲ್ಲೇ ಉಳಿಸಲು ಮನವಿ
ಸಾಗರ: ರಾಷ್ಟ್ರೀಯ ಅನುಸೂಚಿತ ಜಾತಿಗಳ ಪಟ್ಟಿಯಿಂದ ಕೊರಮ ಹಾಗೂ ಕೊರಚ ಜನಾಂಗವನ್ನು ತೆಗೆದು ಹಾಕದಂತೆ ಒತ್ತಾಯಿಸಿ ಕೊರಮ, ಕೊರಚ ಕ್ಷೇಮಾಭಿವೃದ್ಧಿ ಸಂಘದಿಂದ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಲಾಯಿತು.
ರಾಜ್ಯದಲ್ಲಿ ಕೊರಮ ಮತ್ತು ಕೊರಚ ಸಮಾಜದಲ್ಲಿ ಶೇ. 10ರಷ್ಟು ಸಾಕ್ಷರರಾಗಿದ್ದಾರೆ. ಸರ್ಕಾರ ನೀಡುವ ಪಡಿತರ ಹಾಗೂ ಕೂಲಿಗಾಗಿ ಕಾಳು ಯೋಜನೆಯಿಂದ ಒಂದೊಪ್ಪತ್ತಿನ ಗಂಜಿ ಕುಡಿಯುವಂತಾಗಿದೆ.
ಆದರೆ ಈಗ ರಾಷ್ಟ್ರೀಯ ಅನುಸೂಚಿತ ಜಾತಿಗಳ ಪಟ್ಟಿಯಿಂದ ಈ ಜನಾಂಗವನ್ನು ತೆಗೆದು ಹಾಕುವ ಉದ್ದೇಶವಿರಿಸಿಕೊಂಡು ಅನುಸೂಚಿತ ಜಾತಿಗಳ ಆಯೋಗದ ಅಧ್ಯಕ್ಷ ಡಾ. ಪಿ.ಎಲ್. ಪೂನಿಯ ಹಾಗೂ ಸದಸ್ಯರು ನೀಡಿರುವ ಪ್ರಕಟಣೆ ದುರಾದೃಷ್ಟಕರವಾದದ್ದು ಎಂದು ಮನವಿಯಲ್ಲಿ ಹೇಳಲಾಗಿದೆ.
20 ಲಕ್ಷಕ್ಕೂ ಅಧಿಕ ಜನಸಂಖ್ಯೆ: ಇಂದಿಗೂ ಸಮಾಜದಲ್ಲಿ ಅಸ್ಪಶ್ಯರಾಗಿಯೆ ಉಳಿದಿರುವ ಇವರನ್ನು ತುಚ್ಛವಾಗಿ ಕಾಣುತ್ತಿರುವ ಅನೇಕ ನಿದರ್ಶನಗಳಿವೆ. 20 ಲಕ್ಷಕ್ಕೂ ಅಧಿಕ ಜನಸಂಖ್ಯೆ ಹೊಂದಿದ್ದರೂ ಸಮಾಜ ಯಾವುದೆ ರಾಜಕೀಯ ಪ್ರಾತಿನಿಧ್ಯ ಪಡೆಯದೆ ಅನಾಥರಂತೆ ಜೀವನ ನಡೆಸುತ್ತಿದೆ ಎಂದು ವಿವರಿಸಲಾಗಿದೆ.
ಶೋಚನೀಯ ಸ್ಥಿತಿಯಲ್ಲಿ ಬದುಕುತ್ತಿರುವ ಈ ಜನಾಂಗವನ್ನು ರಾಷ್ಟ್ರೀಯ ಅನುಸೂಚಿತ ಜಾತಿಗಳ ಪಟ್ಟಿಯಿಂದ ತೆಗೆದು ಹಾಕಬಾರದು. ಆಯೋಗ ಮನವಿಯನ್ನು ಪರಿಶೀಲಿಸಿ, ಜನಾಂಗವನ್ನು ಅನುಸೂಚಿತ ಪಟ್ಟಿಯಲ್ಲಿಯೆ ಉಳಿಸಬೇಕು.
ಇಲ್ಲವಾದಲ್ಲಿ ರಾಜ್ಯದಾದ್ಯಂತ ಹೋರಾಟ ಕೈಗೆತ್ತಿಕೊಳ್ಳಬೇಕಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಸಲಾಗಿದೆ. ಸಂಘದ ಅಧ್ಯಕ್ಷ ಡಾ.ಕೆ. ವಿರೂಪಾಕ್ಷಪ್ಪ, ಉಪಾಧ್ಯಕ್ಷ ನಾಗಪ್ಪ ಮುಳಗುಂದ, ಪರಮೇಶ್ವರ ದೂಗೂರು, ಲಿಂಗರಾಜ್, ನಾಗರಾಜ್, ರಾಮಚಂದ್ರ ಕೆ.ಸಿ. ನಾಗೇಂದ್ರಪ್ಪ ದೊಡ್ಮನಿ, ಮಂಜುನಾಥ, ದುರ್ಗಾನಾಯಕ್, ಸುನೀಲ್ ಮೊದಲಾದವರು ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

